07. ಬಿ ನೆಗೆಟಿವ್


B Negative,

by Ravikumar K.S

Chintana Pusthaka

Will there be any poems in dark times? Yes there will be dark poems in dark times!!!- Bertolt Brecht

G.N. Mohan aptly recollects this poem of Brecht in his foreword to the book “B Negative” by Ravikumar K.S, which attempts to bring the form of sketches, started and popularised by the master story teller Sadat Hassan Manto, to Kannada.

B Negative Cr Final-2

This book, which is a collection of 38 sketches, attempts to capture the communal violence which surrounds us. They look at the small actors of the mega-narrative of communal violence. Women, children and dalits are the main actors in these sketches.

This sketch encapsulates all the main actors of the sketches: “Mom… vegetable curry!” “Shhh… stop the fuss and eat what I’ve given you. Haven’t sold a thing in four days, they are shouting ‘Hindus! and Muslims!’,” “Why is all this happening Mom?” “What can I say…perhaps just to finish off all other religions to emancipate their own.” “Then who are we, mom?” “We are untouchables, son”, the mother sighed.

The brutality of men is another archetype in the sketches of Ravikumar K.S.As one flips through the pages of the book the echo of Manto is heard and reheard. With flashes of brilliance, “B Negative” fails to escape the shadow of Manto’s sketches. The echo is so obvious that at times one can see Manto’s signature more on certain sketches, than that of Ravikumar.

While it is debatable if it is the failure of Ravikumar or the strength of Manto, Ravikumar accepts the strong influence of Manto on his writings and justifies it saying “I have tried to continue the legacy of Manto.”

Some sketches also appear unconvincing perhaps, because Ravikumar has not directly encountered communal violence. It is through reading newspapers, watching television and reading stories of the Partition that he has sculpted these stories. It is through imagination that he tries to construct the real world and not by witnessed reality, and in that he creates fiction.

But he does succeed in certain places to transcend the inexperience through his creativity. The book is meaningful, specially in the context of the violence in Mangalore. And it is sad that even after more than 60 years of Independence and Partition we are forced to recollect the lines which G.N. Mohan quotes in his foreword: “This mottled dawn, this night-bitten morning. No this is not the day we had set out in search of!!!” -Faiz Ahmed Faiz.

B.A. SAMVARTHA

Advertisements

1tif

ಇತ್ತೀಚೆಗೆ ಬಿಡುಗಡೆಯಾದ ಕೆ ಎಸ್ ರವಿಕುಮಾರ್ ಅವರ ಮಿನಿ ಕತೆಗಳ “ಬಿ- ನೆಗೆಟೀವ್”  ಮಿನಿ ಪುಸ್ತಕಕ್ಕೆ ಜಿ ಎನ್ ಮೋಹನ್ ಬರೆದ ಗಮನಾರ್ಹ ಮುನ್ನುಡಿ.

ಅವು ಎಳೆಯ ಕಾಲುಗಳು. ಅವುಗಳಿಗೆ ಕುಣಿಯುವುದಷ್ಟೇ ಗೊತ್ತು. ಆಟ ಬೇಕೆಂದಾಗ ಹತ್ತಾರು ಜನರ ಗುಂಪಿರಬೇಕು. ರಸ್ತೆ ತುಂಬಾ ಕೇಕೆ ಹಾಕಿ ಮೈ ದಣಿಯ ಲಗೋರಿ, ಜೂಟಾಟ, ಕಣ್ಣಾಮುಚ್ಚಾಲೆ ಆಡಬೇಕು. ಈ ಎಳೆಯ ಕಾಲುಗಳಿಗೆ, ಕೇಕೆ ಹಾಕುತ್ತಿದ್ದ ದನಿಗಳ ಮಧ್ಯೆ ಇವರು ಹಿಂದೂ ಮನೆಯವರು, ಇವರು ಮುಸ್ಲಿಂ ಮನೆಯವರು ಎಂಬ ಗೋಡೆ ಎದ್ದು ನಿಂತಿತಲ್ಲಾ ಅದಕ್ಕೇ

