ಹೆಚ್ಚಿನ ಚಿತ್ರಗಳಿಗಾಗಿ ಕ್ಯೂಬಾ ನೋಡಿ.

ಬೆಂಗಳೂರಿನ ಸೆನೆಟ್ ಹಾಲ್ ನಲ್ಲಿ 26-07-2009 ರಂದು ನಡೆದ ಕ್ಯೂಬಾ ಕ್ರಾಂತಿಗೆ 50 ತುಂಬಿದ ಸಂತೋಷ ಸಮಾರಂಭ, ಕ್ಯೂಬಾ ಕುರಿತಾದ ನಮ್ಮ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭವೂ ಆಗಿತ್ತು.

ಕ್ಯೂಬಾ ಸಚಿವ ಎಡ್ವರ್ರ್ಡೋಇಗ್ಲೆಸಿಯಾಸ್ ಕ್ವಿಂತಾನಾ ಅವರು ನಮ್ಮ ಪ್ರಕಾಶನದ `ಪರಿಸರ ಸ್ನೇಹಿ ಕೃಷಿ ಕ್ಯೂಬಾ ಮಾದರಿ’ ಹಾಗೂ `ಕ್ಯೂಬಾದಲ್ಲಿ ಸಮಾಜವಾದ ಮತ್ತು ಮಾನವ’ ಪುಸ್ತಕಗಳ ಬಿಡುಗಡೆಯನ್ನು ಮಾಡಿದರು. ಅಲ್ಲಿ ಕ್ಯೂಬಾದ ಕಷ್ಟ ಕಾಲದಲ್ಲಿ ಕ್ಯೂಬಾಕ್ಕೆ 10000 ಟನ್ ಗೋಧಿಯನ್ನ ಭಾರತದ ಜನತೆಯಿಂದ ಸಂಗ್ರಹಿಸಿ ಕಳುಹಿಸುವ, ಆ ಮೂಲಕ ನಮ್ಮ ಸೌಹಾರ್ದತೆಯನ್ನು ಕ್ಯೂಬಾ ಕ್ರಾಂತಿಗೆ, ಭಾರತದ ಜನತೆ ನಿಮ್ಮೊಂದಿಗಿದೆ ಎಂಬ ಸಂದೇಶ ಕಳುಹಿಸುವಲ್ಲಿ ಮಹತ್ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ  ಸಿ.ಪಿ.ಐ(ಎಂ) ಪಕ್ಷದ ರಾಷ್ಟ್ರಿಯ ಕಾರ್ಯದರ್ಶಿ ಪ್ರಕಾಶ್ ಕಾರಟ್.

ಕ್ಯೂಬಾ ಕುರಿತಾದ ಪುಸ್ತಕಗಳನ್ನು ಮಾತ್ರವಲ್ಲದೆ ಕ್ಯೂಬಾ ಕ್ರಾಂತಿಯ ಸ್ವರ್ಣ ಜಯಂತಿಯನ್ನು ನಾವು ಬೆಂಗಳೂರಿನವರು (ಭಾರತೀಯರು) ಏಕೆ ಅಚರಿಸಬೇಕು ಎಂಬ ಜಿಜ್ಞಾಸೆ ಇದ್ದವರಿಗೆ ಉತ್ತರ ಕೊಡುವಂತೆ  ಕ್ಯೂಬಾದ ಬಗ್ಗೆ ಭಿತ್ತಿಚಿತ್ರಮಾಲೆ ಪ್ರದರ್ಶನವನ್ನೂ ನಾವು ಕ್ರಿಯಾ ಪ್ರಕಾಶನದ ನೆರವಿನೊಂದಿಗೆ ಕನ್ನಡ ಜನತೆಗೆ ಅರ್ಪಿಸಿದ ಸಂತೋಷ ನಮ್ಮದು.

ಈ ಭಿತ್ತಿ ಚಿತ್ರಮಾಲೆಯನ್ನು ಪುಸ್ತಕ ಹಾಗೂ ಸಿ.ಡಿ. ರೂಪದಲ್ಲಿ ಸದ್ಯದಲ್ಲೇ ತರುವ ಯೋಜನೆಯಿದೆ.

ಕೃಪೆ: ಕ್ಯೂಬಾ