49. ಫೈಜ್ ನಾಮಾ


ಫೈಜ್ ನಾಮಾ

ಸಂ: ಹಸನ್ ನಯೀಂ ಸುರಕೋಡ ಕವಿತೆಗಳ ಅನುವಾದ: ಎಲ್.ಕೆ. ಅತೀಕ್, ಕೆ.ಷರೀಫಾ ಪು: 240; ಬೆ: ರೂ. 190 ಪ್ರ: ಚಿಂತನ ಪುಸ್ತಕ, ನಂ 405, 10ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಡಾಲರ್ಸ್‌ ಕಾಲೋನಿ, ಜೆ.ಪಿ. ನಗರ, 4ನೇ ಫೇಸ್, ಬೆಂಗಳೂರು- 560 078

ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ಕವಿತೆಗಳನ್ನು, ಅವರ ಬದುಕಿಗೆ ಸಂಬಂಧಿಸಿದ ಪುಟಗಳನ್ನು ಈ ಪುಸ್ತಕದಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ ಹಸನ್ ನಯೀಂ ಸುರಕೋಡ.

ಇಲ್ಲಿ ಫೈಜ್ ತಮ್ಮ ಬರೆದುಕೊಂಡ ಕೆಲವು ಪುಟಗಳು ಅವರ ಪತ್ನಿ ಬರೆದ ಕೆಲವು ಪುಟಗಳನ್ನು ಅನುವಾದಿಸಿ ಕೊಡಲಾಗಿದೆ. ತಮ್ಮ ಕುರಿತಂತೆ ಕವಿಯೂ ಬರೆದುಕೊಂಡಿರುವುದೂ ಸೇರಿದಂತೆ ಬೇರೆಯವರು ಬರೆದ ಬರಹಗಳು ಇಲ್ಲಿವೆ. ಇನ್ನುಳಿದ ಪುಟಗಳು ಫೈಜ್ ಕಾವ್ಯದ ಅನುವಾದ.

ಈ ಹಿಂದೆಯೇ ಎಲ್.ಕೆ. ಅತೀಕ್ ಫೈಜ್ ಕವಿತೆಗಳನ್ನು ಅನುವಾದಿಸಿದ್ದರು. ಅದರೊಂದಿಗೆ ಕೆ. ಷರೀಫಾ ಅವರ ಕೆಲವು ಕವಿತೆಗಳನ್ನು ಅನುವಾದಿಸಿದ್ದು, ಅದನ್ನು ಇಲ್ಲಿ ಕೊಡಲಾಗಿದೆ. ಗದ್ಯ ಭಾಗದ ಅನುವಾದ ಪುಸ್ತಕದ ಸಂಪಾದಕರಾದ ಹಸನ್ ನಯೀಂ ಸುರಕೋಡ ಅವರದು.

ಫೈಜ್ ಕಾವ್ಯ ಉರ್ದು ಕಾವ್ಯ ಪ್ರಕಾರವಾದ `ಗಜಲ್’ ಹಾಗೂ `ನಜ್ಮ’ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಫೈಜ್ ನಿಜವಾದ ಸಮಾಜವಾದಿ ಕವಿ. ಅವರ ಕಾವ್ಯದ ಬದ್ಧತೆ ಸಮಾಜದ ಪರ, ಜೊತೆಗೆ ಅದು ಬಂಡುಕೋರತನದ್ದು.

ಅದು ಅಸಮಾನತೆ, ಶೋಷಣೆಯ ವಿರುದ್ಧವಾದದ್ದು. ಪತ್ರಕರ್ತ, ಅನುವಾದಕ, ಅಧ್ಯಾಪಕ, ಸಿನಿಮಾ ನಿರ್ಮಾಪಕ ಹೀಗೆ ಹಲವು ರಂಗಗಳಲ್ಲಿ ಕೆಲಸ ಮಾಡಿದ ಫೈಜ್ ಮೂಲತಃ ಕವಿಯಾಗಿಯೇ ಮುಖ್ಯರಾದವರು.

