ಟೆರಿ ಈಗಲ್ ಟನ್ ಅವರ “…ಕಾರ್ಲ್ ಮಾರ್ಕ್ಸ್ ಪ್ರಸ್ತುತ” ಪುಸ್ತಕದ ಹುಟ್ಟಿಗೆ ಕಾರಣವಾದ ಎಸ್.ಆರ್. ವಿಜಯಶಂಕರ ಅವರ ಲೇಖನದ ಕೆಲವು ಭಾಗಗಳು ಇಲ್ಲಿವೆ. …………..

ಹೊಸ ಕುಲುಮೆಯಲ್ಲಿ ಮಾರ್ಕ್ಸ್ ಚಿಂತನೆ

….ಟೆರಿ ಈಗಲ್‌ಟನ್ (ಜ:1943) ಈಗ ಜೀವಂತವಿರುವ ಇಂಗ್ಲೀಷ್ ವಿಮರ್ಶಕರಲ್ಲಿ ಬಹಳ ಮುಖ್ಯರಾದವರು. ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾದ ಅವರು ಇಂಗ್ಲೆಂಡ್‌ನ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯ ಹಾಗೂ ಅಮೆರಿಕಾದ ನಾರ್ಥ್‌ಡಾಮ್ ವಿಶ್ವವಿದ್ಯಾನಿಲಯಗಳಲ್ಲಿ ಸಾಹಿತ್ಯದ ಪಾಠ ಹೇಳುತ್ತಾರೆ. ಡಬ್ಲಿನ್‌ನಲ್ಲಿ ವಾಸಿಸುತ್ತಾರೆ.

ರೇಮಂಡ್ ವಿಲಿಯಮ್ಸ, ವಾಲ್ಟರ್ ಬೆಂಜಮಿನ್ ಇವರಂತೆ ಎಡಪಂಥೀಯ ಚಿಂತನೆಗೆ ಹೆಸರಾದವರು. `ವೈ ಮಾರ್ಕ್ಸ್ ವಾಸ್ ರೈಟ್~ ಎನ್ನುವ ಈ ಕೃತಿಯಲ್ಲಿ ಸೋವಿಯತ್ ಒಕ್ಕೂಟದ ಪತನದ ಬಳಿಕ, ಮಾರ್ಕ್ಸ್‌ವಾದಕ್ಕೆ ಬಹು ಸಮರ್ಥವಾದ ವ್ಯಾಖ್ಯಾನ ನೀಡಿ, ಮಾರ್ಕ್ಸ್ ತತ್ವದ ಒಳನೋಟಗಳನ್ನು ಹೊಸ ಕಾಲದ ವಿಮರ್ಶೆಗಳಿಗೆ ಅನ್ವಯಿಸಿ, ಹೊಸ ಬೆಳಕಿನಲ್ಲಿ ಇನ್ನೊಮ್ಮೆ ವಿವರಿಸಿದ್ದಾರೆ.

ಈ ಕೃತಿಯಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಅವುಗಳಲ್ಲಿ ಇಂದು ಮಾರ್ಕ್ಸ್‌ವಾದದ ವಿರುದ್ಧ ಹಾಗೂ ಮಾರ್ಕ್ಸ್ ಇನ್ನು ಮುಂದೆ ನಿರುಪಯುಕ್ತ ಎಂದು ವಾದಿಸುವ ಹತ್ತು ಮುಖ್ಯ ವಿಮರ್ಶಾತ್ಮಕ ಆಕ್ಷೇಪಗಳನ್ನು ಸಂಗ್ರಹಿಸಿ ಅವುಗಳಿಗೆ ಉತ್ತರಿಸುವ ರೂಪದಲ್ಲಿ ಪುಸ್ತಕವನ್ನು ರಚಿಸಲಾಗಿದೆ.

