Obba Khaidi Kahe Cover

Advertisements

sam uncle

sam uncleಕೃಪೆ: ಪ್ರಜಾವಾಣಿ

ಸಾಹಿತ್ಯಕ್ಕೆ ದೇಶ ಭಾಷೆಗಳ ಸರಹದ್ದಿಲ್ಲ: ಸತ್ಯು

ಪ್ರಜಾವಾಣಿ ವಾರ್ತೆ
Mon, 06/10/2013 – 01:00

manto book release prajavani

`ಸಾಹಿತ್ಯ ಸಮುದಾಯ’ ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಸಾದತ್ ಹಸನ್ ಮಂಟೊ – ನೂರು ನೆನಪು’ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಅವರು `ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು’ ಪುಸ್ತಕವನ್ನು ಬಿಡುಗಡೆ ಮಾಡಿದರು. ಚಿಂತನ ಪುಸ್ತಕದ ವಸಂತರಾಜ್, ಉರ್ದು ಕವಿ ಮಾಹೆರ್ ಮನ್ಸೂರ್, ಲೇಖಕ ಡಾ.ಜೆ.ಬಾಲಕೃಷ್ಣ, ಪುಸ್ತಕದ ಲೇಖಕ ಹಸನ್ ನಯೀಂ ಸುರಕೋಡ ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ

ಬೆಂಗಳೂರು: `ಗಾಳಿ ಬೆಳಕಿನಂತೆ ಸಾಹಿತ್ಯಕ್ಕೂ ದೇಶ ಭಾಷೆಗಳ ಸರಹದ್ದಿಲ್ಲ. ಸಾದತ್ ಹಸನ್ ಮಂಟೊ, ದೇಶ ಭಾಷೆಗಳ ಗಡಿ ಮೀರಿದ ಕಥೆಗಾರ’ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ಹೇಳಿದರು.

`ಸಾಹಿತ್ಯ ಸಮುದಾಯ’ ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಸಾದತ್ ಹಸನ್ ಮಂಟೊ – ನೂರು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ದೇಶ ವಿಭಜನೆಯ ಸಂದರ್ಭದಲ್ಲಿ ಹೆಚ್ಚಾಗಿದ್ದ ಹಿಂಸಾಚಾರಗಳನ್ನು ಮಂಟೊ ತನ್ನ ಕಥೆಗಳಲ್ಲಿ ಹಿಡಿದಿಟ್ಟಿದ್ದಾನೆ. ಸಣ್ಣ ಕಥೆಗಳ ಮೂಲಕ ಬದುಕಿನ ಗಂಭೀರತೆಯನ್ನು ಕಟ್ಟಿಕೊಟ್ಟ ಕಥೆಗಾರ ಮಂಟೊ. ಆತನ ಕಥೆಗಳು ಕೇವಲ ಹಿಂಸಾಚಾರ ಹಾಗೂ ಕೋಮು ದಳ್ಳುರಿಯನ್ನು ಮಾತ್ರ ತೋರಿಸದೇ ಮನುಷ್ಯತ್ವದ ಸಾವನ್ನು ತಣ್ಣಗೆ ಕಟ್ಟಿಕೊಡುತ್ತವೆ. ದೇಶ ಹಾಗೂ ಭಾಷೆಯ ವಿಚಾರದಲ್ಲಿ ಗೆರೆಗಳನ್ನು ಹಾಕಿಕೊಳ್ಳದೇ ಬದುಕಿ ಬರೆದವನು ಕಥೆಗಾರ ಮಂಟೊ’ ಎಂದು ಅವರು ಅಭಿಪ್ರಾಯಪಟ್ಟರು.