***

ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಅವರ ಲಗಾನ್, ಕಾಮೋಶಿ, ಸ್ವದೇಸ್ ನೋಡಿ ಅವರೊಳಗೊಂದಾಗಿ ಹೋಗುತ್ತಿದ್ದಾಗ ಅವರು ನಮ್ಮವರಲ್ಲ ಎಂದು ಡಂಗುರ ಸಾರಿ ಹೃತಿಕ್ ರೋಷನ್ ನನ್ನು ಬಿಂಬಿಸಿದರಲ್ಲಾ, ಅದಕ್ಕೆ-

***

ಹೃತಿಕ್ ರೋಷನ್ ನ ಆ ಮುಗ್ಧತೆ, ಆ ಸೆಳೆಯುವ ಕಣ್ಣು ಒಂದೇ ಏಟಿಗೆ ಚಿತ್ ಮಾಡುವ ಕುಣಿತದತ್ತ ಮಾರುಹೋಗುತ್ತಿದ್ದಾಗ ಅವನನ್ನು ಯಾವುದೋ ಒಂದು ಧರ್ಮಕ್ಕೆ ಮಾತ್ರ ಕಟ್ಟಿ ಹಾಕಿಬಿಟ್ಟರಲ್ಲಾ, ಅದಕ್ಕೆ-

***

ಶಾರುಖ್ ಮದುವೆಯಾಗಿದ್ದು ಗೌರಿಯನ್ನು, ಮಗನ ಹೆಸರು ಇಬ್ಬರೂ ಇಷ್ಟಪಟ್ಟು ಇಟ್ಟ ಆರ್ಯನ್ ಎಂಬುದನ್ನು ಮರೆತು ಹೋದರಲ್ಲಾ, ಅದಕ್ಕೆ-

***

ಹೃದಯ ಮಾತ್ರ ಮಾತಾಡಿ, ಇಬ್ಬರೂ ಜೊತೆಯಾಗಿ ಕನಸುಗಳ ಟಕಿಸಿಕೊಳ್ಳಲು ಹೊರಟಿದ್ದಾಗ ಅವ ಹಿಂದೂ, ಈಕೆ ಮುಸ್ಲಿಂ ಎಂಬ ಪಟ್ಟ ಕಟ್ಟ್ಟಿಬಿಟ್ಟರಲ್ಲಾ, ಅದಕ್ಕೆ-

***

ಜಾತಿಯನ್ನು ಧಿಕ್ಕರಿಸಿದ್ದ ವಚನಕಾರರ ಮೋಡಿಗೆ ಒಳಗಾಗಿ, ವಚನದ ಸಾಲು ಸಾಲುಗಳನ್ನೂ ಎದೆಯಾಳಕ್ಕೆ ಇಳಿಸಿPÉÆAಡು, ಹೋದೆಡೆಯಲ್ಲಾ ಜನರ ಮನದೊಳಗೆ ಕೂಡಿಸಲು ಪ್ರಯತ್ನ ಮಾಡುತ್ತಿದ್ದಾಗ ಸಾಬಿ, ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾನೆ ನೋಡಿ ಎಂದರಲ್ಲಾ, ಅದಕ್ಕೆ-

***

ಗೆದ್ದಾಗ ಗೆದ್ದೆತ್ತಿನ ಬಾಲ ಹಿಡಿದು, ಸೋತಾಗ ಹಣ್ಣಾಗುವಂತೆ ಬಡಿದಾಗ ಅಜರುದ್ದೀನ್ ಪಾಕಿಸ್ತಾನದ ವಿರುದ್ಧ ಒಂದು ಸಿಕ್ಸರ್ ಎತ್ತಲಾಗದೆ ಔಟಾದಾಗ ಪಾಕಿಸ್ತಾನದ ಜೊತೆ ಮಿಲಾಖತ್ ಮಾಡಿಕೊಂಡಿದ್ದಾನೆ ಎಂಬ ಮಾತು ಆಡಿದರಲ್ಲಾ, ಅದಕ್ಕೆ-