ಅವರಂತೆ ಬದುಕಿನ ಹೋರಾಟದಲ್ಲಿ ಮುಳುಗೆದ್ದ ಮತ್ತೊಬ್ಬ ಕವಿ ಕಾಣಸಿಗುವುದು ವಿರಳ. ಉರ್ದು ಕಾವ್ಯದ ಒಬ್ಬ ಮಹತ್ವದ ಕವಿಯನ್ನು ಅವನ ಜೀವನದ ವಿವರಗಳೊಂದಿಗೆ ಕೊಡುವ  ಪ್ರಯತ್ನದಲ್ಲಿ ಈ ಪುಸ್ತಕ ಯಶಸ್ವಿಯಾಗಿದೆ.

ಕವಿತೆಗಳ ಜೊತೆಗೇ ಕವಿಯ ಬದುಕಿನ ವಿವರಗಳು ಒಂದೆಡೆ ದೊರಕುವುದರಿಂದ ಓದುಗರಿಗೆ ಸಮಗ್ರವಾಗಿ ಕವಿಯನ್ನು ಅರಿತುಕೊಳ್ಳಲು ಸಾಧ್ಯವಾಗುವಂತೆ ಇಲ್ಲಿನ ಅನುವಾದವಿದೆ.

-ಸಂದೀಪ ನಾಯಕ

Advertisements

‘Faiz Ahmed Faiz showed how poetry, politics can complement each other’ – `THE HINDU’

faiznama hindu

Chiranjeevi Singh, Fakeer Mohammed Katpadi, Muhammad Azam Shaheed, and Hassan Nayeem Surkod, during an evening with Faiz and release of book ‘Faiznama’, in Bangalore on December 16, 2012. Photo: K. Murali Kumar.

‘Faiz Naama’, brought out by Chintana Pustaka, launched

At a time when both politics and literature seem to have dragged each other down to an all-time low, great poets such as the late Faiz Ahmed Faiz are examples of how both can complement and elevate each other, said Hassan Nayeem Surkod, writer and translator.

Speaking at the launch of “Faiz Naama”, edited by Mr. Surkod and brought out by Chintana Pustaka here on Sunday, he said that Faiz was constantly and seriously involved in both literary and Left political movements in the undivided India and later Pakistan.

Writer Fakeer Mohammed Katpadi said that Faiz’s poetry at once reflects his faith in the struggle of the oppressed for a better world and his fine artistry as a poet. Writers like Faiz and Mukhdoom Mohiuddin maintained their political idealism till the end, even as they were uncompromising in their pursuit of poetry, he added.

He regretted that the critical tradition in Kannada tends to look upon writers who carry the “progressive” tag on them as necessarily inferior as poets and writers, while that dichotomy does not exist in literary traditions in Urdu.

It was unfortunate that Urdu had come to be identified with one religion and there was a clear “conspiracy”, particularly in Karnataka, to culturally divide the language, said Mr. Katpadi.

The decision of the BJP Government to make the Urdu Academy as part of the Department of Minority Welfare was a clear indication of this, he added.

Mohammad Azam Azad said that writers such as Faiz belonged to the progressive tradition, but never allowed their poetry to become propagandist.

“He saw the role of a writer as not just a witness of events, but as a crusader who can change the course of events,” said Mr. Azad. The former bureaucrat Chiranjeevi Singh, who presided over the function, said that Karnataka had contributed greatly to the development of Urdu with pioneering writers such as Ali Bijapuri and Khwaja Bande Nawaz.

The book includes prose writings on and by Faiz translated by Mr. Surkod and poetry translations by L.K. Atheeq and K. Shareefa.

Keywords: literary and Left political movements

ಸಾಹಿತ್ಯ, ರಾಜಕೀಯಕ್ಕೆ ಫೈಜ್‌ರಿಂದ ಗೌರವ – ಪ್ರಜಾವಾಣಿ

faiznama prajavani

ನಗರದಲ್ಲಿ ಭಾನುವಾರ ನಡೆದ `ಫೈಜ್‌ರೊಡನೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಫಕೀರ್ ಮಹಮದ್ ಕಟ್ಪಾಡಿ ಅವರು `ಫೈಜ್ ನಾಮಾ’ ಕೃತಿ ಬಿಡುಗಡೆ ಮಾಡಿದರು. ಉರ್ದು ಕವಿ ಮೊಹಮ್ಮದ್ ಅಜಮ್ ಶಾಹಿದ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಹಿರಿಯ ಲೇಖಕ ಹಸನ್ ನಯೀಂ ಸುರಕೋಡ, ಲೇಖಕಿ ಕೆ.ಶರೀಫಾ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ

