ಲೇಖಕರಿಗೆ ಸಂಬಂಧಿಸಿ


img-20170209-wa0089img-20170209-wa0084

ಈ ಸಂಕಲನದಲ್ಲಿ ಐದು ಕಥೆಗಳಿವೆ. ಪ್ರತಿಯೊಂದು ಕಥನವೂ ಒಂದು ರೀತಿಯ ವೈದ್ಯಕೀಯ ಸಮಸ್ಯೆಯನ್ನು ಕುರಿತಾದದ್ದು. ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಈ ಜಬಾಬ್ದಾರಿಗೆ ಸ್ಪಂದಿಸುವ ಹಾಗೆ ಈ ಕಥನ ಸಂಕಲನ ಹೊರಬಂದಿದೆ. ವೈದ್ಯಕೀಯ ಪಾರಿಭಾಷಿಕ ಪದಗಳೆ ವಿಜೃಂಭಿಸಬಹುದಾಗಿದ್ದ ಕೃತಿಯಲ್ಲಿ, ಆ ಪದಗಳ ಅರ್ಥ ವಿವರಿಸುತ್ತಾ ಕಥಾ ಹಂದರದಲ್ಲಿ ಹೆಣೆದಿರುವ ರೀತಿ ಸ್ತುತ್ಯ‍ರ್ಹ. ಶೈಲಿ ಸರಳ ಸುಂದರವಾಗಿದೆ. ಭಾಷೆಯು ವೈದ್ಯಕೀಯ ಸಮಸ್ಯೆಗಳನ್ನು ವಿವರಿಸುವಾಗ ಪಾರಿಭಾಷಿಕವಾಗುತ್ತದೆ. ಮಿಕ್ಕ ಸಮಯದಲ್ಲಿ ರೂಪಕ, ಪ್ರತಿಮೆ ಮುಂತಾದ ಸಾಹಿತ್ಯಕ ಅಂಶಗಳಿಲ್ಲದೆ, ಸರಳವಾಗಿ ಕ್ರಿಯೆಯನ್ನು ದಾಖಲಿಸುವ ಶೈಲಿಯಲ್ಲಿದ್ದು ಕಥನ ಕ್ರಮಕ್ಕೆ ಇಂಬು ನೀಡುತ್ತದೆ.

ಎಸ್.ವಿ.ಕಶ್ಯಪ್

ವಿಶೇಷ ಅಗತ್ಯವುಳ್ಳ ಮಕ್ಕಳ ನಿಜ ಜೀವನದ ಕಥೆಗಳನ್ನು ಕಾಲ್ಪನಿಕ ಹೆಸರುಗಳೊಂದಿಗೆ ನವಿರಾಗಿ ನಿರೂಪಿಸಿ ಅಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಪಾಲಕರ ಜವಾಬ್ದಾರಿಗಳೇನು, ಸಮಾಜದ ದೃಷ್ಟಿಕೋನ ಹೇಗಿದೆ, ಹೇಗೆ ಅದನ್ನೆಲ್ಲಾ ನಿಭಾಯಿಸಿ ಜೀವನ ನಡೆಸಬೇಕು ಎಂಬುದನ್ನು ತಿಳಿಸಿಕೊಡುವ ಅಪರೂಪದ ಕಥಾಸಂಕಲನ ಇದು. ವಿಶೇಷ ಮಕ್ಕಳ ಆರೈಕೆಗಾಗಿ ಕೆಲಸಮಾಡುತ್ತಿರುವ ಸಂಸ್ಥೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚುಕಾಲ ತೊಡಗಿಸಿಕೊಂಡು ಅಲ್ಲಿನ ಅನುಭವಗಳನ್ನು ಲೇಖಕಿ ನೀಳ್ಗತೆಗಳಲ್ಲಿ ನಿರೂಪಿಸಿದ್ದಾರೆ. ಅನುಕಂಪಕ್ಕಿಂತ ಅವಕಾಶ ಕಲ್ಪಿಸಿಕೊಡಬೇಕು ಅನ್ನುವುದಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಬೇದ್ರೆ ಮಂಜುನಾಥ್

ಸರ್ಕಾರದ ಗೆಜೆಟಿಯರ್ ನಲ್ಲೇ `ವಿಕಲಾಂಗ ಚೇತನ’ ಎಂಬ ಪದ ನುಸುಳಿರುವ ಹೊತ್ತಿನಲ್ಲಿ ವಿಶೇಷ ಚೇತನರ ಕುರಿತು ಕಥೆಗಳು ಪ್ರಕಟವಾಗಿರುವುದು ಖುಷಿಯ ವಿಚಾರ. ಬಹುಶಃ ಕನ್ನಡದಲ್ಲೇ ಇದೊಂದು ವಿಶಿಷ್ಟ ಪ್ರಯತ್ನವೆಂದು ಹೇಳಬಹುದು. ಕಥನ ಕೌಶಲ್ಯ, ಭಾಷಾವೈವಿಧ್ಯತೆಯ ಎಲ್ಲೆಯನ್ನು ದಾಟಿದ ಒಂದು ಮಾನವೀಯ ಪ್ರಜ್ಞೆ ಈ ಕೃತಿಯಲ್ಲಿದೆ. ಇದು ಈ ಕಾಲದ ತುರ್ತು ಕೂಡ. ಇಂಗ್ಲೀಷ್ ಪದಗಳನ್ನು ಕೆಟ್ಟದಾಗಿ ಕನ್ನಡೀಕರಿಸುತ್ತಿರುವ ಈ ಹೊತ್ತಿನಲ್ಲಿ ಲೇಖಕರು ಅಂತಹ ಅನಾಹುತ ಮಾಡದೆ ಅವುಗಳನ್ನು ಮೂಲದಲ್ಲೆ ಉಳಿಸಿದ್ದಾರೆ. ವೈದ್ಯಕೀಯ ಪರಿಭಾಷೆಯ ಪದಬಳಕೆಯಲ್ಲೂ ಹೊಸತನವಿದೆ.

