20. ಜ್ಯೋತಿ ಬಸು : ಅಧಿಕೃತ ಜೀವನ ಚರಿತ್ರೆ


ಜ್ಯೋತಿ ಬಸು ಅವರು ನಮ್ಮ ದೇಶದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿಶಿಷ್ಟ ವ್ಯಕ್ತಿತ್ವವಾಗಿ ಬೆಳೆದು ನಿಂತವರು. ಅವರ ಪ್ರಬುದ್ಧ ಬೆಳವಣಿಗೆಗಳನ್ನು ಸುರಭಿ ಬ್ಯಾನರ್ಜಿಯವರು ಈ ಪುಸ್ತಕದಲ್ಲಿ ಸಾರ್ಥಕ ರೀತಿಯಲ್ಲಿ ನಿರೂಪಿಸಿದ್ದಾರೆ. ಜ್ಯೋತಿ ಬಸು ಅವರ ಬೆಳವಣಿಗೆಯಷ್ಟೇ ಅಲ್ಲದೆ ಭಾರತದ ಕಮ್ಯುನಿಸ್ಟ್ ಚಳವಳಿಯ ಬೆಳವಣಿಗೆಯೂ ಹಿನ್ನೆಲೆಯಲ್ಲಿ ಹರಿಯುತ್ತದೆ. ಎಲ್ಲ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಯವರು ಅನುಸಂಧಾನಿಸಲು ಯೋಗ್ಯವಾದ ಕೃತಿ ಎಂದಿದ್ದಾರೆ ಬೆನ್ನುಡಿ ಬರೆದಿರುವ ಪ್ರೊ. ಬರಗೂರು

– ಪುಸ್ತಕದಂಕಣ (ಸಂಯುಕ್ತ ಕರ್ನಾಟಕ ಬೆಂಗಳೂರು – 13-09-2010)

Advertisements

‘ಬಸು- ಕೃತಿ ಅನಾವರಣ
ಪ್ರಜಾವಾಣಿ ವಾರ್ತೆ

ಬೆಂಗಳೂರು: `ಅಧಿಕಾರಿ ಎನ್ನುವ ಅಹಂಕಾರವನ್ನು ತೆಗೆದು ಹಾಕುವ ರಾಜ್ಯವದು. ಅಧಿಕಾರಿಗಳು ಭ್ರಷ್ಟರಾಗುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಪರಸ್ಪರ ಗೌರವ, ಸಮಾನತೆ ಅಲ್ಲಿಯ ಬೇರುಮಟ್ಟದ ಸಂಪ್ರದಾಯ. ಬಾಡಿಗೆ ಮನೆಯಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದ ರಾಜಕಾರಣಿ `ಬಾಬು’ಗಳು ರೈಲು-ಟ್ರಾಮ್‌ಗಳಲ್ಲಿ ಓಡಾಡಿಕೊಂಡಿರುತ್ತಿದ್ದರು…’

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಪಶ್ಚಿಮ ಬಂಗಾಳದ ತಮ್ಮ ಹಳೆಯ ನೆನಪುಹಂಚಿಕೊಳ್ಳಲು ಚಿಂತನ ಪುಸ್ತಕ ಪ್ರಕಾಶನ ವೇದಿಕೆ ಕಲ್ಪಿಸಿಕೊಟ್ಟಿತು.ನಗರದ ಸುಬ್ಬಯ್ಯ ವೃತ್ತದ ಬಳಿ ಇರುವ ಎಸ್‌ಸಿಎಂ ಸಭಾಂಗಣದಲ್ಲಿ ದಿ. ಜ್ಯೋತಿ ಬಸು ಅವರ ಅನುವಾದಿತ ಜೀವನ ಚರಿತ್ರೆಯ ಕೃತಿ ಬಿಡುಗಡೆ ಕಾರ್ಯಕ್ರಮ ಗುರುವಾರ ನಡೆಯಿತು. `ಐಎಎಸ್ ಮುಗಿದ ನಂತರ 1994ರಲ್ಲಿ ಪ್ರೊಬೇಶನರಿ ಅವಧಿಗೆಂದು ಪಶ್ಚಿಮ ಬಂಗಾಳದ ಬುರ್‌ದ್ವಾರ್ ಜಿಲ್ಲೆಗೆ ತೆರಳಿದೆ. ಜ್ಯೋತಿ ಬಸು ಅವರ ಆಡಳಿತಾವಧಿಯಲ್ಲಿ 12 ವರ್ಷ ಅಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೆ’ ಎಂದು ಮಂಜುನಾಥ ಪ್ರಸಾದ್   ಹೇಳಿದರು.