***

`ಬೆಣ್ಣೆ ಕದ್ದ ನಮ್ಮ ಕೃಷ್ಣ, ಬೆಣ್ಣೆ ಕದ್ದನಮ್ಮಾ.. ಎಂದು ನಿಸಾರ್ ಅಹ್ಮದ್ ಆ ತುಂಟ, ಕಳ್ಳ ಕೃಷ್ಣನನ್ನು ನಮಗೆ ಇಷ್ಟವಾಗುವಂತೆ ಮಾಡಿದಾಗ `ಎಲ್ಲಿಯ ನಿಸಾರ್, ಎಲ್ಲಿಯ ಕೃಷ್ಣ ಎಂದು ಬಿಟ್ಟರಲ್ಲಾ, ಅದಕ್ಕೆ-

***

`ನಾನು ನಗೀನ್ ಅಹ್ಮದ್, ಕನ್ನಡ ಎಂ ಎ ಅಂದಾಗ `ಹ್ಹಾಂ, ಕನ್ನಡ ಎಂ ಎ ನಾ ಎಂದು ಇಷ್ಟಗಲ ಬಾಯಿ ಬಿಡುವಂತೆ ಮಾಡಿದಿರಲ್ಲಾ, ಅದಕ್ಕೆ-

***

`ಈತ ನನ್ನ ಕ್ಲೋಸ್ ಫ್ರೆಂಡ್, ಇದ್ದದ್ದು ನೇರವಾಗಿ ಹೇಳಿಬಿಡ್ತೀನಿ ಈತ ಮುಸ್ಲಿಂ, ನೀವು ಬೇಡ ಅಂದ್ರೆ ಮನೇನಲ್ಲಿ ನಾನ್ ವೆಜ್ ಮಾಡಲ್ಲ, ಪ್ರಾಮಿಸ್ ಈತ ನಿಜಕ್ಕೂ ಒಳ್ಳೆಯವನು ಅಂತಾ ನಾವು ಶಿಫಾರಸ್ ಮಾಡುವ ಹಾಗೆ ಮಾಡಿದ್ರಲ್ಲಾ, ಅದಕ್ಕೆ-

***

ಸರ್ ನನ್ನ ಹೆಸರು ಹುಚ್ಚೂಸಾಬ್, ಸರ್ ನಾನು ಮೊಯಿದ್ದೀನ್, ಸರ್ ನಾನು ಶೇಖ್ ಷಾ ವಲಿ, ಸರ್ ನಾನು ಹನೀಫ್, ಸರ್ ನಾನು… ಅಂತ ಇಂಟರ್ ವ್ಯೂ ರೂಂನಲ್ಲಿ ಹೆಸರು ಹೇಳುವುದಕ್ಕೇ ನೂರು ಸಲ ಬೆಚ್ಚುವ ಹಾಗೆ ಮಾಡಿದಿರಲ್ಲ, ಅದಕ್ಕೆ-

***

ನಾನು ಆ ಹುಡುಗೀನ ಮದುವೆ ಆದೆ. ಆದ್ರೆ ಕೆಟ್ಟ ಟೈಂ ಮಸೀದಿ ಬೀಳಿಸಿದಾಗಲೇ ಆಗಿಬಿಟ್ಟೆ, ಎಲ್ಲಾ ಕಡೇನೂ ನಮ್ಮನ್ನ ಹಡುಕ್ತಾ ಇದಾರೆ. ನಿಮ್ಮನೇಲಿ ನಾಲ್ಕು ದಿನ ತಲೆಮರೆಸಿ ಕೊಳ್ಳೋಕೆ ಅವಕಾಶ ಕೊಡ್ತೀರಾ ಅಂತ ಆತ ಎರಡು ಹನಿ ಕಣ್ಣೀರು ಹಾಕುವ ಹಾಗೆ ಮಾಡಿದಿರಲ್ಲಾ, ಅದಕ್ಕೆ-