ಬೆಂಗಳೂರು: `ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಮಹಾಕವಿ ಫೈಜ್ ಅಹ್ಮದ್ ಫೈಜ್’ ಎಂದು ಹಿರಿಯ ಲೇಖಕ ಹಸನ್ ನಯೀಂ ಸುರಕೋಡ ಅಭಿಪ್ರಾಯಪಟ್ಟರು.

ಸಾಹಿತ್ಯ ಸಮುದಾಯ, ಅಖಿಲ ಭಾರತ ಉರ್ದು ಮಂಚ್, ಚಿಂತನ ಪುಸ್ತಕದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ `ಫೈಜ್‌ರೊಡನೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಾಹಿತ್ಯ ಕ್ಷೇತ್ರಕ್ಕೆ ರಾಜಕಾರಣಿಗಳು ಮತ್ತು ರಾಜಕಾರಣಕ್ಕೆ ಸಾಹಿತಿಗಳು ಪ್ರವೇಶ ಮಾಡಬಹುದು. ಇಂದು ಆ ಎರಡೂ ಕ್ಷೇತ್ರಗಳು ಕುಲಗೆಟ್ಟು ಹೋಗಿವೆ. ಈ ಎರಡೂ ಕ್ಷೇತ್ರಕ್ಕೂ ಗೌರವ ತಂದುಕೊಟ್ಟವರು ಫೈಜ್’ ಎಂದು ಅವರು ತಿಳಿಸಿದರು.

`ಫೈಜ್ ಮನುಕುಲಕ್ಕೆ ಸೇರಿದ ಮಹಾನ್ ಕವಿ. ಸಾಮಾಜಿಕ ಹಾಗೂ ರಾಜಕೀಯ ಆಂದೋಲನಗಳ ಜೊತೆಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ಪ್ರಭುತ್ವಕ್ಕೆ ದೊಡ್ಡ ಸವಾಲು ಆಗಿದ್ದರು’ ಎಂದು ಅವರು ಅಭಿಪ್ರಾಯಪಟ್ಟರು.

`ಫೈಜ್ ನಾಮಾ’ ಕೃತಿ ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಫಕೀರ್ ಮಹಮದ್ ಕಟ್ಪಾಡಿ ಮಾತನಾಡಿ, `ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ನಾಡಿನಲ್ಲಿ ಉರ್ದು ಸಾಹಿತ್ಯದ ಸಾಧನೆ ಮಹತ್ವದ್ದು. ಅಲ್ಲದೆ ಕನ್ನಡ ಹಾಗೂ ಉರ್ದು ಭಾಷೆಗೆ ನಿಕಟ ಬಾಂಧವ್ಯ ಇದೆ. ಕನ್ನಡದ ನೂರಾರು ಪದಗಳು ಉರ್ದುವಿನಲ್ಲಿ, ಉರ್ದುವಿನ ನೂರಾರು ಪದಗಳು ಕನ್ನಡದಲ್ಲಿ ಇವೆ. ಎರಡೂ ಭಾಷೆಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ನಡೆದಿದೆ’ ಎಂದರು.

`ಫೈಜ್ ಒಡಲಲ್ಲಿ ನಿಗಿನಿಗಿ ಕೆಂಡ ಇರಿಸಿಕೊಂಡಿದ್ದರು. ಒಳಗೆ ನೋವು ಇದ್ದರೂ ಹೊರಗೆ ಸಿಹಿಯಾದ ವಾತಾವರಣ ನಿರ್ಮಿಸಿದರು. ಹೋರಾಟದ ಕೆಚ್ಚನ್ನು ಇರಿಸಿಕೊಂಡೇ ಪ್ರೇಮ ಕವನ ಬರೆದರು. ಕಾವ್ಯ ಮತ್ತು ರಾಜಕೀಯವನ್ನು ಸಮಾನವಾಗಿ ಕಂಡು ಎರಡೂ ಕ್ಷೇತ್ರಕ್ಕೂ ವಿನಯ ಮತ್ತು ಸೌಂದರ್ಯವನ್ನು ನೀಡುವಲ್ಲಿ ಯಶಸ್ವಿಯಾದರು’ ಎಂದು ಅವರು ಪ್ರತಿಪಾದಿಸಿದರು.