`ಇತ್ತೀಚೆಗೆ ಅರ್ಥಪೂರ್ಣ ಸಿನಿಮಾಗಳು ನಿರ್ಮಾಣವಾಗುತ್ತಿಲ್ಲ. ನೈಜ ಘಟನೆಗಳನ್ನು ಆಧರಿಸಿದ, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳು ತಯಾರಾಗುತ್ತಿಲ್ಲ. ಉತ್ತಮ ಅಭಿರುಚಿಯ ಸಿನಿಮಾಗಳ ಕಡೆಗೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ಲೇಖಕ ಪ್ರೊ.ಎಸ್.ಆರ್.ರಮೇಶ್ ಮಾತನಾಡಿ, `ಮಂಟೊ ಜೀವನವಿಡೀ ಆತಂಕ ಹಾಗೂ ಡೋಲಾಯಮಾನ ಸ್ಥಿತಿಯಲ್ಲಿ ಕಳೆದವನು. ಆದರೆ, ಆತನ ಕಥೆಗಳು ನಿರ್ಲಿಪ್ತವಾಗಿ ತಾವು ಹೇಳಬೇಕಾಗಿರುವುದನ್ನು ಓದುಗನಿಗೆ ಮುಟ್ಟಿಸುತ್ತವೆ. ಮಂಟೊ ವ್ಯಕ್ತಿತ್ವಕ್ಕೂ ಆತನ ಕಥೆಗಳಿಗೂ ಸಾಕಷ್ಟು ಅಂತರವಿದೆ’ ಎಂದು ಹೇಳಿದರು.

`ಸಮುದಾಯ’ ಸಂಘಟನೆಯ ಕಾರ್ಯದರ್ಶಿ ಡಾ.ಶ್ರೀಪಾದ ಭಟ್ ಮಾತನಾಡಿ, `ಮಂಟೊ ಕಥೆಗಳಲ್ಲಿ ಮನುಷ್ಯತ್ವದ ಹುಡುಕಾಟವಿದೆ. ಆತನ ಕಥೆಗಳಲ್ಲಿ ತಣ್ಣಗೆ ಸುಡುವ ಆರ್ದ್ರತೆ ಇದೆ’ ಎಂದರು.

ಲೇಖಕ ಜಿ.ಬಾಲಕೃಷ್ಣ, `ದೇಶ ವಿಭಜನೆಯ ವಿಷಯಗಳನ್ನು ಕುರಿತ ಮಂಟೊ ಕಥೆಗಳು ಹೆಚ್ಚು ಕಾಡುತ್ತವೆ. ಸಣ್ಣ ಸಣ್ಣ ಕಥೆಗಳ ಮೂಲಕ ಗಂಭೀರ ಅರ್ಥಕ್ಕೆ ತೆರೆದುಕೊಳ್ಳುವ ಕಥೆಗಾರ ಮಂಟೊ’ ಎಂದು ಅಭಿಪ್ರಾಯಪಟ್ಟರು.

ಉರ್ದು ಕವಿ ಮಾಹೆರ್ ಮನ್ಸೂರ್ ಅವರು ಗುಲ್ಜಾರ್ ಅವರ `ತೋಬಾ ಟೇಕ್ ಸಿಂಗ್’ ಕವನವನ್ನು ವಾಚಿಸಿದರು. ನಂತರ ಸಮುದಾಯ ರಂಗ ತಂಡದ ಕಲಾವಿದರು ಮಂಟೊ ಕಥೆಗಳಾದ `ಖೋಲ್ ದೊ’, `ಠಂಡಾ ಗೋಶ್ತ್’ ಮತ್ತು `ತೋಬಾ ಟೇಕ್ ಸಿಂಗ್’ ರಂಗ ರೂಪಕಗಳನ್ನು ಪ್ರಸ್ತುತ ಪಡಿಸಿದರು. ಮೈಸೂರಿನ ಪರಿವರ್ತನ ತಂಡದ ಕಲಾವಿದರು ಮಾಂಟೊ ಕಥೆ ಆಧಾರಿಕ `ಸಾಹೆ’ ನಾಟಕವನ್ನು ಅಭಿನಯಿಸಿದರು.

