sahayaana-sanyuktha-karnataka-vimarshe-11

ಆರ್ ವಿ ಭಂಡಾರಿಯವರು ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣದಲ್ಲಿ ನೆಲೆ ನಿಂತು ಸಾರಸ್ವತ ಲೋಕದಲ್ಲಿ ಖ್ಯಾತರಾದವರು. ವಿಮರ್ಶೆ, ಕತೆ, ಕವನ, ನಾಟಕ, ಕಾದಂಬರಿ ಹೀಗೆ ಅವರ ಬರಹ ವಿಭಿನ್ನ ರೀತಿಯದು. ಜೀವನಾನುಭವವೇ ಆವರ ಈ ಎಲ್ಲ ಕೃತಿಗಳಿಗೆ ಆಧಾರ. ಬದುಕು ಬರಹಗಳಿಂದ ಅವರು ಬಾಳು ಜನಾನುರಾಗಿ, ಹಲವಾರು ಪ್ರಶಸ್ತಿ ಪುರಸ್ಕ್ರತರು. ಆದರೆ ಅವರು ಇಂದು ನಮ್ಮೊಡನೆ ಇಲ್ಲ. ಅವರ್ ಕುರಿತು ಅನೇಕ್ ಮಿತ್ರರು ಬರೆದ ಲೇಖನಗಳ ಈ ಕೃತಿ ಹೊರಬರುವ ಮುನ್ನ ಇಹ ಲೋಕ ತ್ಯಜಿಸಿದರು.ಇಲ್ಲಿನ ಲೇಖನಗಳು ಆರ್. ವಿ. ಭಂಡಾರಿಯವರ ಸಾಹಿತ್ಯ ಶಕ್ತಿ ಎಷ್ಟೊಂದು ಅಗಾಧವಾಗಿತ್ತು ಎಂಬುದರ ಸೂಚಿ. ಜಿ.ಎಮ್. ಹೆಗಡೆ ಈ ಕೃತಿಯನ್ನು ಚೊಕ್ಕವಾಗಿ ಸಂಪಾದಿಸಿದ್ದಾರೆ. ಭಂಡಾರಿಯವರಿಗೆ ಇದು ಶೃದ್ಧಾಂಜಲಿಯ ಕಾಣಿಕೆ ಎಂದರೆ ತಪ್ಪಿಲ್ಲ.

`ಭಂಡಾರಿಯವರು ನಾಡಿಗೆ ನೀಡಿದ ಸಾಂಸ್ಕೃತಿಕ ಕೊಡುಗೆ ಅನನ್ಯವಾದುದುಎಂದಿದ್ದಾರೆ ಬರಗೂರು ರಾಮಚಂದ್ರಪ್ಪ.

Advertisements