`ಅವರ ಕವನಗಳು ಜನರ ಬದುಕಿನ ನೆಲೆಯಲ್ಲೇ ಸುತ್ತಾಡುತ್ತವೆ. ಅವರ ಅನುಭವದ ವಿಚಾರಗಳು ಎಲ್ಲಿಯೂ ಘೋಷಣೆಗಳಾಗಲಿಲ್ಲ. ಫೈಜ್ ಎಡಪಂಥೀಯ ಧೋರಣೆಯನ್ನು ಎಲ್ಲಿಯೂ ಸವಕಲುಗೊಳಿಸದೆ ತತ್ವನಿಷ್ಠರಾಗಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾವ್ಯ ಸೃಷ್ಟಿ ಮಾಡಿದರು’ ಎಂದರು.

`ಫೈಜ್-ಕವಿ ಮತ್ತು ಕಾವ್ಯ’ದ ಕುರಿತು ಉರ್ದು ಕವಿ ಮೊಹಮ್ಮದ್ ಅಜಮ್ ಶಾಹಿದ್ ಮಾತನಾಡಿ, `ಫೈಜ್ ಒಂದು ಸಮುದಾಯಕ್ಕೆ, ಒಂದು ದೇಶಕ್ಕೆ ಸೀಮಿತರಾದ ಕವಿ ಅಲ್ಲ. ಅವರು ವಿಶ್ವಕ್ಕೆ ಸೇರಿದ ಅಗ್ರಪಂಕ್ತಿಯ ಕವಿ’ ಎಂದು ಶ್ಲಾಘಿಸಿದರು.

`ಫೈಜ್ ಜೈಲಿಗೆ ಹೋಗದಿದ್ದರೆ ಇನ್ನಷ್ಟು ಅದ್ಭುತವಾಗಿ ಬರೆಯುತ್ತಿದ್ದರು ಎಂಬ ಒಂದು ವಾದವಿದೆ. ಜೈಲಿನ ಅನುಭವ ಹಾಗೂ ನೋವಿನಿಂದ ಅವರ ಕಾವ್ಯದ ಪ್ರಖರತೆ ಹೆಚ್ಚಿತು ಎಂದು ವಾದಿಸುವವರು ಇದ್ದಾರೆ. ಅವರು ಪ್ರಗತಿಪರ ಕವಿ ಆಗಿದ್ದರು. ಆದರೆ, ಘೋಷಣೆಯ ಕವಿ ಆಗಲಿಲ್ಲ’ ಎಂದು ಅವರು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ವಿಮಲ ಕೆ.ಎಸ್, `ಸುಧಾ’ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಕೃತಿ ಮೇಲಿನ ಕೆಟ್ಟ ದಾಳಿ
`ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿದ್ದ ಉರ್ದು ಸಾಹಿತ್ಯ ಅಕಾಡೆಮಿಯನ್ನು ರಾಜ್ಯದ ಭಂಡ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿರುವುದು ಸಂಸ್ಕೃತಿಯ ಮೇಲೆ ನಡೆದ ಕೆಟ್ಟ ದಾಳಿ’ ಎಂದು ಫಕೀರ್ ಮಹಮದ್ ಕಟ್ಪಾಡಿ ಕಿಡಿ ಕಾರಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಮಧ್ಯಪ್ರದೇಶದಲ್ಲೂ ಇದೇ ರೀತಿ ಮಾಡಲಾಗಿದೆ. ಇಂತಹ ಪ್ರವೃತ್ತಿಯಿಂದ ಸಾಂಸ್ಕೃತಿಕ ನೆಲೆಗೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹಿಂದೆ ನಮ್ಮ ಜನರನ್ನು ಬೇರೆ ಮಾಡುವ ಹುನ್ನಾರ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಉರ್ದು ಅಲ್ಪಸಂಖ್ಯಾತರ ಇಲಾಖೆಗೆ: ಖಂಡನೀಯ   – ಉದಯವಾಣಿ