ಚಿಂತನ ಪುಸ್ತಕ ಹೊರತಂದಿರುವ ಹಸನ್ ನಯೀಂ ಸುರಕೋಡ ಅವರ `ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು’ ಪುಸ್ತಕವನ್ನು ಎಂ.ಎಸ್.ಸತ್ಯು ಬಿಡುಗಡೆಗೊಳಿಸಿದರು. ಪುಸ್ತಕದ ಬೆಲೆ ರೂ.140.

manto book release vk title manto book release photo vkmanto book release photo title vkmanto book release vk 1manto book release vk 2manto book release vk 3manto book release vk 4Fond reading of Manto’s acerbic tales

Staff Reporter
The Hindhu

manto book release photo HinduStill relevant:Filmmaker M.S. Sathyu inaugurating a programme on Saadat Hasan Manto in Bangalore on Sunday.— Photo: K. Murali Kumar

The iconic works of Urdu writer Saadat Hasan Manto, known best for his acerbic short stories on post-partition India and Pakistan, came alive at the Sahitya Parishat here, where theatre artistes did a theatrical reading of a selection of his stories.

Organised by Samudaya, a progressive cultural organisation, the event included performances, talks and the release of the Kannada translation of Manto’s book, Letters to Uncle Sam , by Hasan Nayeem Surakod.

‘Knows no boundaries’

Speaking at the inaugural function on Sunday, film director M.S. Sathyu, whose film Garam Hawa also dealt with the partition, said that Manto’s messages were as relevant today as they were six decades ago. “He had an eye for suffering and pathos, which is reflected in each of his writings. And his writing, like most literature, knew no boundaries,” he said.

Criticising contemporary art and cinema, Mr. Satyu said that though there were many issues in society today, they were not being reflected in films. “It is sad that the films we get to watch do not mirror any of these concerns that people face,” he said.

Other academics and literature enthusiasts too spoke about Manto’s works. They discussed their favourite Manto short stories and his more famous works such as Toba Tek Singh , Thanda Gosht and Khol Do .

Fauzia Choudhary, Urdu professor from Bangalore who participated in the reading, said she usually did not perform but did so this time for the love of Urdu, and Manto.

“A lot of people misunderstand Manto. They fail to understand that the bitterness in his language is not of his own making, but that he merely reflects the gory realities in society. He was a realist who used his writing with passion to speak about all that is wrong around us,” he said.

manto book release - samyuktya karnatakamanto book release - udayavaani

ಹಸನ್ ನಯೀಮ್ ಸುರಕೋಡು ಸಾಹೇಬರ ಈ ಕೃತಿಗೆ ಮುನ್ನುಡಿ ಬರೆಯುವುದಕ್ಕಿಂತ ದೊಡ್ಡ ಕಿಡಿಗೇಡಿತನ ಮತ್ತೊಂದಿದ್ದರೆ ಅದು; ಈ ಪುಸ್ತಕಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ಒತ್ತಾಯಿಸಿದ್ದು.

ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ, ವಿರೋಧ ಪಕ್ಷದಲ್ಲಿದ್ದಾಗಲೆಲ್ಲ, ಯುದ್ಧ ಘೋಷಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆರ್ಭಟಿಸುವ ನಾವು, ಅಕಾಸ್ಮಾತ್ ಆಡಳಿತ ಪಕ್ಷಕ್ಕೆ ಸೇರಿಬಿಟ್ಟಿದ್ದರೆ, ಯುದ್ಧವೊಂದೇ ಪರಿಹಾರವಲ್ಲ ಎಂಬ ಶಾಂತಿ ಮಂತ್ರ ಹಾಡುತ್ತೇವೆ. ನಮ್ಮ ಈ ಸಕಾಲಿಕ ಗೋಸುಂಬೆತನಕ್ಕೂ ಸಕಾರಣಗಳಿವೆ. ಈಗೆಲ್ಲ ಯುದ್ಧ ಬಲು ದುಬಾರಿ ಕಾರ್ಯಕ್ರಮ.