ಟೆರಿ ಈಗಲ್‌ಟನ್ ಉತ್ತರಗಳು ಅವರ ವ್ಯಾಖ್ಯಾನ, ಸಮರ್ಥ ಪಾಂಡಿತ್ಯ, ಆಧುನಿಕ ಕಾಲದ ಆಮೂಲಾಗ್ರ ತಿಳಿವಳಿಕೆ, ವಿಮರ್ಶಾತ್ಮಕ ಒಳನೋಟ, ಅಲ್ಲಲ್ಲಿ ಹಾಸ್ಯಮಿಶ್ರಿತ ವ್ಯಂಗ್ಯ ಮತ್ತು ಶಕ್ತಿಯುತ ಸಂವಹನ ಶಕ್ತಿಯಿಂದ ಕೂಡಿದೆ. ಎಲ್ಲೂ ಈ ಕೃತಿ ಕೇವಲ ವಿಮರ್ಶಕರು, ಪಂಡಿತರು ಮಾತ್ರ ಓದಬಹುದಾದ ಪುಸ್ತಕ ಅನಿಸುವುದಿಲ್ಲ. ಸಾಮಾನ್ಯ ಓದುಗರೂ ಈ ಕೃತಿಯಲ್ಲಿ- ಪರಿಸರ, ಆಧುನಿಕತೆ ಮುಂತಾದ ವಿಚಾರಗಳನ್ನು ಚರ್ಚಿಸುವಾಗ, ತನ್ಮಯರಾಗಿ ತಮ್ಮದೇ ಅನುಭವಗಳ ವಿಸ್ತಾರವೆಂಬಂತೆ ಓದಿಕೊಳ್ಳಬಹುದು.