***

`ನಿಮ್ಮದರಲ್ಲಿ ಬಿಡಪ್ಪಾ, ಎಷ್ಟು ಜನಾನೂ ಮದ್ವೆ ಮಾಡ್ಕೋಬೋದು, ಮಜಾಂದ್ರೆ ಮಜಾ ಅಂತ ಬಿಯರು ಹೀರುವಾಗ ಹ ಹ ಹಾ ಅಂತ ನಕ್ರಲ್ಲಾ, ಅದಕ್ಕೆ-

***

ಟಿಪ್ಪು ಸುಲ್ತಾನ್ ತನ್ನ ತಾಯಿ ಮೇಲಿನ ಪ್ರೀತಿಗಾಗಿ ಜಮಾಲಾಬಾದ್ ಕೋಟೆ ಕಟ್ಟಿದಾಗ ಅದು ಜಮಾಲಾಬಾದ್ ಅಲ್ಲ ನರಸಿಂಹಗಢ ಅಂತ ನೂರಾರು ವರ್ಷ ಆದ್ಮೇಲೆ ಕ್ಯಾತೆ ತೆಗೆದರಲ್ಲ, ಅದಕ್ಕೆ-

***

ಹಾಸನದಲ್ಲಿ ಬಸ್ ಹತ್ತಿ ರಾತ್ರಿ 11 ಗಂಟೇ ನಲ್ಲಿ ಉಪ್ಪಿನಂಗಡಿಯಲ್ಲಿ ಆ ಆರು ಜನ ಬಸ್ ಇಳಿದಾಗ `ತಕ್ಷಣ ಬಸ್ ಡಿಪೋಗೆ ಸುದ್ದಿ ಮಟ್ಟಿಸು, ಒಂದು ಕಣ್ಣಿಟ್ಟಿರ್ಲಿಅಂತ ಅಂದ್ರಲ್ಲ, ಅದಕ್ಕೆ-

ಈ ಎಲ್ಲಾ ಕಾರಣಕ್ಕಾಗಿಯೇ ಈ ಪುಸ್ತಕ `ಬಿ ನೆಗೆಟಿವ್ ಹೊರಬಂದಿದೆ.

ಆತನೊಬ್ಬನಿದ್ದ ಮಾಂಟೋ. ನೇರ ಕರುಳಿಗೇ ಕೈ ಹಾಕಿ ಕಥೆ ಹೇಳಿದಾತ. ಈಗ ರವಿಕುಮಾರ್. ಮಾಂಟೋನಿಂದ ಹಿಡಿದು ರವಿಕುಮಾರ್ ವರೆಗೆ ಎಲ್ಲರೂ ಹೇಳುತ್ತಿರುವುದು ನೋವಿನಕಥೆಗಳನ್ನೇ

ಬೆಳಕಿಗೆ ಮಸಿ ಮೆತ್ತಿಕೊಂಡಿದೆ

ಮುಂಜಾವಿಗೆ ಇರುಳ ನಂಜೇರಿದೆ

ಹಂಬಲಿಸಿ ಕಾದ ಬೆಳಗು

ಇದೇ ಏನಯ್ಯ.

ಎಂದು ನೋವಿನಿಂದ ಪ್ರಶ್ನಿಸಿದ್ದು ಫೈಜ್ ಅಹ್ಮದ್ ಫೈಜ್.

ಇದೇನಾ, ನಾವು ಕಾದಿದ್ದ ಬೆಳಗು ಎಂಬ ನಿಟ್ಟುಸಿರು ಹೆಚ್ಚುತ್ತಿರುವ ದಿನಗಳು ಇವು. ಅಂಧಕಾರದಲ್ಲಿ ಕ್ರಿಮಿಗಳ ಸಂತಾನ ಹೆಚ್ಚುತ್ತದೆ. ಕತ್ತಲಿದ್ದರೆ ತಾನೆ ರೋಗ ಹರಡುವ ಮಾತು. ಹಾಗಾದರೆ ಬೆಳಕು ಎಲ್ಲಿಂದ ಬರಬೇಕು? ರವಿಕುಮಾರ್ ಅವರು ಒಂದು ಬೆಳಕಿನ ತುಂಡೊಂದನ್ನು ನಮ್ಮ ಮುಂದಿಟ್ಟಿದ್ದಾರೆ.

