ಶೀರ್ಷಿಕೆ: ರಂಗ ಚಿಂತನ – ನಾಡಿನ ಖ್ಯಾತ ರಂಗತಜ್ಞರ ರಂಗಕರ್ಮಿಗೆ ಚಿಂತನೆಗಳು; ಸಂಯೋಜನೆ: ಸಮುದಾಯ ಬೆಂಗಳೂರು; ಪ್ರಕಾಶಕರು:ಚಿಂತನ ಪುಸ್ತಕ; ಬೆಲೆ:ರೂ.250/- ಪುಟಗಳು:208 ಪ್ರಕಟಣಾ ವರ್ಷ:2023

ಪುಸ್ತಕದ ಕುರಿತು

ರಂಗಭೂಮಿಯ ಸಾಮಾಜಿಕ ಅಸ್ತಿತ್ವವನ್ನು ಉಸಿರಾಗಿಸಿಕೊಂಡು ಬಾಳಲೆಂದು ಹುಟ್ಟಿಕೊಂಡ ಸಮುದಾಯ ಸಂಘಟನೆ ಕೊರೋನಾ ಕಾಲಘಟ್ಟದಲ್ಲಿ ನಡೆಸಿದ ಚಿಂತನೆಯ ಫಲವಿದು.

ಹಿಂದಣ ಹೆಜ್ಜೆಯನರಿಯದೆ ಮುಂದಣ ಹಾದಿ ಸ್ಪಷ್ಟವಾಗದೆಂಬ ತಿಳುವಳಿಕೆಯಿಂದ ಹುಟ್ಟಿಕೊಂಡ ಈ ಸಂವಾದ ರಾಜ್ಯ, ಹೊರರಾಜ್ಯದ 60 ಜನ ಚಿಂತಕರನ್ನು ಆಹ್ವಾನಿಸಿತ್ತು. ಇಲ್ಲಿ ನಟರಿದ್ದರು, ನಿರ್ದೇಶಕರಿದ್ದರು, ಸಂಘಟಕರಿದ್ದರು, ಪ್ರೇಕ್ಷಕರಿದ್ದರು, ಸಾಂಸ್ಕೃತಿಕ ಚಿಂತಕರಿದ್ದರು. ಪ್ರತಿವಿಭಾಗದವರಿಗೂ ಪ್ರತ್ಯೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರರೂಪವಾಗಿ ಈ ಸಂವಾದ ಆರಂಭಿಸಿದೆವು. ಎಲ್ಲರೂ ಈ ಇತಿವೃತ್ತದ ಆಧಾರದಲ್ಲಿ ಮಾತನಾಡಿದ್ದಾರೆ. ಅವರ ಮಾತುಗಳನ್ನೇ ಇಲ್ಲಿ ಅಕ್ಷರರೂಪಕ್ಕಿಳಿಸಿದ್ದೇವೆ. ಮೊದಲ ಮೂವತ್ತು ಜನರ ( ಪ್ರಸನ್ನ, ಬಿ. ಜಯಶ್ರೀ, ಡಾ. ಪುರುಷೋತ್ತಮ ಬಿಳಿಮಲೆ,  ಬೇಲೂರು ರಘುನಂದನ್,  ಸಿ. ಬಸವಲಿಂಗಯ್ಯ,  ಡಾ. ಜಿ ರಾಮಕೃಷ್ಣ, ಜನಾರ್ಧನ್ (ಜನ್ನಿ), ಡಾ. ರಾಜೇಂದ್ರ ಚೆನ್ನಿ,  ಚಿದಂಬರ ರಾವ್ ಜಂಬೆ, ಕೆ.ಜಿ ಕೃಷ್ಣಮೂರ್ತಿ, ಡಾ. ಮೇಟಿ ಮಲ್ಲಿಕಾರ್ಜುನ, ಅರುಂಧತಿ ನಾಗ್, ಮಂಡ್ಯ ರಮೇಶ್, ಡಾ. ಕೆ. ವೈ. ನಾರಾಯಣಸ್ವಾಮಿ, ಐ.ಕೆ ಬೋಳುವಾರು, ಮಹದೇವ ಹಡಪದ, ಡಾ.ರಾಜಪ್ಪ ದಳವಾಯಿ, ನಟರಾಜ್ ಹೊನ್ನವಳ್ಳಿ, ಡಾ. ಬಿ.ಆರ್. ಮಂಜುನಾಥ್,  ಭಾಗೀರಥಿಬಾಯಿ ಕದಂ, ವಿಜಯ್ ವಾಮನ್, ಅಗ್ರಹಾರ ಕೃಷ್ಣಮೂರ್ತಿ, ಬಿ ಸುರೇಶ್, ಪ್ರಸಾದ್ ರಕ್ಷಿದಿ, ಚಂಪಾ ಶೆಟ್ಟಿ, ಅಭಿಷೇಕ್ ಮಜುಂದಾರ್, ಮಲ್ಲಿಕಾ ಪ್ರಸಾದ್, ಸಿದ್ಧನಗೌಡ ಪಾಟೀಲ್, ಸುರೇಶ್ ಆನಗಳ್ಳಿ, ಮಂಜು ಕೊಡಗು, ಸುಧನ್ವ ದೇಶಪಾಂಡೆ, ಎಲ್.ಎನ್. ಮುಕುಂದರಾಜ್  ಮಾತುಗಳು ಈ ಪುಸ್ತಕದಲ್ಲಿ ದಾಖಲಾಗಿವೆ.