ಆಧುನಿಕ ಕಾಲದ ಯುದ್ಧಗಳಲ್ಲಿ ಹಳೆಯ ಸಿನೆಮಾಗಳಲ್ಲಿರುವಂತೆ ಆನೆ-ಕುದುರೆಗಳನ್ನೇರಿ ಖಡ್ಗ ಝಳಪಿಸುತ್ತಾ, ಕೊಂಬು ಕಹಳೆಗಳನ್ನೂದಿದರೆ ವೈರಿಗಳು ಶರಣಾಗುವುದಿಲ್ಲ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಸುಮಾರು ೨೦೦ ಲಕ್ಷ ಕೋಟಿ ರೂಪಾಯಿ [ರೂ.೨೦೦೦೦೦೦೦,೦೦,೦೦,೦೦೦] ವೆಚ್ಚದಲ್ಲಿ ಅಮೇರಿಕಾ ನಡೆಸಿದ/ನಡೆಸುತ್ತಿರುವ ಪ್ರಜಾಪ್ರಭುತ್ವಕ್ಕಾಗಿ ಯುದ್ಧಗಳು ಇದಕ್ಕೆ ಉದಾಹರಣೆಗಳು. ಯುದ್ಧದಿಂದ ಗೆಲ್ಲಲಾಗದ ಅದೆಷ್ಟೋ ಸಂಗತಿಗಳು ಸೌಹಾರ್ದ ಮಾತುಕತೆಗಳಿಂದ ಸಮಾಧಾನಕರ ಬಹುಮಾನ ಪಡೆದುಕೊಂಡದ್ದಕ್ಕೆ ಸಾಕ್ಷಿಗಳಿವೆ. ಇಂತಹ ದೇಶಪ್ರೇಮೀ ಸೂಕ್ಷ್ಮಗಳನ್ನು ಆರು ದಶಕಗಳಿಗೂ ಹಿಂದೆಯೇ ಗುರುತಿಸಿ, ಜನತಾ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ತಕರಾರುಗಳನ್ನು ಕಾಲದಿಂದ ಕಾಲಕ್ಕೆ ದಾಖಲಿಸುತ್ತಿದ್ದವರು ಸಾದತ್ ಹಸನ್ ಮಂಟೊ. ತಮ್ಮ ಕಣ್ಣೆದುರು ವಿತರಿಸಲಾಗುತ್ತಿದ್ದ ವಿಷದ ಬಾಟಲುಗಳು ಬೇರೆಯವರಿಗೆ ಸಿಗದಿರಲಿ ಎಂಬ ಹಟದಿಂದೆಂಬಂತೆ ಎಲ್ಲವನ್ನೂ ತನ್ನ ಗಂಟಲೊಳಗೇ ಸುರಿದುಕೊಂಡ ವಿಷಕಂಠ ಈ ಮಂಟೊ. ಹಿಂದೂಸ್ತಾನ ಮತ್ತು ಪಾಕಿಸ್ತಾನಗಳು ವಿಭಜನೆಯ ಭಜನೆಯಲ್ಲಿ ಮುಳುಗಿರುವಷ್ಟು ಕಾಲ ಸಾಹಿತ್ಯೇತರ ಕಾರಣಗಳಿಗೂ, ಮನುಷ್ಯನಿಗೆ ಓದು ಇನ್ನು ಸಾಕು ಅಂತ ಅನ್ನಿಸುವವರೆಗೆ ಸಾಹಿತ್ಯಿಕ ಕಾರಣಗಳಿಗೂ ನಿತ್ಯ ನೆನಪಾಗಬಲ್ಲ ಅಕ್ಷರ ಸಂತ ಇವರು.