ವಿ.ಆರ್.ಕಾರ್ಪೆಂಟರ್

ಕೃಪೆ :  ಕರ್ನಾಟಕ ಸಾಹಿತ್ಯ ಅಕಾಡೆಮಿ – ಬೆಂಗಳೂರು ಪ್ರಕಟಿಸಿದ ಬಹುಮಾನಿತ ಕೃತಿಗಳು 2015

scan0028 scan0029  scan0030scan0031 scan0032 scan0033

ಚಿಂತನ ಪುಸ್ತಕಕ್ಕೆ ಇನ್ನೊಂದು ಪ್ರಶಸ್ತಿಯನ್ನು ತಂದು ಕೊಟ್ಟ ಚಂಪಾ ಜೈಪ್ರಕಾಶ್ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು

 

%e0%b2%9a%e0%b2%82%e0%b2%aa%e0%b2%be-%e0%b2%9c%e0%b3%88%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b3%8d

Cover_Design 04

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೊಡಲ್ಪಡುವ ಮಧುರಚೆನ್ನ ದತ್ತಿನಿಧಿ ಬಹುಮಾನ* 2015 ನೇ ಸಾಲಿನಲ್ಲಿ ಚಿಂತನ ಪುಸ್ತಕ ಪ್ರಕಟಿಸಿರುವ ಚಂಪಾ ಜೈಪ್ರಕಾಶ್ ಬರೆದಿರುವ 21ನೇ ಕ್ರೋಮೋಜೋ಼ಮ್ ಮತ್ತು ಇತರೆ ಕಥನಗಳು' ಪುಸ್ತಕಕ್ಕೆ ದೊರಕಿದೆ. ಇದು `ಲೇಖಕರ ಮೊದಲ ಕೃತಿ’ ವಿಭಾಗದಲ್ಲಿ ಉತ್ತಮ ಪುಸ್ತಕವೆಂದು ಪರಿಗಣಿಸಿ ನೀಡಿದ ಬಹುಮಾನ.

ಶ್ರೀಮತಿ ಚಂಪರವರು, ಶಿಕ್ಷಣ ತಜ್ಞೆ, ವಿಶೇಷ ಮಕ್ಕಳ ಶಿಕ್ಷಣದಲ್ಲಿ ಅದರಲ್ಲೂ ವಿಶಿಷ್ಟವಾಗಿ ಮನೋವೈಕಲ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ವಿಶೇಷ ಪರಿಣಿತಿ ಪಡೆದಿರುವರು. ಈ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿ, ಹಲವು ಹೆಸರಾಂತ ಸಂಸ್ಥೆಗಳಲ್ಲಿ ವೃತ್ತಿ ನಿರತರಾಗಿದ್ದು ತುಂಬಾ ಆಳವಾದ ಅನುಭವವನ್ನು ಉಳ್ಳವರು.
ಅವರು ತಮ್ಮ ದೀರ್ಘ ಅನುಭವದಲ್ಲಿ ಕಂಡ ಅನೇಕ ಮಕ್ಕಳಲ್ಲಿ ಕೆಲವರನ್ನು ಆಯ್ದು ಅವರ ಪಾಲನೆಯ ಬಗ್ಗೆ, ಸಾಧನೆ, ತರಬೇತಿಯ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಇಲ್ಲಿ ಆರಿಸಿಕೊಂಡಿರುವ ಮಕ್ಕಳು ವಿವಿಧ ಬಗೆಯ ಮನೋವೈಕಲ್ಯಗಳನ್ನು ಪ್ರತಿನಿಧಿಸುತ್ತಾರೆ. ಬುದ್ಧಿಮಾಂದ್ಯತೆ, ಸೆರೆಬ್ರಲ್ ಪಾಲ್ಸಿ ಅಥವಾ ಮೆದುಳಿನ ಆಘಾತದಿಂದ ಬರುವ ಸ್ನಾಯು ಬಿಗಿತ ಮತ್ತು ಸೆಳೆತ, ಡೌನ್ಸ್ ಸಿಂಡ್ರೋಮ್, ಸ್ವಲೀನತೆ ಮತ್ತು ಕಲಿಕಾ ನ್ಯೂನತೆ ಹೀಗೆ ವಿವಿಧ ರೀತಿಯ ಮನೋವೈಕಲ್ಯದ ಲಕ್ಷಣಗಳ ಮಕ್ಕಳನ್ನು ಇವರು ಇಲ್ಲಿ ಆರಿಸಿಕೊಂಡಿದ್ದಾರೆ. ಈ ಮಕ್ಕಳ ಕಥೆಗಳನ್ನು ಹೃದಯಂಗಮವಾಗಿ, ತುಂಬಾ ಸಹಾನುಭೂತಿಯಿಂದ ಚಂಪರವರು ನಿವೇದಿಸಿದ್ದಾರೆ.

