67. ಹಿಂದುತ್ವ ರಾಜಕಾರಣ ಅಂದು-ಇಂದು-ಮುಂದು


Inv - Jananudi

Advertisements

hindtva andu indu mundu Front

hindtva andu indu mundu back

 

“ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು. ಧರ್ಮಗಳು ಜನರನ್ನು ಬೇರ್ಪಡಿಸುವುದಕ್ಕಾಗಿ ಹುಟ್ಟಿಕೊಂಡಿಲ್ಲ. ಜನರನ್ನು ಒಂದುಗೂಡಿಸುವುದಕ್ಕಾಗಿ ಧರ್ಮಗಳಿವೆ. ಒಂದು ವೇಳೆ ಹಿಂದೂಯಿಸಂ ಅನ್ಯಧರ್ಮೀಯರನ್ನು, ಇಸ್ಲಾಂ ಅನ್ನು ದ್ವೇಷಿಸುವದನ್ನು ಪ್ರೋತ್ಸಾಹಿಸಿದರೆ ಅಲ್ಲಿಗೆ ಹಿಂದೂಯಿಸಂ ನಾಶವಾದಂತೆ.
ಇದು ರಾಷ್ಟ್ರಪಿತನೆಂದು ನಾವು ಗುರುತಿಸಿಕೊಂಡ ಮಹಾತ್ಮ ಗಾಂಧಿಯವರ ಘೋಷಣೆ. ಆದರೆ ಇಂದೇನಾಗಿದೆ. ಇಂದು ‘ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ?‘ ಎನ್ನುವ ಪರಿಸ್ಥಿತಿ ಹಿಂದೂಯೇತರ ಅಂದರೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ಭಾರತೀಯರಿಗೆ ಬಂದಿದೆ. ಇದನ್ನು ಸಹಿಸಿಕೊಂಡಿರಬೇಕೇ ಅಥವಾ  (ಕೆಲವು ಬಾರಿ) ಇದರಿಂದ ಉಂಟಾಗುವ ತಾತ್ಕಾಲಿಕ ಲಾಭಗಳಿಗಾಗಿ ಇದನ್ನು ಪ್ರೋತ್ಸಾಹಿಸಬೇಕೇ ಅಥವಾ ಇದರಿಂದ ನಮಗೆ ಉಂಟಾಗುವ ಶಾಶ್ವತ ಕಷ್ಟ ನಷ್ಟಗಳನ್ನು ಗುರುತಿಸಿಕೊಂಡು ಇದನ್ನು ವಿರೋಧಿಸಬೇಕೇ? ಈ ಬಗ್ಗೆ ಕೂಲಂಕುಶವಾಗಿ ಯೋಚಿಸಿ, ಚರ್ಚಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಸಮಯ ಈಗ ಬಂದಿದೆ. ಈ ಸಂದರ್ಭದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಸಹಾಯ ಮಾಡಬಹುದಾದ ಮಾಹಿತಿ (ಡಾಟಾ) ಈ ಪುಸ್ತಕದಲ್ಲಿ ಸಿಗುತ್ತದೆ.
ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮುನ್ನುಡಿ ಹೊಂದಿರುವ ಈ ಪುಸ್ತಕ ‘ಹೊಸ ನಾಡು ಕಟ್ಟುವ‘ ಆಶಯ ಹೊಂದಿರುವವರಿಗೆ ಹೊಸ ಹುರುಪನ್ನು ನೀಡಬಲ್ಲದು, ಅವರನ್ನು ಕಾರ್ಯಪ್ರವರ್ತರನ್ನಾಗಿ ಮಾಡ ಬಲ್ಲದು.

ಈ ಪುಸ್ತಕವನ್ನು ಖರೀದಿಸಲು ಇಲ್ಲಿ ಚಿಟಿಕೆ ಹೊಡೆಯಿರಿ

http://chinthanapusthaka.in/product/-hindutvada-rajakarana-andu-indu-mundu-5