71. ಎರಡು ಕಣ್ಣು ಸಾಲದು


ಸಿನಿಮಾ ಬರಹಗಾರ ವಿ.ಎನ್‌. ಲಕ್ಷ್ಮೀನಾರಾಯಣ ಇಲ್ಲಿ ತಮ್ಮ ಸಿನಿಮಾ ರಸಗ್ರಹಣ ಬರಹಗಳ ಜೊತೆಗೆ ಸಿನಿಮಾ ವಿಶ್ಲೇಷಣೆ – ವಿಮರ್ಶೆಯ ಲೇಖನಗಳನ್ನು ‘ಎರಡು ಕಣ್ಣು ಸಾಲದು’ ಪುಸ್ತಕದಲ್ಲಿ ಸಂಕಲಿಸಿದ್ದಾರೆ.

ಈ ಪುಸ್ತಕದ ಮೊದಲ ಭಾಗದಲ್ಲಿ ಸಿನಿಮಾಗಳನ್ನು ಆಸ್ವಾದಿಸುವ ಹಾಗೂ ಅದರ ವ್ಯಾಕರಣವನ್ನು ವಿಶ್ಲೇಷಣೆ ಮಾಡುವ ಬರಹಗಳಿವೆ. ಸಿನಿಮಾದ ಶಕ್ತಿಯನ್ನು, ಅದನ್ನು ಓದುವ, ಕೇಳುವ, ನೋಡುವ ಬಗೆಯನ್ನು ಅವರ ಬರಹಗಳು ಓದುಗರಿಗೆ ಮನಗಾಣಿಸುತ್ತವೆ. ಸಿನಿಮಾದ ಗಂಭೀರ ವಿದ್ಯಾರ್ಥಿಯೊಬ್ಬನ ನುಡಿನೋಟಗಳು ಇಲ್ಲಿನ ಬರಹಗಳಲ್ಲಿ ಅಡಕವಾಗಿವೆ.

ಪುಸ್ತಕದ ಎರಡನೇ ಭಾಗವು ಮಹತ್ವದ ಸಿನಿಮಾಗಳ ವಿಮರ್ಶಾತ್ಮಕ ಬರಹಗಳಾಗಿವೆ. ಭಾರತೀಯ ಹಾಗೂ ಕನ್ನಡ ಸಿನಿಮಾಗಳ ಕುರಿತ ಬರಹಗಳೂ ಇದರಲ್ಲಿ ಸೇರಿವೆ.

ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನೇರಿ’, ಅಲ್ಬರ್ಟ್ಲಿ ಮೋರಿಸ್‌ನ ‘ದ ರೆಡ್‌ ಬಲೂನ್‌’, ಕೃಪಾಕರ–ಸೇನಾನಿ ನಿರ್ದೇಶನದ ಸಾಕ್ಷ್ಯಚಿತ್ರ ‘ವೈಲ್ಡ್‌ ಡಾಗ್‌ ಡೈರೀಸ್‌’, ಆನಂದ್‌ ಪಟವರ್ಧನ್‌ ಅವರ ‘ಜೈ ಭೀಮ್ ಕಾಮ್ರೇಡ್‌’ – ಇವು ಲೇಖಕರು ವಿಶ್ಲೇಷಣೆ ಮಾಡಿರುವ ಕೆಲವು ಸಿನಿಮಾಗಳು. ಸಿನಿಮಾ ಕಲೆಯ ಮಾಂತ್ರಿಕ ಗುಣಗಳ ಹುಡುಕಾಟ ಇಲ್ಲಿನ ಬರಹಗಳ ಸ್ವರೂಪವನ್ನು ನಿರ್ಧರಿಸಿದೆ.

ಕೃಪೆ : ಪ್ರಜಾವಾಣಿ
Advertisements

ಬಹುಕಾಲದ ನಂತರ ಕನ್ನಡದಲ್ಲಿ ಬಂದ ಉತ್ತಮ ಚಲನಚಿತ್ರ ವಿಮಶೆ೯ಯ ಪುಸ್ತಕ ಎಂದು ಕರೆಸಿಕೊಳ್ಳಬಹುದಾದ ಪುಸ್ತಕ ‘ಎರಡು ಕಣ್ಣು ಸಾಲದು’ ದಿನಾಂಕ 21.09.2016 ರಂದು ಸರ್. ಎಂ. ವಿಶ್ವೇಶ್ವರ ಸಭಾ0ಗಣ ತುಮಕೂರು ವಿಶ್ವವಿದ್ಯಾಲಯ  ತುಮಕೂರು ಇಲ್ಲಿ ಬಿಡುಗಡೆಯಾಗಲಿದೆ.

ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ  ಆಯೋಜಿಸಿರುವ ‘ ನೋಡುವ ಬಗೆ ‘ ಚಲನ ಚಿತ್ರ  ಉತ್ಸವದಲ್ಲಿ  ವಿ.ಎನ್.ಲಕ್ಷ್ಮಿ ನಾರಾಯಣ ಅವರ ಈ  ಪುಸ್ತಕವನ್ನು ತುಮಕೂರು ವಿಶ್ವ ವಿದ್ಯಾಲಯ ಕುಲಪತಿ ಗಳಾದ ಶ್ರೀ ಎ.ಎಚ್.ರಾಜಾ ಸಾಬ್ ಅವರು ಬಿಡುಗಡೆ ಮಾಡಲಿದ್ದಾರೆ.

eradu-kannu-saaladu-101