ಜಾತಿ ಮತ್ತು ಸಾಮಾಜಿಕ ಅಂತಸ್ತುಗಳಿಗೂ, ವಿಕಲತೆಗೂ ಯಾವ ಸಂಬಂಧವೂ ಇಲ್ಲ. ವಿಕಲತೆಯು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ ಎಡತಾಕಬಹುದು. ಆದರೆ ಮಕ್ಕಳಲ್ಲಿ ಕಂಡಾಗ ಅದರ ಪರಿಣಾಮ ತೀವ್ರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕುಟುಂಬದವರ ಜವಾಬ್ದಾರಿ ಅತಿ ಹೆಚ್ಚಿನದಾಗಿರುತ್ತದೆ.
ಎಲ್ಲರ ಮನೆಯಲ್ಲೂ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವಾಗ ಆಗುವ ಆತಂಕ, ಸಂಭ್ರಮ, ನಿರೀಕ್ಷೆಗಳು ಮತ್ತು ಕನಸುಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ಯಾವುದೇ ಮಗು ಭಿನ್ನವಾಗಿ ಹುಟ್ಟಿದರೆ ಅಥವಾ ಅದರ ಬೆಳವಣಿಗೆ ಕುಂಠಿತಗೊಂಡಿದ್ದರೆ ಪೋಷಕರಲ್ಲಿ, ಸಂಬಂಧಿಕರಲ್ಲಿ ಉಂಟಾಗುವ ಸಂಕಟ, ತಲ್ಲಣಗಳು ಗಾಢವಾದುದ್ದು. ಇನ್ನು ಮಗುವಿನ ತಪಾಸಣೆಗಳಿಗಾಗಿ ಅನೇಕ ವೈದ್ಯರುಗಳ ಬಳಿಗೆ ಎಡತಾಕುವುದು, ಹಾಗೆಯೇ ಆ ಎಲ್ಲ ವೈದ್ಯರುಗಳು ಗುರುತಿಸಿ ತಿಳಿಸಿದ ಸಮಸ್ಯೆಯನ್ನು ಅರಗಿಸಿಕೊಳ್ಳುವ, ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅನುಭವಿಸುವ ಮಾನಸಿಕ ದುಗುಡ, ಆಘಾತ, ಅತ್ಯಂತ ಕಷ್ಟಕರ.
ಶ್ರೀಮತಿ ಚಂಪರವರು ಪ್ರತಿ ಕಥೆಯಲ್ಲೂ ಇವೆಲ್ಲ ಅನುಭವಗಳನ್ನು ಬಹಳ ಸಾಂದ್ರವಾಗಿ ಹಿಡಿದಿಟ್ಟಿದ್ದಾರೆ. ಮಗು ಮತ್ತು ಮಗುವಿನ ತಾಯಿ-ತಂದೆ ಮತ್ತು ಅವರ ಕುಟುಂಬದೊಡನೆ ಅವರ ಸಹಾನುಭೂತಿ ಎದ್ದು ಕಾಣುತ್ತದೆ. ಅಲ್ಲಿಂದ ಮುಂದೆ ಅವರು ಮಗುವಿನ ತೊಂದರೆಯನ್ನು ಅರ್ಥೈಸಿ ಅದರ ಕಾರಣಗಳನ್ನು, ವಿವರಗಳೊಂದಿಗೆ ಕೂಲಂಕುಷವಾಗಿ ವಿವರಿಸುತ್ತಾರೆ. ಮುಖ್ಯವಾಗಿ ಆ ಮಕ್ಕಳ ಚಿಕಿತ್ಸೆ, ತರಬೇತಿ ಮುಂತಾದವುಗಳನ್ನು ವಿವರಿಸಿ ಮಕ್ಕಳ ಸಾಧನೆಯನ್ನು ಎತ್ತಿ ತೋರಿಸಿ, ಮಕ್ಕಳ ಸಾಧನೆಯಲ್ಲಿ ತಾವೂ ಖುಷಿ ಪಡೆದು, ಬೇರೆಯವರಿಗೂ ಧೈರ್ಯ ತುಂಬುತ್ತಾರೆ. ಅಂತಹ ಸಾಧನೆಗಾಗಿ ಮಗು, ಪೋಷಕರು ಮತ್ತು ಶಿಕ್ಷಕರು ಪಡಬೇಕಾದ ಪರಿಶ್ರಮದ ಅಗಾಧತೆಯನ್ನು ತಿಳಿಸಿಕೊಡುತ್ತಾರೆ. ಮುಖ್ಯವಾಗಿ ಅಂಥ ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಮತ್ತು ಕುಟುಂಬದವರ ಶ್ರಮವನ್ನು ಗಮನಿಸಿ ಅದನ್ನು ಒತ್ತಿ ಹೇಳುತ್ತಾರೆ. ಚಿಕಿತ್ಸಾಲಯದಲ್ಲಿ, ಶಾಲೆಯಲ್ಲಿ ಕಲಿಯುವುದನ್ನು ಮನೆಯಲ್ಲಿ ಹೇಗೆ ಅಭ್ಯಾಸ ಮಾಡಿಸಿ, ಗಟ್ಟಿಮಾಡಬೇಕೆಂದು ತೋರಿಸುತ್ತಾರೆ. ಅದೇ ವೇಳೆ ಇಂತಹ ಮಕ್ಕಳ ಸಾಧನೆ ನಿಯಮಿತವಾಗಿರುತ್ತದೆಂದೂ ಜ್ಞಾಪಿಸುತ್ತಾರೆ. ಪ್ರತಿ ಮಗುವೂ ತನ್ನ ಶಕ್ತಿಯ ಪರಿಮಿತಿಯಲ್ಲಿ ಸಾಧ್ಯವಾದಷ್ಟು ವಿಕಸನಗೊಂಡು ಬೆಳೆದಾಗ ಪೋಷಕರು ಸಂತೋಷ ಪಡಬೇಕೆಂದು ತೋರಿಸಿದ್ದಾರೆ. ಈ ಸಾಧನೆಯಿಂದ ಮಕ್ಕಳಿಗೂ ಎಷ್ಟು ಹೆಮ್ಮೆ, ಪ್ರೋತ್ಸಾಹ ಸಿಗುತ್ತದೆ ಎಂಬುದನ್ನು ಗುರುತಿಸಿ ತೋರಿಸಿದ್ದಾರೆ. ಇದೆಲ್ಲವನ್ನು ಬಹು ಸ್ವಾರಸ್ಯಕರವಾಗಿ ಮನ ಕಲಕುವಂತೆ ವರ್ಣಿಸಿದ್ದಾರೆ.
– ನ ರತ್ನ (ಪುಸ್ತಕದ ಮುನ್ನುಡಿಯಿಂದ)