ಬೆಂಗಳೂರು: ಉರ್ದು ಅಕಾಡೆಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತ್ಯೇಕಿಸಿ ಅಲ್ಪಸಂಖ್ಯಾತರ ಇಲಾಖೆಗೆ ಸೇರಿಸಿರುವ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಇದು ನಾಡಿನ ಸಂಸ್ಕೃತಿ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಫ‌ಕೀರ್‌ ಮಹಮ್ಮದ್‌ ಕಟಾ³ಡಿ ಹೇಳಿದ್ದಾರೆ.

ಅಖೀಲ ಭಾರತ ಉರ್ದು ಮಂಚ್‌ ಹಾಗೂ ಚಿಂತನ ಪುಸ್ತಕ ಪ್ರಕಾಶನವು ಭಾನುವಾರ ಆಯೋಜಸಿದ್ದ ‘ಫೈಜ್‌ರೊಡನೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕ್ರಮದಿಂದಾಗಿ ವಿಶಿಷ್ಟ ಸಂಸ್ಕೃತಿಯನ್ನು ಇಬ್ಭಾಗ ಮಾಡಿ ವಿಭಜಿಸಿ ಆಳುವ ನೀತಿಯನ್ನು ಅನುಸರಿಸಿದಂತಾಗಿದೆ. ಉರ್ದು ಭಾಷೆ ನಿರ್ದಿಷ್ಟ ಜಾತಿ, ವರ್ಗ, ಧರ್ಮಗಳಿಗೆ ಸೀಮಿತವಾದ ಭಾಷೆಯಲ್ಲ ಎಂದರು.

ಕಮ್ಯೂನಿಸ್ಟ್‌ ತತ್ವದಲ್ಲಿನ ಹೋರಾಟದ ಕೆಚ್ಚನ್ನು ಹೊಂದಿದ್ದ ಫೈಜ್‌ ಅವರು ಒಡಲಲ್ಲಿ ಕೆಂಡವಿದ್ದರೂ ಹೊರಗಡೆ ಸವಿ ವಾತಾವರಣವನ್ನು ಸೃಷ್ಟಿಸಿದವರು. ಅವರು ಬರಿ ಕವಿಯಲ್ಲ, ತಮ್ಮ ಸಾಹಿತ್ಯದಿಂದಲೇ ಆಧ್ಯಾತ್ಮ, ಸೂಫಿ ಪಂತದಲ್ಲಿನ ಸಮಾನತೆ ಹಾಗೂ ಮಾನವೀಯತೆಯನ್ನು ತಿಳಿಸಿಕೊಟ್ಟವರು ಎಂದು ಹೇಳಿದರು.

ರಾಜ್ಯ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಮಾತನಾಡಿ, ಕವಿ ಇಕ್ಬಾಲರನ್ನು ಮೀರಿ ಮಿಜಾ ಗಾಲಿಬ್‌ರಿಗೆ ಸಮಾನವಾಗಿ ನಿಲ್ಲಬಲ್ಲ ಪ್ರತಿಭಾವಂತರು ಫೈಜ್‌. ಇವರು ಹಾಗೂ ಗಾಲಿಬ್‌ರ ಮಧ್ಯೆ ಬಹುತೇಕ ಸಾಮ್ಯತೆಗಳಿವೆ. ಗಾಲಿಬ್‌ರ ಭಾಷೆಯ ಲಾಲಿತ್ಯ ಹಾಗೂ ಸಹಜತೆ ಫೈಜ್‌ರ ಕವಿತೆಗಳಲ್ಲೂ ಸಹ ಕಾಣಬಹುದು ಎಂದರು.

ಈ ವೇಳೆ ಬಿಡುಗಡೆಯಾದ ‘ಫೈಜ್‌ ನಾಮಾ’ ಕೃತಿಯ ಲೇಖಕ ಹಸನ್‌ ನಯೀಂ ಸುರಕೋಡ್‌ ಮಾತನಾಡಿ, ಫೈಜ್‌ ಒಂದು ದೇಶ ಅಥವಾ ಭಾಷೆಗೆ ಸೀಮಿತವಾಗಿರದೆ, ಎಲ್ಲಾ ದೇಶ ಭಾಷೆಗಳ ಎಲ್ಲೆ ಮೀರಿ ಬೆಳೆದ ಕವಿ ಎಂದು ಹೇಳಿದರು.

