rk hudagi foto (2)

ಪ್ರೊ. ಆರ್.ಕೆ. ಹುಡಗಿ

 

ಪ್ರೊ. ಆರ್.ಕೆ. ಹುಡಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ದುಡಿದಿದ್ದು, ಅವಿತರತ ಓದು ಬರಹಗಳಲ್ಲಿ ತೊಡಗಿಸಿಕೊಂಡವರು. ರಾಜ್ಯ ವ್ಯಾಪಿ ಹರಡಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದ ಅವರು ಅದರ ಹೆಚ್ಚು ಕಡಿಮೆ ಎಲ್ಲಾ ರಂಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಾಥಾಗಳಲ್ಲಿ ತೊಡಗಿಸಿಕೊಂಡಿದ್ದು,  2006ರಿಂದ ಅದರ ರಾಜ್ಯಾದ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮುದಾಯ ಅಲ್ಲದೆ, – 1976 ರಲ್ಲಿ ಕಲಬುರ್ಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ.  ಪೀಪಲ್ಸ್ ಸೋಸಿಯೋ ಕಲ್ಚುರಲ್ ಆರ್ಗನೈಜೆಶನ್ (ಅಧ್ಯಕ್ಷ),  ಇಂಡೋ-ಸೋವಿಯತ್ ಕಲ್ಚುರಲ್ ಸೋಸೈಟಿ (ಗುಲ್ಬರ್ಗ ವಿಭಾಗದ ಅಧ್ಯಕ್ಷ : 1984-1990ರ ವರೆಗೆ) , ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ನಿನ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿ 27 ವರ್ಷ,  ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ (ಉಪಾಧ್ಯಕ್ಷ), ಭಾರತ ಜ್ಞಾನ ವಿಜ್ಞಾನ ಸಮಿತಿ, ಗುಲಬರ್ಗದ ಅಧ್ಯಕ್ಷ (1985-1990ರ ವರೆಗೆ), ಗುಲಬರ್ಗವಿಶ್ವವಿದ್ಯಾಲಯದ ಶುದ್ಧಿಕರಣ ಸಮಿತಿ (ಅಧ್ಯಕ್ಷ), ಬಂಡಾಯ ಸಾಹಿತ್ಯ ಸಂಘಟನೆಯ 1979-80ರಲ್ಲಿ ಗುಲಬುರ್ಗ ಘಟಕ ದ ಸಂಸ್ಥಾಪಕ ಸದಸ್ಯ, ಗುಲಬರ್ಗ ರಾಜಕೀಯ ಶಾಂತಿ ಸಮಿತಿ (ಅಧ್ಯಕ್ಷ) – ಮುಂತಾದ ಹತ್ತು ಹಲವು ಸಾಮಾಜಿಕ ಸಂಸ್ಥೆಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.

ಹಲವು ಜಾಥಾ ಚಳುವಳಿಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ.   1979ರ ಸಮುದಾಯದ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾಥಾದಲ್ಲಿ  ಸಂಘಟಕನಾಗಿ,  1980ರ ರೈತನತ್ತ ಸಾಂಸ್ಕೃತಿಕ ಜಾಥಾ ಮುಖಂಡನಾಗಿ,  1985ರ ಬರಗಾಲದಲ್ಲಿ ಸಮುದಾಯದ ಜಾಥಾ ಮುಖ್ಯ ಸಂಘಟಕನಾಗಿ. 1986ರ 100 ಅಡಿಗಳ ಬಣ್ಣದ ಜಾಥಾದಲ್ಲಿ ಸಂಘಟಕನಾಗಿ,  1991ರ ಸಾಕ್ಷರತ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ, 1992ರ ಜನ ವಿಜ್ಞಾನ ಜಾಥಾದಲ್ಲಿ ಲೇಖಕ ಮತ್ತು ಸಂಘಟಕನಾಗಿ.
2005ರ ಭ್ರೂಣ ಹತ್ಯದ ವಿರುದ್ಧ ಪ್ರಚಾರ ಆಂದೋಲನಾ ಜಾಥಾ, ಲೇಖಕ ಮತ್ತು ಸಂಘಟಕನಾಗಿ,  2009ರಲ್ಲಿ ರೈತಪರ ಜಾಥಾದಲ್ಲಿ ಸಂಘಟಕ ಹಾಗೂ ಮುಖಂಡನಾಗಿ.,  2011ರಲ್ಲಿ ಬೀದರದಿಂದ ಬಳ್ಳಾರಿವರೆಗೆ ನಾಡಿನ ನೆಲ-ಜಲ ಉಳಿಸಲು ಲೇಖಕ ಮತ್ತು ಕಲಾವಿದರ ಜಾಥಾ ಸಂಘಟಕನಾಗಿ,  ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳು (1985, 1993, 1998, 2005ರಲ್ಲಿ) ರಂಗ ಸಂಘಟಕನಾಗಿ. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಕಾರ್ಟೂನ್  ಜಾಥಾ,    ಡಾ. ಅಂಬೇಡ್ಕರ್ ಶತಮಾನೋತ್ಸವ ಸಂದರ್ಭದಲ್ಲಿ 117 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸ., ಸಮುದಾಯ ಜಾಥಾಗಳ ಅಂಗವಾಗಿ 1265 ಊರುಗಳಲ್ಲಿ ನಾಟಕ ಪ್ರದರ್ಶನ ಹಾಗೂ ಉಪನ್ಯಾಸಗಳು, 1987ರಲ್ಲಿ ಬಿಜಾಪೂರ ಜಿಲ್ಲೆಯಲ್ಲಿಯ ದೇವದಾಸಿ ಪದ್ಧತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗುತಿ ನಾಟಕದ ಜಾಥಾದಲ್ಲಿ ರಂಗ ಸಂಘಟಕನಾಗಿ ಹಾಗೂ ಉಪನ್ಯಾಸಕನಾಗಿ, ಮೂಢ ನಂಬಿಕೆಗಳ ವಿರುದ್ಧ ಬೀದಿ ನಾಟಕಗಳ ಜಾಥಾ – ಮುಂತಾದ ಹತ್ತು ಹಲವು ಜಾಥಾಗಳಲ್ಲಿ ಅವರು ನಾಯಕತ್ವ ವಹಿಸಿದ್ದಾರೆ.