*ಡಾ. (ಶ್ರೀಮತಿ) ಉಮಾ ಬಿದರಿ ಹಾಗೂ ಮಧುರಚೆನ್ನರ ಶಿಷ್ಯರು ಒಟ್ಟಾಗಿ `ಮಧುರಚೆನ್ನರ ಜನ್ಮಶತಮಾನೋತ್ಸವ’ದ ಸಂದರ್ಭದ ನೆನಪಿಗಾಗಿ ಅವರ  ಹೆಸರಿನಲ್ಲಿ ಅಕಾಡೆಮಿಗೆ ರೂ 50,000 (ಐವತ್ತು ಸಾವಿರಗಳ) ಮೌಲ್ಯದ ದತ್ತಿನಿಧಿಯನ್ನು ನೀಡಿದ್ದಾರೆ. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ರೂ 5,000ದಷ್ಟು ಮೊಬಲಗನ್ನು `ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ `ಲೇಖಕರ ಮೊದಲ ಕೃತಿ’ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, `ಪುಸ್ತಕ ಬಹುಮಾನ ಯೋಜನೆ’ಯಲ್ಲಿನ 17ನೇ ಸಾಹಿತ್ಯ ಪ್ರಕಾರವಾದ `ಲೇಖಕರ ಮೊದಲನೆ ಕೃತಿ’ಯೇ ಆಗಿರುತ್ತದೆ.  ಈ ಬಹುಮಾನವನ್ನು `ಮಧುರಚೆನ್ನ ದತ್ತಿನಿಧಿ ಬಹುಮಾನ’ ಎಂದು ಕರೆಯಲಾಗುವುದು.

KBBP’s book award winners

Kuvempu Bhasha Bharati Pradhikara (KBBP) has announced its translation and book award winners.

Writers chosen for the 2015-16 awards are: Panchakshari Hiremath, Dharwad; D.A. Shankar, Mysuru; R.P. Hegde, Siddapur; Vijaya Subbaraj, Bengaluru, and H.S. Shivaprakash, Delhi.

Writers Jayalalitha, K.M. Seetharamaiah, Akshara K.V., K.M. Lokesh, Nagaragere Ramesh, and B.S. Jayaprakash Narayana were chosen for the 2014 book awards.

— Staff Reporter The Hindu

ಕುವೆಂಪು ಭಾಷಾ ಭಾರತಿ ಪುಸ್ತಕ ಪ್ರಾಧಿಕಾರದ 2014ರ ಪುಸ್ತಕ ಬಹುಮಾನ ಪುರಸ್ಕೃತರಾಗಿರುವ ನಗರಗೆರೆ ರಮೇಶ್ ಅವರಿಗೆ (`ಮೌರ್ಯರ ಕಾಲದ ಭಾರತ’ ಪುಸ್ತಕಕ್ಕಾಗಿ) ಹಾಗೂ ಕೆ.ಎಂ.ಲೋಕೇಶ್ ಅವರಿಗೆ (`ಭಾರತದ ಆರ್ಥಿಕತೆ 1858-1914′  ಪುಸ್ತಕಕ್ಕಾಗಿ) ಅಭಿನಂದನೆಗಳು.

nagaragere ramesh

 

ನಗರಗೆರೆ ರಮೇಶ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಿವೃತ್ತ ಇಂಗ್ಲೀಷ್ ಪ್ರಾದ್ಯಾಪಕರಾಗಿದ್ದು ಮಾನವ ಹಕ್ಕು ಸಂಘಟನೆಯೊಂದರಲ್ಲಿ ಸಕ್ರಿಯವಾಗಿರುವವರು

059.978-93-81187-25-8

 

k m lokesh

 

ಕೆ.ಎಂ.ಲೋಕೇಶ್ ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಆಸಕ್ತಿ ಆಧುನಿಕ ಭಾರತದ ಇತಿಹಾಸವಾಗಿದೆ
060.978-93-81187-22-7 Front

ನಮ್ಮ ಪ್ರಕಟಣೆ ‘ಕನ್ನಡದೊಳ್ ಭಾವಿಸಿದ ಜನಪದಂ’ ನಿಂದ ಪ್ರಾರಂಭವಾದ ನಂಟು (ಈ ಪುಸ್ತಕದ ಸಂಪಾದನೆ ಡಾ| ವಸು ಅವರದ್ದು) ನಮ್ಮದು.