ಸರಕಾರದಿಂದ ಒಡೆದು ಆಳುವ ನೀತಿ: ಕಟ್ಪಾಡಿ – ವಿಜಯ ಕರ್ನಾಟಕ

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿದ್ದ ಉರ್ದು ಅಕಾಡೆಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಸೇರಿಸಿದೆ. ಇದು ಸಂಸ್ಕೃತಿ ಮೇಲೆ ಮಾಡಿದ ಅತ್ಯಂತ ಕೆಟ್ಟ ದಾಳಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಫಕೀರ್ ಮಹ್ಮದ್ ಕಟ್ಪಾಡಿ ಅಸಮಾಧಾನ ವ್ಯಕ್ತಪ ಡಿಸಿದರು.

ಸಾಹಿತ್ಯ ಸಮುದಾಯ, ಅಖಿಲ ಭಾರತ ಉರ್ದು ಮಂಚ್ ಮತ್ತು ಚಿಂತನ ಪುಸ್ತಕ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ‘ಫೈಜ್ ರೊಡನೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಹಸನ್ ನಯೀಂ ಸುರಕೋಡ ಅವರ ‘ಫೈಜ್ ನಾಮಾ’ ಪುಸ್ತಕವನ್ನು ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು.

”ಇದೊಂದು ಭಂಡ ಸರಕಾರ. ಸಂಸ್ಕೃತಿಯನ್ನೇ ಇಬ್ಭಾಗ ಮಾಡಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಮಧ್ಯಪ್ರದೇಶದಲ್ಲೂ ಇದನ್ನೇ ಮಾಡಲಾಗಿದೆ. ಕನ್ನಡ ಮತ್ತು ಉರ್ದು ಭಾಷೆಗೆ ನಿಕಟ ಬಾಂಧವ್ಯವಿದೆ. ಕನ್ನಡದಲ್ಲಿ ಸಾಕಷ್ಟು ಉರ್ದು ಪದಗಳಿವೆ. ಅದೇ ರೀತಿ ಉರ್ದುವಿನಲ್ಲೂ ಕನ್ನಡ ಪದಗಳಿವೆ. ಎರಡೂ ಭಾಷೆಗಳಲ್ಲಿ ಕೊಡು-ಕೊಳ್ಳುವಿಕೆ ಇದೆ. ಇಂತಹ ಸಾಂಸ್ಕೃತಿಕ ನೆಲೆ ಮೇಲೆ ಸರಕಾರದ ನಿರ್ಧಾರಗಳು ಪ್ರತಿಕೂಲ ಪರಿಣಾಮ ಬೀರುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

”ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದರೂ, ಸಾಹಿತ್ಯದಲ್ಲಿ ಉರ್ದು ಮಹತ್ವದ ಸಾಧನೆ ಮಾಡಿದೆ. ಉರ್ದು ನೆಲದ ಭಾಷೆ. ಒಂದು ಜಾತಿ, ಧರ್ಮ, ದೇಶಕ್ಕೆ ಸಂಬಂಧಿಸಿದ್ದಲ್ಲ. ಕನ್ನಡದ ವಿಮರ್ಶಕರು ಎಡಪಂಥೀಯ ಬರವಣಿಗೆ ಬಗ್ಗೆ ಮೂಗು ಮುರಿಯುತ್ತಾರೆ. ಇದರ ಅನುಭವ ನನಗೂ ಆಗಿದೆ. ಉರ್ದು ವಿಮರ್ಶಕರಲ್ಲಿ ಆ ಧೋರಣೆ ಇಲ್ಲ,” ಎಂದು ಹೇಳಿದರು.

