• ಅಭಿರುಚಿಗೆ ತಕ್ಕಂತಹ ಸಾಹಿತ್ಯ ರಚನೆಯಾಗಬೇಕು

 • ಕಾರವಾರ: ಇಲ್ಲಿನ ಎನ್‌ಜಿಓ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು.

  • Udayavani | Jul 16, 2012
   ಕಾರವಾರ: ಯುವಕರಿಗೆ ಮೆಚ್ಚುಗೆಯಾಗುವಂಥ ಸಾಹಿತ್ಯ ರಚನೆಯಾಗಬೇಕಾಗಿದೆ. ಇದರಿಂದ ಯುವಕರು ಸಾಹಿತ್ಯ ಕ್ಷೇತ್ರದ ಕಡೆ ಮುಖ ಮಾಡಲು ಸಾಧ್ಯ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಭಿಪ್ರಾಯ ಪಟ್ಟರು.ಅವರು ನಗರದ ಎನ್‌ಜಿಓ ಹಾಲ್‌ನಲ್ಲಿ ಆಯೋಜಿಸಲಾದ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಬಗ್ಗೆ ಯುವಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಯುವಕರ ಅಭಿರುಚಿಗೆ ತಕ್ಕಂತೆ ಯುವ ಸಾಹಿತಿಗಳು ಸಾಹಿತ್ಯ ರಚನೆ ಮಾಡಬೇಕು ಎಂದರು.ನಾಗಪೋಂಡಾದ ಮಾಬ್ಲೇಶ್ವರ ಗಣು ನಾಯ್ಕ ಹಾಗೂ ಜೈನಾಬಿ ಅಬ್ದುಲ್ಲಾ ಖಾನ್‌, ಸೈಯದ್‌ ಅಬ್ದುಲ್‌ ಸತ್ತಾರರನ್ನು ಸನ್ಮಾನಿಸಲಾಯಿತು.

   ಮಾಬ್ಲೇಶ್ವರ ನಾಯ್ಕ ಮಾತನಾಡಿ, ತಂದೆ ಗಣು ನಾಯ್ಕ ಒಬ್ಬ ಚಳುವಳಿಕಾರರಾಗಿದ್ದರು. ಅವರ ಹೋರಾಟಕ್ಕೆ, ಸಂಘಟನಾ ಬಲವನ್ನು ಗುರುತಿಸಿ ಅವರಿಗೆ ಸಲ್ಲಬೇಕಾದ ಸನ್ಮಾನವನ್ನು ತನಗೆ ನೀಡಿ ಗೌರವಿಸಿದಕ್ಕೆ ಸಂತೋಷವಾಗುತ್ತಿದೆ. ಅಂಥ ಒಬ್ಬ ಶ್ರೇಷ್ಠ ಹೋರಾಟಗಾರನ ಮಗನಾಗಿ ಜನಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದರು. ಗೋವಾದ ಸೈಯದ್‌ ಅಬ್ದುಲ್‌ ಸತಾರ್‌ ಮಾತನಾಡಿ, ಬ್ರಿಟಿಷರ ದುರಾಡಳಿತ ಖಂಡಿಸಿ ತನ್ನ ತಂದೆ ಮತ್ತು ತಾತಾ ಅವರ ಆರನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರ ಹೋರಾಟ ಸ್ಮರಿಸಿ ತನ್ನನ್ನು ಸನ್ಮಾನಿಸಿರುವುದು ಸಂತಷದ ಸಂಗತಿ ಎಂದರು.

   ಡಾ| ಆರ್‌. ವಿ. ಭಂಡಾರಿ ಬರೆದ ಕುವೆಂಪು ದೃಷ್ಠಿ- ಸೃಷ್ಠಿ, ಕೆರೆಕೋಣದ ಮಾಧವಿ ಭಂಡಾರಿ ಬರೆದ ನೀನುಂಟು ನಿನ್ನ ರೆಕ್ಕೆಯುಂಟು, ಕೆರೆಕೋಣದ ವಿಠuಲ ಭಂಡಾರಿ ಬರೆದ ಹಸಿವಿನ ಹಾಡು ಪಾಡು, ಯಮುನಾ ಗಾಂವಕಾರ ಬರೆದ ಸುತ್ತ ಮುತ್ತ ಒಂದು ಸುತ್ತು ಎಂಬ ನಾಲ್ಕು ಪುಸ್ತಕಗಳನ್ನು ಕಡವಾಡದ ಲತೀಫಾಬಿ ಅಮೀರುದ್ದೀನ್‌ ಖತೀಬ್‌, ಜೊಯೀಡಾದ ರತ್ನಾಯ ಲಾಸ್ಕೋ ವೆಳೀಪ, ರುಕ್ಮಿಣಿ ವೆಂಕೋ ವೆಳೀಪ, ಬಿಣಗಾದ ಲಕ್ಷ್ಮಿ ಮತ್ತು ರಾಮಿ ಬಿಡುಗಡೆ ಗೊಳಿಸಿದರು.

   ಮಾಧವಿ ಭಂಡಾರಿ ಪ್ರಾರ್ಥಿಸಿದರು. ಡಾ| ವಿಠuಲ ಭಂಡಾರಿ ಸ್ವಾಗತಿಸಿದರು. ಬಿಡುಗಡೆಗೊಂಡ ಪುಸ್ತಕದ ಮಾಹಿತಿಯನ್ನು ಎಂ. ಎಂ. ನಾಯಕ, ಡಾ| ಶ್ರೀಪಾದ ಭಟ್‌, ಡಾ| ಸಿದ್ದಲಿಂಗಸ್ವಾಮಿ ವಸ್ತ್ರದ, ವಿಮಲಾ ಕೆಎಸ್‌ ನೀಡಿದರು.

Advertisements