ಇತಿಹಾಸಕ್ಕೆ ಸಂಬಂಧಿಸಿದಂತೆ, People’s History of India  ಮಾಲಿಕೆಯ ಅನುವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರೂ ಥಟ್ಟಂತ ನೆನಪಾಗುವುದು ಡಾ| ವಸು. ಅವರೂ ಅಷ್ಟೇ. ತಮ್ಮ ಅನಾರೋಗ್ಯದ ಮಧ್ಯದಲ್ಲೂ ಯಾವುದೇ ಬೇಸರವಿಲ್ಲದೆ ಉತ್ತರ ಕೊಡುವುದು ಸಹಾಯ ಮಾಡುವುದು ನಮಗೆ ಅಭ್ಯಾಸವಾಗಿ ಹೋಗಿದೆ.
ಆದರೆ ಇನ್ನು?
People’s History of India  ಮಾಲಿಕೆಯ ಅನುವಾದಕ್ಕೆ ಸಂಬಂಧಿಸಿದಂತೆ ಅವರ ಸಲಹೆ ಕೇಳಿದಾಗ ಅದರಲ್ಲಿ ಒಂದು ಪುಸ್ತಕ ನಾನು ಮಾಡ್ತೇನೆ ಅಂದಿದ್ದರು.  ಸ್ವತಂತ್ರ ಬರವಣಿಗೆಯ ಸಾಮರ್ಥ್ಯವಿರುವಂಥ ಲೇಖಕರು ಸಾಧಾರಣವಾಗಿ ಅನುವಾದದ ಕಡೆಗೆ ಗಮನ ಹರಿಸುವುದಿಲ್ಲ. ಆ ಬಗ್ಗೆ ಅವರನ್ನು ಕೇಳಿದ್ದಕ್ಕೆ ಅನುವಾದ ಯಾರ ಪುಸ್ತಕ ಅನ್ನುವುದರ ಮೇಲೆ ಆಧರಿಸಿರುತ್ತದೆ. ಇರ್ಫಾನ್ ಹಬೀಬರ ಕೃತಿಯನ್ನು ಅನುವಾದ ಮಾಡುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದರು. ಆದರೆ ಈಗ ಅದೆಲ್ಲಾ ಮುಗಿದ ಕತೆ.

ತಾನೊಬ್ಬ ಪ್ರೊಫೆಸರ‍್ ಅನ್ನುವ ಅಹಂಕಾರವಿಲ್ಲದ, ಎಲ್ಲರ ಹತ್ತಿರ ನಗುತ್ತಾ ಮಾತನಾಡುವ ನಮ್ಮ ವಸು ಇನ್ನಿಲ್ಲ ಅನ್ನುವುದು ಅರಗಿಸಿಕೊಳ್ಳಲಾಗದ ಸತ್ಯ.

– ವಿಶಾಲಮತಿ

ನಿಧನ ವಾರ್ತೆ : ವಸು ಮಳಲಿ

ಬೆಂಗಳೂರು: ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾ-ಪಕಿ ಡಾ.ಎಂ.ವಿ.ವಸು (ವಸು ಮಳಲಿ)  ಅನಾರೋಗ್ಯದಿಂದ ನಗರದ ಜಯ-ದೇವ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.

ಅವರು ಒಂದೂವರೆ ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳ-ಗಾಗಿ ಚೇತರಿಸಿ-ಕೊಳ್ಳು-ತ್ತಿದ್ದರು. 15 ದಿನಗಳ ಹಿಂದೆ ರಕ್ತ-ದೊತ್ತಡ ಕುಸಿತ ಹಿನ್ನೆ-ಲೆ–ಯಲ್ಲಿ ಆಸ್ಪತ್ರೆಗೆ ದಾಖ-ಲಾಗಿ-ದ್ದರು.  ಅವರಿಗೆ 48 ವರ್ಷ. ಹಿರಿಯ ಸಾಹಿತಿ ಮಳಲಿ ವಸಂತ ಕುಮಾರ್‌ ಅವರ ಪುತ್ರಿ-ಯಾದ ವಸು ಅವರಿಗೆ ಅವನಿ ಎಂಬ ಮಗಳಿದ್ದಾಳೆ.

ಅವರು ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ (ಇತಿಹಾಸ) ಹಾಗೂ ಡಾಕ್ಟರೇಟ್‌ ಪಡೆದಿದ್ದರು. ಆರಂಭ-ದಲ್ಲಿ ತುಮಕೂರು ಸ್ನಾತ-ಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವ-ಹಿಸಿದ್ದರು. 1999ರಲ್ಲಿ ಬೆಂಗಳೂರು ವಿ.ವಿಯ ಇತಿಹಾಸ ವಿಭಾಗಕ್ಕೆ ಸೇರಿ-ದ್ದರು. ಹಂಪಿ ಕನ್ನಡ ವಿ.ವಿ ಸಿಂಡಿ-ಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಂಶೋಧನಾ ಗ್ರಂಥ ‘ಮೌಖಿಕ ಇತಿಹಾಸ’, ಸಂಪಾದನಾ ಗ್ರಂಥ ‘ಕನ್ನಡದೊಳ್‌ ಭಾವಿಸಿದ ಜನಪದಂ’ ಅವರ ಕೃತಿಗಳು.  ‘ಪ್ರಜಾ-ವಾಣಿ’-ಯಲ್ಲಿ ಅವರ ‘ಕಳ್ಳು ಬಳ್ಳಿ’ ಅಂಕಣ ಪ್ರಕಟವಾಗಿತ್ತು. ಪ್ರಗತಿ-ಪರ ಚಳವಳಿ-ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿ-ದ್ದರು. ಅವರು ಉತ್ತಮ ವಾಗ್ಮಿ.