‘ಫೈಜ್ ಅವರ ಕವನಗಳಲ್ಲಿ ಆಧ್ಯಾತ್ಮದ ಪದಗಳಿವೆ. ಸೂಫಿ ಸಂತರಲ್ಲಿದ್ದ ಸಮಾನತೆ ಮತ್ತು ಆತ್ಮೀಯತೆ ಬಗ್ಗೆ ಆಕರ್ಷಿರಾಗಿದ್ದ ಅವರು, ಎಡಪಂಥೀಯ ಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಅವರ ಪ್ರೇಮ ಕವನಗಳಲ್ಲಿ ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ದುಡಿಯುವ ವರ್ಗದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಫೈಜ್, ಉತ್ಕಟ ಹೋರಾಟದ ಕಿಚ್ಚು, ಛಲ ಮೈಗೂಡಿಸಿಕೊಂಡಿದ್ದರು. ಅವರಂತೆ ಕಾವ್ಯ ಕಟ್ಟುವ ಕಲೆಗಾರಿಕೆಯನ್ನು ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. ಪ್ರೇಮ-ರಾಜಕೀಯ ಮತ್ತು ಕಾವ್ಯ-ರಾಜಕೀಯಕ್ಕೆ ಸಮಾನತೆಯ ಸೌಂದರ್ಯ ನೀಡಿ, ಸಫಲರಾಗಿದ್ದರು,” ಎಂದು ಸ್ಮರಿಸಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಮಾತನಾಡಿ, ”ಕರ್ನಾಟಕ ಉರ್ದುವಿನ ಜನ್ಮಸ್ಥಳ. ಆದರೆ, ಇಲ್ಲೇ ಆ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯುವ ಜನಾಂಗ ಈ ಭಾಷೆಯನ್ನು ಉಳಿಸಲು ಶ್ರಮಿಸಬೇಕಿದೆ,” ಎಂದು ಸಲಹೆ ನೀಡಿದರು.

ಉರ್ದು ಕವಿ ಮೊಹಮ್ಮದ್ ಅಜಮ್ ಶಾಹಿದ್, ಕವಯತ್ರಿ ಕೆ.ಶರೀಫಾ, ಕೆ.ಎಸ್.ವಿಮಲಾ, ವಸಂತರಾಜ ಮತ್ತಿತರರು ಉಪಸ್ಥಿತರಿದ್ದರು.

bussINtown

YOUR ENTERTAINMENT &FOOD GUIDE

YOUR CITY
Bangalore

Musical Evening with Faiz
Dec 162012
03:00 PM
Event duration: 04:00 hrs
Sri Krishnaraja Parishanmandira
Bellary Road Bangalore , Karnatakaview map

About the Event
Begum Akhtar, Noor Jehan, Laal Band and others singing Faiz songs Release of and Talk on ‘Faiznama’ (Kannada Book) by Fakir Mohammad Katpady Kendra Sahitya Academy Member Naseeruddin Shah reciting Faiz poetry Mohammad Azam Shahid talks on ‘Faiz and his poetry’
Urdu Poet, Writer and Urdu Manch organiser Urdu and Kannada poets rendering Faiz poetry Hasan Nayeem Surkod talks on ‘Faiz and Progressive Writers Movement’ Sahitya Academy Prize Awardee Translator, Author of ‘Faiznama’ and above all Faiz reading his poetry!

Vening conducted by B M Hanif Asst. Editor, Sudha
Presided over by Shri Chiranjeevi Singh – IAS, Ex- Chief Secretary, Karnataka Government

T Surendra Rao, Khalil Mammon, Vasantharaja, K Sharifa, L K Ateeq, Maher Mansoor, Vimala K S, Shaista Yusuf, M R Kamala, Mubeen Munawar, R Abdul Hameed, S Manjunath, S H Vijayakumar

Kannada

urdu1

eng 1

Faiz Nama cover 1

bangalore mirrornallibangalore mirrornalli1

Hasan Nayeem Surakod. This name caused enough interest in me as it was the byline for a lot of writings in some Kannada journals and newspapers. All his writings were unusual. They were secular, unabashed, very straightforward and, most importantly, very clear in thoughts. He translated a lot of books from Urdu, Hindi and English to Kannada. His translations read like original works. He had a knack for capturing the essence of any writing in translation. His translation of Amrita Pritam’s autobiography Receipt Ticket was particularly good.