ದೇವರಲ್ಲಿ ಗುಲಗುಂಜಿಯಷ್ಟೂ ನಂಬಿಕೆಯಿಲ್ಲದಿದ್ದರೂ ಖಾಲಿ ಬಿಳಿ ಹಾಳೆಯ ನೆತ್ತಿಯ ಮೇಲೆ, ಮುಸ್ಲಿಮರು ಪವಿತ್ರ ಎಂದು ನಂಬುತ್ತಾರೆನ್ನಲಾದ ೭೮೬ ನಮೂದಿಸಿಯೇ ಅದ್ಭುತವಾದ ಕತೆಗಳನ್ನು ಬರೆಯುತ್ತಿದ್ದ ಅವರನ್ನು ಮೊದಲ ದರ್ಜೆಯ ಫ್ರಾಡ್ ಎಂದವರಿದ್ದರು. ಕಳ್ಳ, ಸುಳ್ಳುಗಾರ, ಕುಡುಕ, ಮೋಸಗಾರ ಎಂದು ದೂಷಿಸಿದವರಿದ್ದರು. ತಮಾಶೆಯೆಂದರೆ ಹಾಗೆಲ್ಲ ಆಪಾದಿಸಿದವರಲ್ಲಿ ಸ್ವತಃ ಮಂಟೋ ಅವರೂ ಇದ್ದರು. ಬರೆದ ಮೊದಲ ಕತೆ ತಮಾಶಾವನ್ನು ಬೇರೆಯವರ ಹೆಸರಲ್ಲಿ ಪ್ರಕಟಿಸಿದ್ದ ಮಂಟೋ ಎಂದೂ ನೇರ ದಾರಿಯಲ್ಲಿ ಹೆಜ್ಜೆ ಹಾಕಿದವರಲ್ಲ. ಅವರದ್ದು ಯಾವಾಗಲೂ ಹಗ್ಗದ ಮೇಲಿನ ನಡಿಗೆ. ಯಾವುದೇ ಕ್ಷಣದಲ್ಲಿ ಮಂಟೋ ಕಾಲು ಜಾರಿ ಬಿದ್ದು ಬೀಳಬಹುದೆಂದು ಬಹಳಷ್ಟು ಮಂದಿ ನಿರೀಕ್ಷಿಸಿದ್ದರು; ಬಯಸಿದವರೂ ಇದ್ದರು.

ಮಂಟೊ ಬೇಜವಾಬ್ದಾರಿತನದಿಂದ ಎಚ್ಚರ ತಪ್ಪಿ ಬಿದ್ದದ್ದು ಒಮ್ಮೆ ಮಾತ್ರ; ಸಾಯುವುದಕ್ಕಿಂತ ಅರೆಕ್ಷಣ ಮೊದಲು.

ಅವರು ಮಾಡಿದ್ದಿರಬಹುದಾದ ಒಂದೇ ಒಂದು ಅತ್ಯಂತ ಬೇಜವಾಬ್ದಾರಿ ಕೆಲಸವೆಂದರೆ, ಅವರು ಸತ್ತುಹೋದದ್ದು.

ಈಗ ದೊಡ್ಡಣ್ಣ ಎನ್ನಿಸಿಕೊಂಡಿರುವ, ಹಿಂದೆಯೆಲ್ಲ ಅಂಕಲ್ ಸ್ಯಾಮ್ ಎಂದು ಕರೆಸಿಕೊಳ್ಳುತ್ತಿದ್ದ ಅಮೇರಿಕಾದ ಪ್ರಭುತ್ವದ ನಿಜ ಹೂರಣವನ್ನು, ಸ್ಯಾಮ್ ಅಂಕಲ್ ಗೆ ಪತ್ರಗಳು ಎಂಬ ಕಿಡಿಗೇಡಿ ಬರಹಗಳ ಮೂಲಕ ಅನಾವರಣಗೊಳಿಸಿದ್ದ ಮಂಟೊರದ್ದು ಅನನ್ಯ ಸೃಜನಶೀಲ ಪ್ರತಿಭೆ. ಆರು ದಶಕಗಳ ಹಿಂದೆ ಮಂಟೊ ಬರೆದ ಆ ಪತ್ರಗಳಲ್ಲಿ ತಮಾಷೆಯಾಗಿಯೇ ವ್ಯಕ್ತಪಡಿಸಿದ್ದ ಹಿಂದೂಸ್ತಾನ, ಪಾಕಿಸ್ತಾನ ಮತ್ತು ಅಮೇರಿಕಾ ನಡುವಣ ರಾಜ ತಾಂತ್ರಿಕ ಸಂಬಂಧಗಳ ಒಕ್ಕಣೆ-ವಿವರಣೆಗಳು ಇಂದು ಕೂಡಾ ಪ್ರಸ್ತುತವೆನ್ನಿಸತೊಡಗಿದಾಗ ಗಾಬರಿಯಾಗುತ್ತದೆ.