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಪುಣೆ ಫಿಲಂ ಇನ್‌ಸ್ಟಿ-ಟ್ಯೂಟ್‌ನಲ್ಲಿ ಸಿನಿಮಾ ನಿರ್ಮಾಣದ ಹಾಗೂ ಹಾಲಿವುಡ್‌ನಲ್ಲಿ ನಿರ್ದೇ-ಶನದ ತರಬೇತಿ ಪಡೆದಿದ್ದರು. ‘ನೆತ್ತರು ಮತ್ತು ಗುಲಾಬಿ’ ಎಂಬ ಕಿರುಚಿತ್ರ ಸೇರಿ-ದಂತೆ ಮೂರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದ ನಕ್ಸಲ್‌ ಹೋರಾಟದ ಕಥಾವಸ್ತುವುಳ್ಳ  ‘ಅಸ್ತ್ರ’  ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.  ಅಂತ್ಯಕ್ರಿಯೆ ಕೆಂಗೇರಿ ಬಂಡೆಮಠ ಬಳಿಯ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಸಂಜೆ ನಡೆಯಿತು.

ಪ್ರಜಾವಾಣಿ

 

rk hudagi foto (2)

ಪ್ರೊ. ಆರ್.ಕೆ. ಹುಡಗಿ

 

ಪ್ರೊ. ಆರ್.ಕೆ. ಹುಡಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ದುಡಿದಿದ್ದು, ಅವಿತರತ ಓದು ಬರಹಗಳಲ್ಲಿ ತೊಡಗಿಸಿಕೊಂಡವರು. ರಾಜ್ಯ ವ್ಯಾಪಿ ಹರಡಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದ ಅವರು ಅದರ ಹೆಚ್ಚು ಕಡಿಮೆ ಎಲ್ಲಾ ರಂಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಾಥಾಗಳಲ್ಲಿ ತೊಡಗಿಸಿಕೊಂಡಿದ್ದು,  2006ರಿಂದ ಅದರ ರಾಜ್ಯಾದ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮುದಾಯ ಅಲ್ಲದೆ, – 1976 ರಲ್ಲಿ ಕಲಬುರ್ಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ.  ಪೀಪಲ್ಸ್ ಸೋಸಿಯೋ ಕಲ್ಚುರಲ್ ಆರ್ಗನೈಜೆಶನ್ (ಅಧ್ಯಕ್ಷ),  ಇಂಡೋ-ಸೋವಿಯತ್ ಕಲ್ಚುರಲ್ ಸೋಸೈಟಿ (ಗುಲ್ಬರ್ಗ ವಿಭಾಗದ ಅಧ್ಯಕ್ಷ : 1984-1990ರ ವರೆಗೆ) , ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ನಿನ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿ 27 ವರ್ಷ,  ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ (ಉಪಾಧ್ಯಕ್ಷ), ಭಾರತ ಜ್ಞಾನ ವಿಜ್ಞಾನ ಸಮಿತಿ, ಗುಲಬರ್ಗದ ಅಧ್ಯಕ್ಷ (1985-1990ರ ವರೆಗೆ), ಗುಲಬರ್ಗವಿಶ್ವವಿದ್ಯಾಲಯದ ಶುದ್ಧಿಕರಣ ಸಮಿತಿ (ಅಧ್ಯಕ್ಷ), ಬಂಡಾಯ ಸಾಹಿತ್ಯ ಸಂಘಟನೆಯ 1979-80ರಲ್ಲಿ ಗುಲಬುರ್ಗ ಘಟಕ ದ ಸಂಸ್ಥಾಪಕ ಸದಸ್ಯ, ಗುಲಬರ್ಗ ರಾಜಕೀಯ ಶಾಂತಿ ಸಮಿತಿ (ಅಧ್ಯಕ್ಷ) – ಮುಂತಾದ ಹತ್ತು ಹಲವು ಸಾಮಾಜಿಕ ಸಂಸ್ಥೆಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.