ವೃತ್ತಿಯಲ್ಲಿ ಅವರು 33ವರ್ಷಗಳ ಕಾಲ ಇಂಗ್ಲೀಷ  ಉಪನ್ಯಾಸಕ ಹಾಗೂ ಪ್ರಾಧ್ಯಾಪಕರಾಗಿದ್ದು,  2007ರಲ್ಲಿ ನಿವೃತ್ತಿ ಹೊಂದಿದರು.

ಅವರ ಓದಿನ ಹರವು, ಆಳ ವಿಸ್ಮಯ ಹುಟ್ಟಿಸುವಂತಹುದು. ಅದೇ ರೀತಿ ಅವರ ಬರಹಗಳ ವಿಸ್ತಾರ. ಅವರ ಬರಹಗಳಲ್ಲಿ ಸ್ವಂತದ್ದೂ ಇವೆ.  ಅನುವಾದಗಳೂ ಇವೆ.  ಅವರ ಸ್ವತಂತ್ರ ಪುಸ್ತಕಗಳ ಸಂಖ್ಯೆ 18. ಅನುವಾದಿತ ಪುಸ್ತಕಗಳ ಸಂಖ್ಯೆ 24. ಅವರ ಬರಹಗಳ ಪಟ್ಟಿಯನ್ನು ಇಲ್ಲಿ ಕೆಳಗೆ ಕೊಡಲಾಗಿದೆ.

ಸ್ವತಂತ್ರ ಕೃತಿಗಳು :

1) ಈರೋಬಿ (ಗೀತರೂಪಕ)
2) ಬರದ ಬಯಲಾಟ (ಬೀದಿನಾಟಕ)
3) ಅಕ್ಷರ (ಬೀದಿನಾಟಕ)
4) ಒರೆಗಲ್ಲು (ಬೀದಿನಾಟಕ)
5) ಸಂಸ್ಥಾ (ರಂಗನಾಟಕ)
6) ಬಾಯಿ ಬಂದ್ ಬಾದಶಹಾ ಪುರಾಣ, (ರಂಗನಾಟಕ)
7) ಹೆಮ್ಮಾರಿಯ ರಸ ಪುರಾಣ (ರಂಗನಾಟಕ)
8) ಉಸ್ತುವಾರಿ ಸಚಿವರ ಬಸ್ತಾನಿ (ರಂಗನಾಟಕ)
9) ಪಾದಚಾರಿಯ ಪುರಾಣ (ಬೀದಿನಾಟಕ)
10) ಸಾಕುನಾಯಿ (ಬೀದಿನಾಟಕ)
11) ಜೊಲ್ಲ್ಯಾನಾಯಿ (ಬೀದಿನಾಟಕ)
12) ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ (ಬೀದಿನಾಟಕ)
13) ಅನಾಮಿ ಪಿಂಡದ ಆರ್ತನಾದ (ಬೀದಿನಾಟಕ)
14) ಅನ್ನದಾತನ ಆರ್ತನಾದ (ಬೀದಿನಾಟಕ)
15) ನರಗುಂದ ರೈತನ ಬಂಡಾಯ (ಬೀದಿನಾಟಕ)
16) ಪ್ರಳಯಾಂತಕ ಪ್ರತೀಕಾರ (ರಂಗನಾಟಕ)
17) ಅಸಮಾನತೆಯ ಆಸುರಿ ಮುಖಗಳು
18) ಗುರು ಸಾರಥಿ-ಶಿಷ್ಯ ಅತಿರಥ (ಬೀದಿನಾಟಕ)

