ಅನುವಾದಕರು


ಪ್ರೊ. ಆರ್.ಕೆ.ಹುಡಗಿ ಅವರಿಗೆ ಅಭಿನಂದನೆಗಳು!

ಪ್ರೊ. ಆರ್.ಕೆ.ಹುಡಗಿ ಅವರು ಅನುವಾದಿಸಿದ ನಮ್ಮ ಪ್ರಕಟಣೆಯ ಪುಸ್ತಕ `ಕಾರ್ಪೋರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ’ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿಯ 2014ನೇ ವರ್ಷದ ಪುಸ್ತಕ ಬಹುಮಾನ ಬಂದಿದೆ.

rk hudagi foto (2)

%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%85%e0%b2%95%e0%b2%be%e0%b2%a1%e0%b3%86%e0%b2%ae%e0%b2%bf-2014-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95-%e0%b2%ac

karl marks-Cover

Advertisements

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಹಾಗೂ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಚಿಂತನ ಪುಸ್ತಕ ಬಳಗದ ಅಭಿನಂದನೆಗಳು.

2009ರಲ್ಲಿ ಪ್ರಾರಂಭವಾದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ಧೇಶವನ್ನು ಹೊಂದಿದ ಸಂಸ್ಥೆ. ಈ ನಿಟ್ಟಿನಲ್ಲಿ ಅನುವಾದಿತ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರತಿವರ್ಷ ಐವರು ಪ್ರತಿಷ್ಠಿತ ಅನುವಾದಕರಿಗೆ ಗೌರವ ಪ್ರಶಸ್ತಿಗಳನ್ನು ಕೊಡುವ. ಹಾಗೂ ಐದು ಸಾಹಿತ್ಯ ಪ್ರಕಾರ(ಕಾವ್ಯ, ನಾಟಕ, ಆತ್ಮಕತೆ/ಜೀವನ ಚರಿತ್ರೆ, ಕಥನ ಸಾಹಿತ್ಯ ಮತ್ತು ವೈಚಾರಿಕ ಸಾಹಿತ್ಯ)ಗಳ ಗ್ರಂಥಗಳಿಗೆ ವರ್ಷದ ಶ್ರೇಷ್ಠ ಅನುವಾದ ಬಹುಮಾನ ಕೊಡುವ ಯೋಜನೆಯನ್ನು ಹಾಕಿಕೊಂಡಿದೆ.

2014ರ ಸಾಲಿನ ವೈಚಾರಿಕ ಸಾಹಿತ್ಯ ಪ್ರಕಾರದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ 2 ಕೃತಿಗಳು ನಮ್ಮ ಪ್ರಕಾಶನ ಸಂಸ್ಥೆ ಚಿಂತನ ಪುಸ್ತಕದಿಂದ ಪ್ರಕಟವಾದದ್ದು. ಹಾಗೂ ಪ್ರತಿಷ್ಟಿತ ಇತಿಹಾಸಕಾರ ಇರ್ಫಾನ್ ಹಬೀಬ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿರುವ Peoples History of India ಪುಸ್ತಕ ಸರಣಿಯ 5 ನೇ ಮತ್ತು 28 ನೇ ಪುಸ್ತಕಗಳಾದ Mauryan India ಮತ್ತು Indian Economy, 1858-1914 ಇವುಗಳ ಕನ್ನಡಾನುವಾದಗಳಾದ ಮೌರ್ಯರ ಕಾಲದ ಭಾರತ ಹಾಗೂ ಭಾರತದ ಆರ್ಥಿಕತೆ 1958-1914 ಪುಸ್ತಕಗಳಾಗಿವೆ

ಈ ಪುಸ್ತಕ ಸರಣಿ ರಾಜ್ಯಾದ್ಯಂತ ಇತಿಹಾಸ ವಿದ್ಯಾರ್ಥಿಗಳಿಂದ ಹಾಗೂ ಇತಿಹಾಸ ಪ್ರಾದ್ಯಾಪಕರಿಂದ ಮನ್ನಣೆ ಪಡೆದಿದೆ. ಈ ಪುಸ್ತಕ ಸರಣಿಯನ್ನು ಇನ್ನಷ್ಟು ಪ್ರಸಿದ್ದಗೊಳಿಸುವಲ್ಲಿ ನೆರವಾದ ಅನುವಾದಕರಾದ ಪ್ರೊ.ನಗರಗೆರೆ ರಮೇಶ್ (ಮೌರ್ಯರ ಕಾಲದ ಭಾರತ) ಹಾಗೂ ಪ್ರೊ. ಕೆ.ಎಂ.ಲೋಕೇಶ್ (ಭಾರತದ ಆರ್ಥಿಕತೆ 1958-1914 ) ಅವರಿಗೆ ನಾವು ಮತ್ತು ಈ ಪುಸ್ತಕ ಸರಣಿಯ ಅಭಿಮಾನಿಗಳೆಲ್ಲರೂ ಕೃತಜ್ಞರು.

  • ವಿಶಾಲಮತಿ (ಚಿಂತನ ಪುಸ್ತಕದ ಪರವಾಗಿ)

20160314_161800