ಬರಹಗಾರನೊಬ್ಬನಿಂದ ಇಷ್ಟೊಂದು ಕರಾರುವಾಕ್ಕಾಗಿ ಕಣಿ ಹೇಳಲು ಸಾಧ್ಯವೇ? ನಂಬಲಾಗದ ಸತ್ಯ ಇದು.

ಬಾಯಿ ತೆರೆಯುವುದೇ ಶರಾಬು ಸುರಿದುಕೊಳ್ಳಲು ಎಂದು ನಂಬಿದ್ದ ಮಂಟೊರ ಬದುಕು ಬರಹಗಳನ್ನು ಸುರಕೋಡ ಸಾಹೇಬರು ಅದೆಷ್ಟು ಚೆನ್ನಾಗಿ ಅರೆದು ಕುಡಿದಿದ್ದಾರೆ ಎಂಬುದಕ್ಕೆ ಅವರು ಈ ಸಂಕಲನಕ್ಕೆ ಬರೆದಿರುವ ಸಂಕ್ಷಿಪ್ತ ಪ್ರಸ್ತಾವನೆಯೇ ಸಾಕ್ಷಿ. ಮಂಟೊ ಮತ್ತು ಮಂಟೊರ ಬಗ್ಗೆ ಬೇರೆ ಬೇರೆಯವರು ಬರೆದ ೨೩ರಷ್ಟು ಬರಹಗಳನ್ನು, ಧರ್ಮನಿಷ್ಟರ ಪ್ರಾರ್ಥನೆಯಿಂದಾರಂಭಿಸಿ, ಲೋಕಾವಲೋಕನ, ಆತ್ಮಾವಲೋಕನ, ಭರತವಾಕ್ಯ, ಅಂಕದ ಪರೆದೆ ಜಾರಿದ ಮೇಲೆ – ಹೀಗೆ ಐದು ವಿಭಾಗಗಳಲ್ಲಿ ಸಂಗ್ರಹಿಸಿ, ಅನುವಾದಿಸಿ ಈ ಸಂಕಲನದಲ್ಲಿ ದಾಖಲಿಸಿರುವ ಸುರಕೋಡು ಸಾಹೇಬರ ಶ್ರಮ ಮತ್ತು ಕ್ರಮ ಅಭಿನಂದನಾರ್ಹ. ಕೇವಲ ಈ ಬಗೆಯ ಕಿಡಿಗೇಡಿ ರಚನೆಗಳನ್ನಷ್ಟೇ ಸಂಕಲಿಸಿದರೆ, ಮಂಟೊರ ನಿಜವನ್ನು ಅರಿಯದ ಹೊಸ ಓದುಗರಿಗೆ ಅನ್ಯಾಯವಾದೀತೆಂಬ ಅಳುಕಿನಿಂದ, ಆ ಮಹಾನ್ ಸಾಹಿತಿಯು ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆಯೂ ಕೆಲವು ಅಪರೂಪದ, ಅಮೂಲ್ಯ ಬರಹಗಳನ್ನು ಅನುವಾದಿಸಿ ಸೇರಿಸಿಕೊಂಡ ಸುರಕೋಡು ಸಾಹೇಬರ ಎಚ್ಚರ ಹೊಸಬರಿಗೆ ಒಂದೊಳ್ಳೆಯ ಪಾಠ.

ಇಂತಹ ಅಪರೂಪದ ಸಂಕಲನವನ್ನು ಕನ್ನಡದ ಓದುಗರಿಗೆ ಒದಗಿಸುತ್ತಿರುವ ಚಿಂತನ ಪುಸ್ತಕದವರಿಗೆ ನಾನು ಕೃತಜ್ಞ.

ಬೊಳುವಾರು ಮಹಮದ್ ಕುಂಞಿ
ಎಪ್ರಿಲ್ ೧, ೨೦೧೩

ಶೀರ್ಷಿಕೆ: ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು
ಅನುವಾದ : ಹಸನ್ ನಯೀಂ ಸುರಕೋಡ
ಬೆಲೆ : ರೂ.140/-

Manto Book Release Invite

51.SamUnclegePatragalu Front

51.SamUnclegePatragalu Back