26. ಡಿ.ಡಿ.ಕೊಸಾಂಬಿ ನಿಮಗೆ ತಿಳಿದಿರಲಿ


ಸಂ: ವಸಂತರಾಜ ಎನ್.ಕೆ.
ಪುಟಗಳು: ೧೩೭ ಬೆಲೆ: ೮೫ ರೂ.
ಪ : ಚಿಂತನ ಪುಸ್ತಕ, ಜಯನಗರ ೪ನೇ ಬ್ಲಾಕ್,
೩೮ನೇ ಅಡ್ಡರಸ್ತೆ, ಬೆಂಗಳೂರು-೪೧.
ಕನ್ನಡ ಓದುಗರಿಗೆ ತಿಳಿಯದ,ತಿಳಿಯಲೇಬೇಕಾದ, ಸಮಗ್ರವಾಗಿ ತಿಳಿಯಬೇಕಾದ ವ್ಯಕ್ತಿಗಳು, ಚಾರಿತ್ರಿಕ ಘಟನೆಗಳು, ಪರಿಕಲ್ಪನೆಗಳು, ಸಂಸ್ಥೆಗಳ ಬಗ್ಗೆ ಸಮಗ್ರ ಪರಿಚಯ ನೀಡುವ ನಿಮಗೆ ತಿಳಿದಿರಲಿ ಚಿಂತನ ಪುಸ್ತಕದ ಪ್ರಥಮ ಕೃತಿ ಈ ಪುಸ್ತಕ. ಡಿ.ಡಿ.ಕೊಸಾಂಬಿ ನಮ್ಮ ದೇಶದ ಸಮಾಜ ಮತ್ತು ಪ್ರಾಕೃತಿಕ ವಿಜ್ಞಾನಕ್ಕೆ
ಕೊಡುಗೆ ನೀಡಿದ ಅಪರೂಪದ ವಿಜ್ಞಾನಿಗಳಲ್ಲೊಬ್ಬರು. ಭಾರತದ ಇತಿಹಾಸ ರಚನೆಗೆ ಮೂಲಭೂತ ಕಾಣಿಕೆ ನೀಡಿದ, ಅಣು ಯುದ್ಧದ ವಿರುದ್ಧ ವಿಶ್ವ ಶಾಂತಿಗೆ,
ವಿಜ್ಞಾನದ ಸದ್ಬಳಕೆಗೆ ದನಿ ಎತ್ತಿದವರು. ೨೦೦೭-೦೮ರಲ್ಲಿ ಅವರ ಶತಮಾನೋತ್ಸವ ಆಚರಿಸಲಾಯಿತು. ಕರ್ನಾಟಕದ ಜನತೆಗೆ ಕನ್ನಡದಲ್ಲಿ ಕೊಸಾಂಬಿಯವರ ಜೀವನ, ಕೃತಿ, ಕೊಡುಗೆಗಳ ಬಗ್ಗೆ ಸಮಗ್ರ ಪರಿಚಯ ನೀಡುವ ಪ್ರಯತ್ನ ಇದಾಗಿದೆ.

Advertisements