ಹಲವು ಜಾಥಾ ಚಳುವಳಿಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.   1979ರ ಸಮುದಾಯದ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾಥಾದಲ್ಲಿ  ಸಂಘಟಕನಾಗಿ,  1980ರ ರೈತನತ್ತ ಸಾಂಸ್ಕೃತಿಕ ಜಾಥಾ ಮುಖಂಡನಾಗಿ,  1985ರ ಬರಗಾಲದಲ್ಲಿ ಸಮುದಾಯದ ಜಾಥಾ ಮುಖ್ಯ ಸಂಘಟಕನಾಗಿ. 1986ರ 100 ಅಡಿಗಳ ಬಣ್ಣದ ಜಾಥಾದಲ್ಲಿ ಸಂಘಟಕನಾಗಿ,  1991ರ ಸಾಕ್ಷರತ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ, 1992ರ ಜನ ವಿಜ್ಞಾನ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ.
2005ರ ಭ್ರೂಣ ಹತ್ಯದ ವಿರುದ್ಧ ಪ್ರಚಾರ ಆಂದೋಲನಾ ಜಾಥಾ, ಲೇಖಕ ಮತ್ತು ಸಂಘಟಕನಾಗಿ,  2009ರಲ್ಲಿ ರೈತಪರ ಜಾಥಾದಲ್ಲಿ ಸಂಘಟಕ ಹಾಗೂ ಮುಖಂಡನಾಗಿ.,  2011ರಲ್ಲಿ ಬೀದರದಿಂದ ಬಳ್ಳಾರಿವರೆಗೆ ನಾಡಿನ ನೆಲ-ಜಲ ಉಳಿಸಲು ಲೇಖಕ ಮತ್ತು ಕಲಾವಿದರ ಜಾಥಾ ಸಂಘಟಕನಾಗಿ,  ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳು (1985, 1993, 1998, 2005ರಲ್ಲಿ) ರಂಗ ಸಂಘಟಕನಾಗಿ. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಕಾರ್ಟೂನ್  ಜಾಥಾ,    ಡಾ. ಅಂಬೇಡ್ಕರ್ ಶತಮಾನೋತ್ಸವ ಸಂದರ್ಭದಲ್ಲಿ 117 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸ., ಸಮುದಾಯ ಜಾಥಾಗಳ ಅಂಗವಾಗಿ 1265 ಊರುಗಳಲ್ಲಿ ನಾಟಕ ಪ್ರದರ್ಶನ ಹಾಗೂ ಉಪನ್ಯಾಸಗಳು, 1987ರಲ್ಲಿ ಬಿಜಾಪೂರ ಜಿಲ್ಲೆಯಲ್ಲಿಯ ದೇವದಾಸಿ ಪದ್ಧತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗುತಿ ನಾಟಕದ ಜಾಥಾದಲ್ಲಿ ರಂಗ ಸಂಘಟಕನಾಗಿ ಹಾಗೂ ಉಪನ್ಯಾಸಕನಾಗಿ, ಮೂಢ ನಂಬಿಕೆಗಳ ವಿರುದ್ಧ ಬೀದಿ ನಾಟಕಗಳ ಜಾಥಾ – ಮುಂತಾದ ಹತ್ತು ಹಲವು ಜಾಥಾಗಳಲ್ಲಿ ಅವರು ನಾಯಕತ್ವ ವಹಿಸಿದ್ದಾರೆ.

ವೃತ್ತಿಯಲ್ಲಿ ಅವರು 33ವರ್ಷಗಳ ಕಾಲ ಇಂಗ್ಲೀಷ  ಉಪನ್ಯಾಸಕ ಹಾಗೂ ಪ್ರಾಧ್ಯಾಪಕರಾಗಿದ್ದು,  2007ರಲ್ಲಿ ನಿವೃತ್ತಿ ಹೊಂದಿದರು.

ಅವರ ಓದಿನ ಹರವು, ಆಳ ವಿಸ್ಮಯ ಹುಟ್ಟಿಸುವಂತಹುದು. ಅದೇ ರೀತಿ ಅವರ ಬರಹಗಳ ವಿಸ್ತಾರ. ಅವರ ಬರಹಗಳಲ್ಲಿ ಸ್ವಂತದ್ದೂ ಇವೆ.  ಅನುವಾದಗಳೂ ಇವೆ.  ಅವರ ಸ್ವತಂತ್ರ ಪುಸ್ತಕಗಳ ಸಂಖ್ಯೆ 18. ಅನುವಾದಿತ ಪುಸ್ತಕಗಳ ಸಂಖ್ಯೆ 24. ಅವರ ಬರಹಗಳ ಪಟ್ಟಿಯನ್ನು ಇಲ್ಲಿ ಕೆಳಗೆ ಕೊಡಲಾಗಿದೆ.

ಸ್ವತಂತ್ರ ಕೃತಿಗಳು :

1) ಈರೋಬಿ (ಗೀತರೂಪಕ)
2) ಬರದ ಬಯಲಾಟ (ಬೀದಿನಾಟಕ)
3) ಅಕ್ಷರ (ಬೀದಿನಾಟಕ)
4) ಒರೆಗಲ್ಲು (ಬೀದಿನಾಟಕ)
5) ಸಂಸ್ಥಾ (ರಂಗನಾಟಕ)
6) ಬಾಯಿ ಬಂದ್ ಬಾದಶಹಾ ಪುರಾಣ, (ರಂಗನಾಟಕ)
7) ಹೆಮ್ಮಾರಿಯ ರಸ ಪುರಾಣ (ರಂಗನಾಟಕ)
8) ಉಸ್ತುವಾರಿ ಸಚಿವರ ಬಸ್ತಾನಿ (ರಂಗನಾಟಕ)
9) ಪಾದಚಾರಿಯ ಪುರಾಣ (ಬೀದಿನಾಟಕ)
10) ಸಾಕುನಾಯಿ (ಬೀದಿನಾಟಕ)
11) ಜೊಲ್ಲ್ಯಾನಾಯಿ (ಬೀದಿನಾಟಕ)
12) ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ (ಬೀದಿನಾಟಕ)
13) ಅನಾಮಿ ಪಿಂಡದ ಆರ್ತನಾದ (ಬೀದಿನಾಟಕ)
14) ಅನ್ನದಾತನ ಆರ್ತನಾದ (ಬೀದಿನಾಟಕ)
15) ನರಗುಂದ ರೈತನ ಬಂಡಾಯ (ಬೀದಿನಾಟಕ)
16) ಪ್ರಳಯಾಂತಕ ಪ್ರತೀಕಾರ (ರಂಗನಾಟಕ)
17) ಅಸಮಾನತೆಯ ಆಸುರಿ ಮುಖಗಳು
18) ಗುರು ಸಾರಥಿ-ಶಿಷ್ಯ ಅತಿರಥ (ಬೀದಿನಾಟಕ)