ಕಗ್ಗತ್ತಲ ಕಾಲದಲ್ಲಿ

ಹಾಡುವುದು ಉಂಟೆ?

ಹೌದು, ಹಾಡುವುದೂ ಉಂಟು

ಕಗ್ಗತ್ತಲ ಕಾಲವನ್ನು ಕುರಿತು

ಎನ್ನುತ್ತಾನೆ ಬ್ರೆಕ್ಟ್. ರವಿಕುಮಾರ್ ಹಾಗೆ ಕಗ್ಗತ್ತಲ ಕಾಲದಲ್ಲಿ ಬರೆದಿದ್ದಾರೆ, ಕಗ್ಗತ್ತಲಿನ ಬಗ್ಗೆ.

8tif

ಐಡಿಯಾ. . .!

ಅವರು ನನ್ನಪ್ಪನನ್ನು ಚಾಕು ಹಾಕಿ ಕೊಂದರು.

ಇವರು ನನ್ನಮ್ಮನಿಗೆ ಬೆಂಕಿ ಹಚ್ಚಿದರು.

ಹಾಗಿದ್ರೆ ನಿನ್ನಮ್ಮ ನನ್ನಪ್ಪನನ್ನು ಮದುವೆ ಆದ್ರೆ ಹೇಗೆ? ನಾವಿಬ್ಬರೂ ತಬ್ಬಲಿ ಆಗೋದಿಲ್ಲ ಕಣೋ.

ಹೌದು, ಒಳ್ಳೇ ಐಡಿಯಾ . . . . ಇಬ್ಬರೂ ಬಾಲಕರು ಕಣ್ಣೊರೆಸಿಕೊಂಡರು.

(ಅವರಿಗೇನು ಗೊತ್ತು ಅವರ ಐಡಿಯಾದಂತಾದರೆ ಅವರು ಪೂರ್ತಿಯಾಗಿ ಅನಾಥರಾಗುವರೆಂದು?)

ನಾಯಿಹೆಣ

ನೀವು ಯಾಕೆ ಗಲಾಟೆ ಶುರುಮಾಡಿದ್ರಿ? ಇನ್ಸ್ಪೆಕ್ಟರ್ ಗಲಭೆಕೋರರನ್ನು ವಿಚಾರಿಸಿದ.

ಅವರು ಬಾವಿಗೆ ನಾಯಿ ಹೆಣ ಎಸ್ದಿದ್ರು

ಅವರೇ ಅಂತ ನೀವು ನೋಡಿದ್ದೀರಾ?

ಇಲ್ಲ.

ಮತ್ತೆ ಹ್ಯಾಗ್ ಹೇಳ್ತೀರಿ?

ಅವರಲ್ಲದೆ ಇಂಥ ಹಲ್ಕಾ ಕೆಲ್ಸ ಇನ್ಯಾರು ಮಾಡ್ತಾರೆ, ಸಾರ್?

ಇಷ್ಟೇ ಪ್ರೂಫ್ ಸಾಕಾ ಗಲಾಟೆಗೆ?!

ಸಾಕು.

ಹೋಗ್ಲಿ, ಬಾವಿಯಿಂದ ನಾಯಿ ಹೆಣ ತೆಗೆದ್ರಾ?

. . . . . . . . . .

ಸೋಲು

ಅಪ್ಪ, ಅಮ್ಮನನ್ನು ಚಚ್ಚಿ ಹಾಕಲಾಯಿತು. ಚಳಿ, ಹಸಿವುಗಳಿಗೆ ಸಾಯಲೆಂದು ಎಳೆ ಮಗುವನ್ನು ಉಳಿಸಲಾಯಿತು.

ಮಗು ಒಂದೇ ಸಮನೆ ಇಡೀ ದಿನ ಅತ್ತಿತು.