Channabasavanna of Lohia Prakashana, who published most of Surakod’s books, has several anecdotes to narrate about him. One such is when Surakod sent his translation of Lohia’s biography and expressed difficulty in getting it published, Channabasavanna read the manuscript and called Surakod and said ‘how can such a good book not get a publisher? I will do it. Come and meet me. I want to see you’. Surakod answered, ‘no need to see me, just see the book, that will do’. Channabasavanna had to coax him to come and meet him.

 Surakod’s new book Faiznama, translation of famous Urdu poet Faiz Ahmed Faiz’s biography, is being launched in the city next week. I called to ask if he would be coming as I wanted to meet him. He lives in Ramdurga, Belgaum district. He burst out laughing and said, “I will think about it. Maybe, I will come. First of all, I am not at all happy about my translation. Faiz is very difficult to translate as he camouflaged revolutionary ideas in what reads like typical religious or spiritual poetry. To understand the nuances of his poetry in the original itself needs preparation, translating it into Kannada needs even more. I have given extensive footnotes. For instance, in his very famous poem ‘Hum dekhenge’ the lines go like, Bas naam rahega allah ka / Jo gayab bhi hai hazar bhi / Jo nazir bhi hai manzar bhi / Uthega Anal Huq ka nara / Jo mai bhi hoon aur tum bhi ho / Aur raj karegi khalk ke khudha / Jo mai bhi hoon aur tum bhi’. Anal Huq was a Sufi saint who declared ‘I am Allah’ for which he was executed. While referring to him, Faiz talks about times ahead. I had to retain Anal Huq and give a foot note. I feel I have failed.”

 Just like in the case of Faiz Ahmed Faiz, who led a very troubled life, Hasan Nayeem Surakod’s life is also very colourful, to say the least.

 “If I tell you about my life you will laugh. (Laughs out loud) I am an awara chaap man! I am weird! I have been a journalist, teacher, newspaper agent and finally LIC agent apart from writing books. They said they wanted to start a school for Muslim children (in Ramdurga) and invited me for the meeting. It ended with me being appointed to teach Urdu to children. I could only talk Urdu but could not read or write. So I learnt that within a couple of months and taught the children. Then I had to teach English to PUC students. I actually have a degree in economics. Later, I became an LIC agent. Funnily, I don’t go out seeking policies. My students send me clients. Meanwhile I write, translate, listen to Sufi music and ghazals. I am very content in my small town. In fact, I hardly look like a literary person. It’s not written on my forehead. When I got the Sahitya Academy award, the people in my town wanted to felicitate me. Then they decided first I should be taken out in a procession so that people will know that I am a writer.” (He flatly refused any of that)

 Urdu poetry is still lurking in the old world charm of romantic notion and I ask him about contemporary writings. He said, “Urdu poetry is stuck in a grove which is very difficult to connect with the contemporary global village world. If you are immersed in Urdu poetry, you are transformed into a different world and you don’t want to get back. It is like being on a trip. That is why I am contented to lock myself in my room and get lost in the Sufi world.”

 As for why he didn’t write poetry, he says, “I am only a poetry lover, not a poet. My wife is my life and I don’t have to write poetry to communicate with her.”

 Very fresh thought, indeed.

 Surakod became a Faiz fan during his college days. “I was an Iqbal fan. But I was devastated when after writing ‘Sare Jahan se achcha, Hindustan hamara..’, he opted for an Islamic nation and supported Jinnah. Faiz was more committed to his ideology and he wrote extraordinary poetry. Faiz died when I was working for a newspaper. I was traumatised. Later, when Chintana Pustaka asked me to write Faiz’s biography, I was more than happy to oblige. The prose I could write as it was my original work, but the poetry that I used in between was difficult. People say that if Faiz had not got involved in revolution and was not jailed, he would have become a greater poet. I say it was because of it that he wrote great poetry. I remember the famous singer Iqbal Banu used to sing Faiz’s ghazals even while he was in jail. At times when she sang Hum Dekhenge…’, 50,000 people would gather to listen. It is my favorite poem,” he says.

 Catch Hasan Nayeem Surakod next week if he comes to Bangalore for the launch of his book ‘Faiznama’.

Faiz Nama cover 1