ಅನುವಾದ ಕೃತಿಗಳು :

1) ನಾನೇಕೆ ನಾಸ್ತಿಕ ಭಗತ್ಸಿಂಗ್
2) ವಿಮೋಚನೆಯ ದಾರಿ (ಇ.ಎಮ್.ಎಸ್.ಎನ್)
3) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್)
4) ಸಮರ್ಥ ಸಾಮ್ಯವಾದಿ (ಲಿವು-ಶಾವೋಕಿ)
5) ಜೋತಿಬಸ್ಸು (ಸುರಭಿ ಬ್ಯಾನರ್ಜಿ)
6) ದಲಿತ ಸಂಘರ್ಷ : ದಾರಿ-ದಿಕ್ಕು (ಆನಂದ ತೇಲತುಂಬ್ಡೆ)
7) ದಲಿತರು :ಭೂತ-ಭವಿಷ್ಯ (ಆನಂದ ತೇಲತುಂಬ್ಡೆ)
8) ಜಾತಿ ವ್ಯವಸ್ಥೆ : ಸಮಸ್ಯೆ ಸವಾಲುಗಳು (ಜಗಜೀವನರಾಮ)
9) ಜಾತಿ ವ್ಯವಸ್ಥೆ : ಉಗಮ-ವಿಕಾಶ-ವಿನಾಶ (ಡಾ. ಬಿ.ಆರ್. ಅಂಬೇಡ್ಕರ್)
10) ಡಾ. ಬಿ.ಆರ್. ಅಂಬೇಡ್ಕರ್ : ಪ್ರಭುದ್ಧ ಭಾರತದ ದೃಷ್ಟಾರ  (ಗೇಲ್ ಅಮ್ವೆಡ್ಸ್)
11) ಕಾಮರಸಾಯನ (ತರುಣ ತೇಜಪಾಲ್)
12) ಅಮ್ಮಿ (ಸೈಯಿದ್ ಅಕ್ತರ್ ಮಿರ್ಜಾ)
13) ಮೇ ಡೇ ಹುತಾತ್ಮರ ಮಹಾನ್ ಗಾಥೆ (ಆ್ಯಡಲ್ಮನ್)
14) ಆರನೇ ಹೆಂಡತಿಯ ಆತ್ಮಕಥೆ (ತೆಹಮಿನಾ ದುರ್ರಾನಿ)
15) ಪೀಠಾಧಿಪತಿಯ ಪತ್ನಿ (ತೆಹಮಿನಾ ದುರ್ರಾನಿ)
16) ಸೆಕ್ಯುಲರ್ವಾದ: ಬುಡ-ಬೇರು (ಮಣಿಶಂಕರ್ ಅಯ್ಯರ್)
17) ಭಾರತೀಯ ಮಹಿಳೆಯರ ಹೋರಾಟ (ಕನಕ ಮುಖರ್ಜಿ)
18) ಪ್ರೀತಿಯಿಂದ ಅಪ್ಪನಿಗೆ (ಶಬಾನ ಅಜ್ಮಿ)
19) ಧರೆ ಹೊತ್ತಿ ಉರಿದಾಗ : ಭಾರತದ ವಿಭಜನೆಯ ದುರಂತ  ಕತೆಗಳು (ಅಲೋಕ್ ಭಲ್ಲಾ)
20) ಜಪಾನ್ (ಯಾಮಾಗುಜಿ ಹಿರೋಯಿಚಿ)
21) ಭಾರತದ ಬಡತನ : ಸಂವಿಧಾನಕ್ಕೊಂದು ಕಳಂಕ
22) ಅಭಿವೃದ್ಧಿ ಆತ್ಮಘನತೆ (ಅಮಿತ್ ಬಹದ್ದೂರಿ)
23) ಕಾರ್ಪೊರೇಟ್ ಕಾಲದಲ್ಲಿಯೂ ಕಾರ್ಲ್ ಮಾರ್ಕ ಪ್ರಸ್ತುತ  (ಟೆರ್ರಿ ಈಗಲ್ಟನ್)
24) ಭಯೋತ್ಪಾದಕ (ಮೋಶಿನ್ ಹಮೀದ್)

 

 

ಇದೇ ಗುರುವಾರ (ಜೂನ್ 19) ಕುವೆಂಪು ಭಾಷಾಭಾರತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. 2012-13ರ ಸಾಲಿನ ಗೌರವ ಪ್ರಶಸ್ತಿ ಪಡೆದ – ಪ್ರೊ. ಆರ್ ಕೆ ಹುಡಗಿ, ಹಸನ್ ನಯೀಮ ಸುರಕೋಡ, ಡಾ. ಮ ನ ಜವರಯ್ಯ, ಶೇಷನಾರಾಯಣ, ಡಾ.ಎಂ.ಆರ್. ಕಮಲ ಅವರುಗಳು ಸೇರಿದಂತೆಎಲ್ಲಾ  ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು.

 

 

bhasha bharathi prashasti samarambha 2014

ಮುಂದಿನ ಪುಟ »