ನಮ್ಮ ಪ್ರಕಟಣೆ ‘ಕನ್ನಡದೊಳ್ ಭಾವಿಸಿದ ಜನಪದಂ’ ನಿಂದ ಪ್ರಾರಂಭವಾದ ನಂಟು (ಈ ಪುಸ್ತಕದ ಸಂಪಾದನೆ ಡಾ| ವಸು ಅವರದ್ದು) ನಮ್ಮದು.

ಇತಿಹಾಸಕ್ಕೆ ಸಂಬಂಧಿಸಿದಂತೆ, People’s History of India  ಮಾಲಿಕೆಯ ಅನುವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರೂ ಥಟ್ಟಂತ ನೆನಪಾಗುವುದು ಡಾ| ವಸು. ಅವರೂ ಅಷ್ಟೇ. ತಮ್ಮ ಅನಾರೋಗ್ಯದ ಮಧ್ಯದಲ್ಲೂ ಯಾವುದೇ ಬೇಸರವಿಲ್ಲದೆ ಉತ್ತರ ಕೊಡುವುದು ಸಹಾಯ ಮಾಡುವುದು ನಮಗೆ ಅಭ್ಯಾಸವಾಗಿ ಹೋಗಿದೆ.
ಆದರೆ ಇನ್ನು?
People’s History of India  ಮಾಲಿಕೆಯ ಅನುವಾದಕ್ಕೆ ಸಂಬಂಧಿಸಿದಂತೆ ಅವರ ಸಲಹೆ ಕೇಳಿದಾಗ ಅದರಲ್ಲಿ ಒಂದು ಪುಸ್ತಕ ನಾನು ಮಾಡ್ತೇನೆ ಅಂದಿದ್ದರು.  ಸ್ವತಂತ್ರ ಬರವಣಿಗೆಯ ಸಾಮರ್ಥ್ಯವಿರುವಂಥ ಲೇಖಕರು ಸಾಧಾರಣವಾಗಿ ಅನುವಾದದ ಕಡೆಗೆ ಗಮನ ಹರಿಸುವುದಿಲ್ಲ. ಆ ಬಗ್ಗೆ ಅವರನ್ನು ಕೇಳಿದ್ದಕ್ಕೆ ಅನುವಾದ ಯಾರ ಪುಸ್ತಕ ಅನ್ನುವುದರ ಮೇಲೆ ಆಧರಿಸಿರುತ್ತದೆ. ಇರ್ಫಾನ್ ಹಬೀಬರ ಕೃತಿಯನ್ನು ಅನುವಾದ ಮಾಡುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದರು. ಆದರೆ ಈಗ ಅದೆಲ್ಲಾ ಮುಗಿದ ಕತೆ.

ತಾನೊಬ್ಬ ಪ್ರೊಫೆಸರ‍್ ಅನ್ನುವ ಅಹಂಕಾರವಿಲ್ಲದ, ಎಲ್ಲರ ಹತ್ತಿರ ನಗುತ್ತಾ ಮಾತನಾಡುವ ನಮ್ಮ ವಸು ಇನ್ನಿಲ್ಲ ಅನ್ನುವುದು ಅರಗಿಸಿಕೊಳ್ಳಲಾಗದ ಸತ್ಯ.

– ವಿಶಾಲಮತಿ

ನಿಧನ ವಾರ್ತೆ : ವಸು ಮಳಲಿ

ಬೆಂಗಳೂರು: ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾ-ಪಕಿ ಡಾ.ಎಂ.ವಿ.ವಸು (ವಸು ಮಳಲಿ)  ಅನಾರೋಗ್ಯದಿಂದ ನಗರದ ಜಯ-ದೇವ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.

ಅವರು ಒಂದೂವರೆ ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳ-ಗಾಗಿ ಚೇತರಿಸಿ-ಕೊಳ್ಳು-ತ್ತಿದ್ದರು. 15 ದಿನಗಳ ಹಿಂದೆ ರಕ್ತ-ದೊತ್ತಡ ಕುಸಿತ ಹಿನ್ನೆ-ಲೆ–ಯಲ್ಲಿ ಆಸ್ಪತ್ರೆಗೆ ದಾಖ-ಲಾಗಿ-ದ್ದರು.  ಅವರಿಗೆ 48 ವರ್ಷ. ಹಿರಿಯ ಸಾಹಿತಿ ಮಳಲಿ ವಸಂತ ಕುಮಾರ್‌ ಅವರ ಪುತ್ರಿ-ಯಾದ ವಸು ಅವರಿಗೆ ಅವನಿ ಎಂಬ ಮಗಳಿದ್ದಾಳೆ.

ಅವರು ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ (ಇತಿಹಾಸ) ಹಾಗೂ ಡಾಕ್ಟರೇಟ್‌ ಪಡೆದಿದ್ದರು. ಆರಂಭ-ದಲ್ಲಿ ತುಮಕೂರು ಸ್ನಾತ-ಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವ-ಹಿಸಿದ್ದರು. 1999ರಲ್ಲಿ ಬೆಂಗಳೂರು ವಿ.ವಿಯ ಇತಿಹಾಸ ವಿಭಾಗಕ್ಕೆ ಸೇರಿ-ದ್ದರು. ಹಂಪಿ ಕನ್ನಡ ವಿ.ವಿ ಸಿಂಡಿ-ಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಂಶೋಧನಾ ಗ್ರಂಥ ‘ಮೌಖಿಕ ಇತಿಹಾಸ’, ಸಂಪಾದನಾ ಗ್ರಂಥ ‘ಕನ್ನಡದೊಳ್‌ ಭಾವಿಸಿದ ಜನಪದಂ’ ಅವರ ಕೃತಿಗಳು.  ‘ಪ್ರಜಾ-ವಾಣಿ’-ಯಲ್ಲಿ ಅವರ ‘ಕಳ್ಳು ಬಳ್ಳಿ’ ಅಂಕಣ ಪ್ರಕಟವಾಗಿತ್ತು. ಪ್ರಗತಿ-ಪರ ಚಳವಳಿ-ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿ-ದ್ದರು. ಅವರು ಉತ್ತಮ ವಾಗ್ಮಿ.

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಪುಣೆ ಫಿಲಂ ಇನ್‌ಸ್ಟಿ-ಟ್ಯೂಟ್‌ನಲ್ಲಿ ಸಿನಿಮಾ ನಿರ್ಮಾಣದ ಹಾಗೂ ಹಾಲಿವುಡ್‌ನಲ್ಲಿ ನಿರ್ದೇ-ಶನದ ತರಬೇತಿ ಪಡೆದಿದ್ದರು. ‘ನೆತ್ತರು ಮತ್ತು ಗುಲಾಬಿ’ ಎಂಬ ಕಿರುಚಿತ್ರ ಸೇರಿ-ದಂತೆ ಮೂರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದ ನಕ್ಸಲ್‌ ಹೋರಾಟದ ಕಥಾವಸ್ತುವುಳ್ಳ  ‘ಅಸ್ತ್ರ’  ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.  ಅಂತ್ಯಕ್ರಿಯೆ ಕೆಂಗೇರಿ ಬಂಡೆಮಠ ಬಳಿಯ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಸಂಜೆ ನಡೆಯಿತು.

ಪ್ರಜಾವಾಣಿ

 

Advertisements