ಅನುವಾದ ಕೃತಿಗಳು :

1) ನಾನೇಕೆ ನಾಸ್ತಿಕ ಭಗತ್ಸಿಂಗ್
2) ವಿಮೋಚನೆಯ ದಾರಿ (ಇ.ಎಮ್.ಎಸ್.ಎನ್)
3) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್)
4) ಸಮರ್ಥ ಸಾಮ್ಯವಾದಿ (ಲಿವು-ಶಾವೋಕಿ)
5) ಜೋತಿಬಸ್ಸು (ಸುರಭಿ ಬ್ಯಾನರ್ಜಿ)
6) ದಲಿತ ಸಂಘರ್ಷ : ದಾರಿ-ದಿಕ್ಕು (ಆನಂದ ತೇಲತುಂಬ್ಡೆ)
7) ದಲಿತರು :ಭೂತ-ಭವಿಷ್ಯ (ಆನಂದ ತೇಲತುಂಬ್ಡೆ)
8) ಜಾತಿ ವ್ಯವಸ್ಥೆ : ಸಮಸ್ಯೆ ಸವಾಲುಗಳು (ಜಗಜೀವನರಾಮ)
9) ಜಾತಿ ವ್ಯವಸ್ಥೆ : ಉಗಮ-ವಿಕಾಶ-ವಿನಾಶ (ಡಾ. ಬಿ.ಆರ್. ಅಂಬೇಡ್ಕರ್)
10) ಡಾ. ಬಿ.ಆರ್. ಅಂಬೇಡ್ಕರ್ : ಪ್ರಭುದ್ಧ ಭಾರತದ ದೃಷ್ಟಾರ  (ಗೇಲ್ ಅಮ್ವೆಡ್ಸ್)
11) ಕಾಮರಸಾಯನ (ತರುಣ ತೇಜಪಾಲ್)
12) ಅಮ್ಮಿ (ಸೈಯಿದ್ ಅಕ್ತರ್ ಮಿರ್ಜಾ)
13) ಮೇ ಡೇ ಹುತಾತ್ಮರ ಮಹಾನ್ ಗಾಥೆ (ಆ್ಯಡಲ್ಮನ್)
14) ಆರನೇ ಹೆಂಡತಿಯ ಆತ್ಮಕಥೆ (ತೆಹಮಿನಾ ದುರ್ರಾನಿ)
15) ಪೀಠಾಧಿಪತಿಯ ಪತ್ನಿ (ತೆಹಮಿನಾ ದುರ್ರಾನಿ)
16) ಸೆಕ್ಯುಲರ್ವಾದ: ಬುಡ-ಬೇರು (ಮಣಿಶಂಕರ್ ಅಯ್ಯರ್)
17) ಭಾರತೀಯ ಮಹಿಳೆಯರ ಹೋರಾಟ (ಕನಕ ಮುಖರ್ಜಿ)
18) ಪ್ರೀತಿಯಿಂದ ಅಪ್ಪನಿಗೆ (ಶಬಾನ ಅಜ್ಮಿ)
19) ಧರೆ ಹೊತ್ತಿ ಉರಿದಾಗ : ಭಾರತದ ವಿಭಜನೆಯ ದುರಂತ  ಕತೆಗಳು (ಅಲೋಕ್ ಭಲ್ಲಾ)
20) ಜಪಾನ್ (ಯಾಮಾಗುಜಿ ಹಿರೋಯಿಚಿ)
21) ಭಾರತದ ಬಡತನ : ಸಂವಿಧಾನಕ್ಕೊಂದು ಕಳಂಕ
22) ಅಭಿವೃದ್ಧಿ ಆತ್ಮಘನತೆ (ಅಮಿತ್ ಬಹದ್ದೂರಿ)
23) ಕಾರ್ಪೊರೇಟ್ ಕಾಲದಲ್ಲಿಯೂ ಕಾರ್ಲ್ ಮಾರ್ಕ ಪ್ರಸ್ತುತ  (ಟೆರ್ರಿ ಈಗಲ್ಟನ್)
24) ಭಯೋತ್ಪಾದಕ (ಮೋಶಿನ್ ಹಮೀದ್)

 

 

Advertisements