ಮಾರ್ಕ್ಸ್‌ವಾದದ ಬಗೆಗಿನ ಹತ್ತು ಆಕ್ಷೇಪಗಳನ್ನು ಹೀಗೆ ಪಟ್ಟಿ ಮಾಡಬಹುದು:
1. ಮಾರ್ಕ್ಸ್‌ವಾದ ಮುಗಿಯಿತು. ಕೈಗಾರಿಕಾ ಪಕ್ವತೆಯ ಬಳಿಕದ ಲೋಕಕ್ಕೆ ಮಾರ್ಕ್ಸ್‌ವಾದ ಪ್ರಸ್ತುತವಲ್ಲ.
2. ಮಾರ್ಕ್ಸ್‌ವಾದ ಅತ್ಯುತ್ತಮವಾದ ತತ್ವವಾಗಿರಬಹುದು. ಆದರೆ ಅದು ಜಾರಿಗೆ ತರುವುದು ಕೊನೆಗೂ ರಾಜಕೀಯ ನಿರಂಕುಶಾಧಿಕಾರವನ್ನು.
3. ಮಾರ್ಕ್ಸ್‌ವಾದ ಸ್ವಾತಂತ್ರ್ಯ ನೀಡದೆ ಗಂಡು-ಹೆಣ್ಣುಗಳನ್ನು ಕೂಡಾ ಚಾರಿತ್ರಿಕ ಘಟನೆಗಳ ಫಲಗಳಾಗಿಯೇ ನೋಡುತ್ತದೆ. ಅದು ಮಾರ್ಕ್ಸ್‌ವಾದ ಆಡಳಿತಕ್ಕೆ ಬಂದ ದೇಶಗಳಲ್ಲಿ ಆದಂತೆ ಮಾನವ ಘನತೆಗೆ ವಿರುದ್ಧವಾದದ್ದು.
4. ಮಾರ್ಕ್ಸ್‌ವಾದ ಎಂದೂ ಸಾಧ್ಯವಾಗದ ಒಂದು ಯುಟೋಪಿಯ. ಅದು ಸಾಧ್ಯವಾಗದ ಮಾನವ ಸಮಾನತೆಯ ಕನಸುಗಳನ್ನು ಬಿತ್ತುತ್ತದೆ. ಮನುಷ್ಯನ ಸ್ವಾರ್ಥ ಹಾಗೂ ದುಷ್ಟತನಗಳಿಗೆ ಕುರುಡಾಗಿದೆ.
5. ಮಾರ್ಕ್ಸ್‌ವಾದ ಸಕಲವನ್ನೂ ಆರ್ಥಿಕ ತಳಹದಿಗೆ ಇಳಿಸಿ ಸರಳಗೊಳಿಸುತ್ತದೆ. ಆರ್ಥಿಕತೆಯ ಮೇಲೆಯೇ ಎಲ್ಲವನ್ನೂ ನಿರ್ಧರಿಸುವ ಸ್ವಭಾವದ್ದು. ಮನುಷ್ಯ ಚೈತನ್ಯ ಅದಕ್ಕಿಂತ ದೊಡ್ಡದು.
6. ಮಾರ್ಕ್ಸ್ ಕೇವಲ ಒಬ್ಬ ಭೌತವಾದಿ. ಭೌತಿಕತೆ ಆಚೆ ಏನೂ ಇಲ್ಲ ಎನ್ನುವವ. ಧರ್ಮ, ದೇವರು ಮೊದಲಾದವನ್ನು ಸಾರಾಸಗಟು ತಿರಸ್ಕರಿಸುವ ಅಲೌಕಿಕದ ಅನುಭವದ ಬಗ್ಗೆ ಕುರುಡಾದವ.
7. ಮಾರ್ಕ್ಸ್‌ವಾದದ ವರ್ಗ ಕಲ್ಪನೆಗಿಂತ ಹೆಚ್ಚು ಅಪ್ರಸ್ತುತವಾದ್ದು ಹಾಗೂ ಹಳಸಲಾದ ವಿಚಾರ ಇಂದು ಇನ್ನೊಂದಿಲ್ಲ.
8. ಮಾರ್ಕ್ಸ್‌ವಾದಿಗಳು ಕ್ರೌರ್ಯದ ಪ್ರತಿಪಾದಕರು. ಹಿಂಸೆಯ ರಾಜಕೀಯವೇ ಅವರ ಪ್ರತಿಪಾದನೆ. ಅವರು ಕತ್ತಿ, ಕೋವಿಗಳಲ್ಲಿ ನಂಬಿಕೆ ಉಳ್ಳವರು.
9. ಮಾರ್ಕ್ಸ್‌ವಾದ ಶಕ್ತಿಶಾಲಿ ರಾಷ್ಟ್ರ ಕಲ್ಪನೆಯನ್ನು ಹೊಂದಿದೆ. ಖಾಸಗಿ ಆಸ್ತಿಯನ್ನು ಕೊನೆಗೊಳಿಸಿ ರಾಜ್ಯ ಪ್ರಭುತ್ವದ ಶಕ್ತಿಯಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡುವವರು.
10. ಕಳೆದ ನಾಲ್ಕು ದಶಕಗಳ ಎಲ್ಲಾ ಮುಖ್ಯ ವೈಚಾರಿಕ ಚಳವಳಿಗಳೂ ಮಾರ್ಕ್ಸ್‌ವಾದದ ಹೊರಗಿನಿಂದಲೇ ಬಂದಿವೆ. ಸ್ತ್ರೀವಾದ, ಪರಿಸರವಾದ, ಸಲಿಂಗ ಸಂಬಂಧ ಸ್ವಾತಂತ್ರ್ಯ ವಾದ, ಜನಾಂಗೀಯ/ವರ್ಣೀಯ ವಾದ, ಪ್ರಾಣಿಗಳ ಹಕ್ಕುಗಳ ವಾದ, ಶಾಂತಿ ಚಳವಳಿ, ಜಾಗತೀಕರಣದ ವಿರುದ್ಧದ ಚಳವಳಿ ಮೊದಲಾದವು ಈಗ ಸಾಮಾಜಿಕ ರಾಜಕೀಯ ಆಕ್ಟಿವಿಸಂ ಆಗಿ ಬೆಳೆಯುತ್ತಿವೆ. ಅವುಗಳಿಗೂ ಮಾರ್ಕ್ಸ್‌ವಾದಕ್ಕೂ ಏನೂ ಸಂಬಂಧವಿಲ್ಲ………

ಪೂರ್ಣ ಪಾಠಕ್ಕೆ (ಪ್ರಜಾವಾಣಿ ಆಗಸ್ಟ್ 21, 2011) ಇಲ್ಲಿ ಓದಿ

http://www.prajavani.net/article/%E0%B2%B9%E0%B3%8A%E0%B2%B8-%E0%B2%95%E0%B3%81%E0%B2%B2%E0%B3%81%E0%B2%AE%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%BE%E0%B2%B0%E0%B3%8D%E0%B2%95%E0%B3%8D%E0%B2%B8%E0%B3%8D-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s