ಸಂಜೆ ಅತ್ತ ಸುಳಿದ ಪೇದೆಗೆ ಮಗುವಿನ ಕ್ಷೀಣದನಿ ಕೇಳಿತು. ಅವನು ಮಫ್ಲರ್ ನಲ್ಲಿ ಮಗುವನ್ನು ಬೆಚ್ಚಗೆ ಸುತ್ತಿ ತಂದು ಹೆಂಡತಿಯ ಮಡಿಲಲ್ಲಿ ಮಲಗಿಸಿ ಮುಗುಳುನಕ್ಕನು.

ಕೊಲೆಗಡುಕರ ಲೆಕ್ಕಾಚಾರಕ್ಕೆ ಸೋಲಾಯಿತು.

ಬಿನೆಗೆಟಿವ್

ಮಗಾ, ನಂಗೆ ಯಾರು ರಕ್ತ ಕೊಟ್ಟಿದ್ದು?

ಅಪ್ಪಾ, ಪಕ್ಕದ್ಮನೆ . . . .

ಆಂ. . . . . ! ಆ ದನ ತಿನ್ನೋನ ರಕ್ತನಾ ?”

ಅಪ್ಪ ಮೂರ್ಛೆ ಹೋದ.

b-negative-cr-final-12
ರಾಜ್ಯದ ಸಾಹಿತಿಗಳು, ಕಲಾವಿದರು, ಚಿಂತಕರು ಕೂಡಿ, ನಮ್ಮ ಕಡಲ ನಾಡು, ಮಂಗಳೂರಿನಲ್ಲಿ ಆಯೋಜಿಸಿದ ಸೌಹಾರ್ದ ನಡಿಗೆ, ಸೌಹಾರ್ದ ಸಮಾವೇಶದಲ್ಲಿ ಕೆ.ಎಸ್. ರವಿಕುಮಾರ್ ಅವರ ಬಿ ನೆಗೆಟಿವ್ – ನೋವಿನದೊಂದು ಮೂಟೆ ಪುಸ್ತಕ ಬಿಡುಗಡೆಯಾಗಲಿದೆ.

ರಂಗ ನಿರ್ದೇಶಕರಾದ ಪ್ರಸನ್ನ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ಮೀನಾಕ್ಷಿ ಬಾಳಿ, ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಆರ್ ಕೆ ಹುಡಗಿ, ಟೀವೀ ಧಾರಾವಾಹಿ ನಿರ್ದೇಶಕರಾದ ಬಿ. ಸುರೇಶ್ ಮುಂತಾದ  ವಿವಿಧ ರಂಗದ ದಿಗ್ಗಜರ ಸಮ್ಮುಖದಲ್ಲಿ ಈ ಪುಸ್ತಕ ಇಂದು (14-3-2009) ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.

ಕರ್ನಾಟಕ ಸೌಹಾರ್ದ ಪರಂಪರೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಸಬಲ್ಲ ಮಿನಿ ಕತೆಗಳ ಸಂಕಲನವಾದ ಈ ಪುಸ್ತಕ ಎಲ್ಲರ ಕಿಸೆ (pocket) ಗೆ ಬೆಲೆ ಹಾಗೂ ಅಳತೆ ಎರಡೂ ರೀತಿಯಿಂದ ನಿಲುಕುವಂತಹ ಪುಸ್ತಕ.

ಹೌದು ಇದೊಂದು pocket book. ಇದರ ಬೆಲೆ ಕೇವಲ ಇಪ್ಪತ್ತು ರೂಪಾಯಿ ಮಾತ್ರ.

ಕನ್ನಡ ಮಾತ್ರವೇ ಓದಬಲ್ಲ ಹಿರಿಯರು ಮತ್ತು ಇಂಗ್ಲೀಷ್ ಮಾತ್ರವೇ ಓದಬಲ್ಲ ಕಿರಿಯರಿರುವ ಈಗಿನ ಸನ್ನಿವೇಶದಲ್ಲಿ ಮನೆ ಮಂದಿಯೆಲ್ಲ ಓದಬಲ್ಲ ಪುಸ್ತಕ ಇದು.