1041 cover1042 cover

ಬೀದರ್: ಸಣ್ಣ ಕಥೆಗಾರರು ಸರಳ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಾಗಲಕೋಟೆಯ ಸಾಹಿತಿ ಡಾ. ಬಾಳಾಸಾಹೇಬ್ ಲೋಕಾ­ಪೂರ ಸಲಹೆ ಮಾಡಿದರು.

ನಗರದ ರಂಗಮಂದಿರದಲ್ಲಿ ಶನಿವಾರ ನಡೆದ ಕೆ. ನೀಲಾ ಅವರ ‘ಜ್ಯೋತಿಯೊಳಗಣ ಕಾಂತಿ’ ಹಾಗೂ ‘ನೆಲದ ಪಿಸುಮಾತು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಣ್ಣ ಕಥೆಗಳಲ್ಲಿ ಬಳಸುವ ತಂತ್ರಗಳು ಓದುಗರಿಗೆ ಸರಳವಾಗಿ ಅರ್ಥವಾಗುವಂತಿರಬೇಕು. ಯಾವುದೇ ಕಾರಣಕ್ಕೂ ಗೊಂದಲ ಉಂಟು ಮಾಡಬಾರದು. ಹಾಗೂ ಸರಳ ತಲೆ ಬರಹ ಹೊಂದಿರಬೇಕು ಎಂದು ಹೇಳಿದರು.

ಸಣ್ಣ ಕಥೆಗಳು ಹೆಚ್ಚು ಹೆಚ್ಚಾಗಿ ಪ್ರಕಟ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ನೀಲಾ ಕೆ. ಅವರ ‘ಜ್ಯೋತಿಯೊಳಗಣ ಕಾಂತಿ’­ಯುಲ್ಲಿ ಕತ್ತಲೆಯ ಜಗತ್ತನ್ನು ಶಬ್ದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಜಗತ್ತಿನಲ್ಲಿ ದೊಡ್ಡ ಚಿಂತಕರು, ದಾರ್ಶನಕರಾಗಿ ಹೊರ ಹೊಮ್ಮಿದ ಬಹುತೇಕರು ಸಾಮಾನ್ಯ ಜನರೇ ಆಗಿದ್ದಾರೆ ಎಂದು ‘ನೆಲದ ಪಿಸು­ಮಾತು’ ಅಂಕಣ ಬರಹಗಳ ಪುಸ್ತಕ ಸಂಗ್ರಹ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗಿ ಅಭಿಪ್ರಾಯಪಟ್ಟರು.

ಜನವಾದಿ ಮಹಿಳಾ ಸಂಘಟನೆಯ ಕಾರ್‍ಯಕರ್ತೆಯರಾದ ಸುಮಿತ್ರಾ ಮಾರುತಿ ಹಾಗೂ ವಿಜಯಲಕ್ಷ್ಮಿ ರಾಜಪ್ಪ ಪುಸ್ತಕ ಬಿಡುಗಡೆ ಮಾಡಿ­ದರು. ಹಿರಿಯ ಸಾಹಿತಿ ಪ್ರೊ. ವೀರೇಂದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕಿ ನೀಲಾ ಕೆ., ಕೋದಂಡ­ರಾಮಯ್ಯ, ಪ್ರೊ. ಮೀನಾಕ್ಷಿ ಬಾಳಿ, ದೇಶಾಂಶ ಹುಡಗಿ, ಅಬ್ದುಲ್ ಖದೀರ್, ಡಾ. ಪ್ರೇಮಾ ಸಿರ್ಸೆ, ಡಾ. ಜಯದೇವಿ ಗಾಯಕವಾಡ, ಶಂಭು­ಲಿಂಗ ವಾಲ್ದೊಡ್ಡಿ, ಭೀಮಾಶಂಕರ, ಮೀನಾ ಬೋರಾಳಕರ್ ಉಪಸ್ಥಿತ­ರಿದ್ದರು. ಶಿವಕುಮಾರ ಕಟ್ಟೆ ಪ್ರಾಸ್ತಾ­ವಿ­ಕವಾಗಿ ಮಾತನಾಡಿದರು. ಪ್ರೊ. ಬಸವರಾಜ ಮಯೂರ ಸ್ವಾಗತಿಸಿ­ದರು. ಚಂದ್ರಪ್ಪ ಹೆಬ್ಬಾಳಕರ್ ನಿರೂಪಿಸಿದರು.

Advertisements