castro-cover-1

ಫೀಡೆಲ್ ಕಾಸ್ಟ್ರೋ ಇಂದು ಬದುಕಿರುವ ಜಗತ್ತಿನ ಕ್ರಾತೀಕಾರಿ ನಾಯಕರಲ್ಲಿ ಅತ್ಯಂತ ಎತ್ತರದ ವ್ಯಕ್ತಿ. ….

ಫೀಡೆಲ್ ಕಾಸ್ಟ್ರೋ ಪ್ರಚಂಡ ಮಾತುಗಾರ. ಜಗತ್ತಿನ ಎಲ್ಲಾ ರೀತಿಯ ಆಗುಹೋಗುಗಳ ಬಗ್ಗೆ ಪ್ರಕಾಂಡ ಪಂಡಿತ. ಅವರ ದೀರ್ಘ ಭಾಷಣಗಳ ಸುತ್ತ ಹಲವು ಕತೆಗಳಿವೆ. …..

ಅವರ ಭಾಷಣಗಳು, ಕಳೆದ ಅರ್ಧ ಶತಮಾನದ ಜಗತ್ತಿನ ಆಗುಹೋಗುಗಳ ವೈಜ್ಞಾನಿಕ ವಿಶ್ಲೇಷಣೆಯ ಅಮೂಲ್ಯ ಜೀವಂತ ನಿಧಿ. ಲ್ಯಾಟಿನ್ ಅಮೇರಿಕದ ಜನ ಅವರ ಭಾಷಣಗಳ ರೆಕಾರ್ಡ್ ಕೇಳುತ್ತಾರಂತೆ. ಇಂಟರ್‌ನೆಟ್ ನಲ್ಲೂ ಅವರ ಭಾಷಣಗಳು ಅವರ ಭಾಷಣಗಳ ರೆಕಾರ್ಡ್ ವಿಪುಲವಾಗಿವೆ. ಕಳೆದ ಒಂದು ವರ್ಷದಿಂದ ಮಾತ್ರ ಅವರು ಮೌನವಾಗಿದ್ದಾರೆ. ಆದರೆ ಸುಮ್ಮನಿಲ್ಲ! ಅವರು ತಮ್ಮ ಅನಿಸಿಕೆಗಳನ್ನು ದಿನಾ ಎಂಬಂತೆ ಬರೆಯಲಾರಂಭಿಸಿದ್ದಾರೆ. ಅವರ ಹಿಂದಿನ ಭಾಷಣಗಳನ್ನು ಮೆಲುಕು ಹಾಕಲು ಬಹುಶಃ ಇದು ಸರಿಯಾದ ಸಮಯ. …

ಇದು `ಚಿಂತನ ಪುಸ್ತಕ`ಸ್ಯಾಂಪಲ್ ಓದುಮಾಲಿಕೆಯ ಮೊದಲ ಪುಸ್ತಕವೂ ಹೌದು. ಜಗತ್ತಿನ ಪ್ರಮುಖ ದೃಷ್ಟಾರರ, ಚಿಂತಕರ, ಸಾಹಿತಿಗಳ ಅದ್ಭುತ ಕೃತಿಗಳ ಇಣುಕು ನೋಟ ನೀಡುವ ಇಂತಹ ಕಿರು ಪುಸ್ತಕಗಳನ್ನು ತರುವ ಯೋಜನೆ ನಮ್ಮದು.