`ಎರಡು ವರ್ಷದ ಪ್ರೊಬೇಶನರಿ ಅವಧಿಯಲ್ಲಿ ಕ್ಷೇತ್ರಕಾರ್ಯಕ್ಕೆಂದು ಪಶ್ಚಿಮ ಬಂಗಾಳದ ಹಳ್ಳಿಹಳ್ಳಿಗಳಿಗೆ ಹೋದ ಅನುಭವ ನಿಜಕ್ಕೂ ಅವಿಸ್ಮರಣೀಯ. ಅಲ್ಲಿಯ ಜನಸಾಮಾನ್ಯರ ಉಭಯ ಕುಶಲೋಪರಿ ವಿಚಾರಿಸುತ್ತ… ಜೀವನಕ್ಕೆ ಏನು ಮಾಡಿಕೊಂಡಿದ್ದೀರಿ? ಎಂದು ಕೇಳಿದಾಗ ಅವರು ಸಿಪಿಎಂ ಮಾಡ್ತಿದಿನಿ, ಕಾಂಗ್ರೆಸ್ ಮಾಡ್ತಿದಿನಿ… ತೃಣಮೂಲ್…

ಎಂದು ಹೇಳುತ್ತಿದ್ದಂತೆ ಆಶ್ಚರ್ಯವಾಗುತ್ತಿತ್ತು… ಇದರರ್ಥ ಅವರು ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಈ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ ಆ ಸಾಮಾನ್ಯ ಜನರಲ್ಲಿ ರಾಜಕೀಯ ಪ್ರಜ್ಞೆ ಸ್ಥಿರವಾಗಿತ್ತು’ ಎಂದು ನೆನಪಿಸಿಕೊಂಡರು.ಚಿಂತಕ ಡಾ. ಜಿ. ರಾಮಕೃಷ್ಣ, ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಸುರಭಿ ಬ್ಯಾನರ್ಜಿ ರಚಿಸಿದ ಜ್ಯೋತಿ ಬಸು ಅವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ ಪ್ರೊ. ಆರ್.ಕೆ. ಹುಡಗಿ, ಸಿಪಿಎಂನ ಬೆಂಗಳೂರು ಘಟಕದ ಕಾರ್ಯದರ್ಶಿ ಕೆ. ಪ್ರಕಾಶ್ ಉಪಸ್ಥಿತರಿದ್ದರು.

ಇದೇ ಜುಲೈ ೮ ರಂದು ಎಸ್.ಸಿ.ಎಮ್. ಹೌಸ್ ಸಭಾಂಗಣದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ‍್ ಅಹಮದ್ ಅವರಿಂದ ಜ್ಯೋತಿ ಬಸು ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆಯಾಗಲಿದೆ. ಚಿಂತಕರಾದ ಜಿ. ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಿ.ಪಿ.ಐ.(ಎಂ) ಮುಖಂಡರಾದ ಜಿ.ಎನ್. ನಾಗರಾಜ್ ಅಲ್ಲದೆ ಜ್ಯೋತಿ ಬಸು ಅವರೊಡನೆ ಸ್ವಲ್ಪಕಾಲ ಕೆಲಸ ಮಾಡಿದ ಐ.ಎ.ಎಸ್. ಆಫೀಸರ‍್ ಆದ ಎನ್. ಮಂಜುನಾಥ್ ಅವರೂ ಹಾಗೇ ಪುಸ್ತಕದ ಅನುವಾದಕರಾದ ರಾಹು ಅವರು ಮಾತನಾಡುತ್ತಾರೆ.

ನಿಮಗೆಲ್ಲರಿರೂ ಆದರದ ಸ್ವಾಗತ