lankesh-patrike-review

ಲಿಖಿತ ದಾಖಲೆಗಳು ಲಭ್ಯವಿಲ್ಲದ ಕಾಲವನ್ನು ಪುರಾತನ ಶಾಸ್ತ್ರಜ್ಞರು ` ಪೂರ್ವೇತಿಹಾಸಎಂದು ಕರೆಯಲ್ಪಡುವ ಈ ಕೃತಿಯು ಭಾರತದ ಆರಂಭಿಕ ಜನತೆಯ ಜೀವನವನ್ನು ವಿವರಿಸುತ್ತದೆ. ಇದು ಕೇವಲ ಇತಿಹಾಸವನ್ನು ಪರಿಚಯಿಸದೇ ಕೋಮುವಾದಿ ನಿರೂಪಣೆಗಳಿಗೆ ವಿರುದ್ಧವಾಗಿ ಒಂದು ಜಾತ್ಯತೀತ ಇತಿಹಾಸವನ್ನು ರಚಿಸುವತ್ತ ಸಾಗುತ್ತಿರುವ ಮಹತ್ವದ ಹೆಚ್ಚೆಯನ್ನಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜಾತ್ಯತೀತವಾದೀ ಮತ್ತು ಹಿಂದುತ್ವವಾದೀ ಬಣಗಳ ನಡುವೆ ಇತಿಹಾಸ ಶಿಕ್ಷಣ ಪಠ್ಯಗಳನ್ನು ರಚಿಸುವ ಕುರಿತು ವಿವಾದಗಳು ಉಂಟಾಗುತ್ತಿರುವ ಸಂದರ್ಭದಲ್ಲಿ ಇಂಥ ಕೃತಿ ಹೊರ ಹೊಮ್ಮಿಸಿರುವ ನೈಜ ಸಂಗತಿಗಳು ಇಂಥ ವಿವಾದಗಳ ಶಮನಕ್ಕಾಗಿ ಬೆಳಕು ಚೆಲ್ಲುತ್ತವೆ. ಆರ್ಯರು ಭಾರತೀಯ ಮೂಲದವರು ಮತ್ತು ಸಿಂಧೂ ಸಂಸ್ಕೃತಿ ಆರ್ಯರು ಎಂದು ಹಿಂದುತ್ವವಾದೀ ಬಣವು ವಾದಿಸುವುದನ್ನು ಈ ಪ್ರಾಗೈತಿಹಾಸಿಕ ಬೆಳಕಿನಲ್ಲಿ ಅಭ್ಯಸಿಸಿದಾಗ ಇವರ ಈ ವಾದಗಳು ಎಷ್ಟು ಹಾಸ್ಯಾಸ್ಪದ ಎನಿಸದಿರದು.

ಪ್ರಾಕ್ತನಾಧಾರದ ಪ್ರಕಾರ ಭಾರತದಲ್ಲಿ ಸಪ್ತ ಸಿಂಧೂ ಪ್ರದೇಶದಲ್ಲಿ ವೈದಿಕ ಸಂಸ್ಕೃತಿಯ ಜನರು ವಾಸವಾಗಿದ್ದ ಕಾಲದಲ್ಲಿಯೇ ಭಾರತದಾದ್ಯಂತ ನವಶಿಲಾಯುಗ ಮತ್ತು ತಾಮ್ರ ಶಿಲಾಯುಗ ಸಂಸ್ಕೃತಿಗಳ ಗ್ರಾಮಗಳಿದ್ದರೂ . . . ಈ ಯಾವ ಸಂಸ್ಕೃತಿಗಳ ಇತಿಹಾಸವೂ ನಮಗೆ ಲಿಖಿತ ಆಧಾರಗಳಿಂದ ಲಭ್ಯವಾಗುವುದಿಲ್ಲವೆಂಬುದನ್ನು ಈ ಗ್ರಂಥಗುಚ್ಛವು ತಿಳಿಸುತ್ತದೆ. ಅಲ್ಲದೆ ಅಲ್ಲದೆ ಅರ್ಧ ಶತಮಾನದಿಂದೀಚೆಗಷ್ಟೇ ಈ ಪ್ರಾಕ್ತನ ಆಧಾರಗಳು ಲಭ್ಯವಾಗಿದ್ದರಿಂದ ನಮ್ಮ ಇತಿಹಾಸದ ಪ್ರಾರಂಭವು ಸಿಂಧೂ ಸಂಸ್ಕೃತಿ – ವೈದಿಕ ಕೇಂದ್ರವಾಗಿಯೇ ಬೆಳೆಯಿತು. ಹೀಗಾಗಿ ಸಿಂಧು ಸಂಸ್ಕೃತಿ ವೈದಿಕರೆ? ವೈದಿಕರು ಹೊರಗಿನಿಂದ ಬಂದವರೇ? ಮುಂತಾದ ಆರ್ಯ-ಅನಾರ್ಯ ಕೇಂದ್ರಿತ ಚರ್ಚೆಗಳು ಬೆಳೆಯುವುದಕ್ಕೆ ಕಾರಣ ಕಾಲವೆಂಬ, ಭಾರತೀಯ ಇತಿಹಾಸದ ಆರಂಭದ ಕಾಲದ ಕುರಿತು ಇಂಥ ಜನಾಂಗೀಯ ಚರ್ಚೆಗಳನ್ನು ನಡೆಸುವುದು ತೀರಾ ಕ್ಷುದ್ರವಾದ ವಿಚಾರವಾಗಿದೆ ಎಂಬ ಅಂಶವನ್ನ ಈ ಪುಸ್ತಕ ತಿಳಿಸುತ್ತದೆ. ಮುಖ್ಯವಾಗಿ ಭಾರತೀಯ ಇತಿಹಾಸಕಾರರು ಒಂದಿಲ್ಲೊಂದು ಸಿದ್ಧಾಂತಗಳ ಪರವಾಗಿ ಇತಿಹಾಸಗಳನ್ನು ವಿವರಿಸುತ್ತಾ ಹೋಗುತ್ತಿರುವಾಗ ಈ ಯಾವುದರ ಕುರಿತೂ ತಲೆಕೆಡಿಸಿಕೊಳ್ಳದೇ ಇಂಥ ಮಹತ್ವದ ಆಧಾರಗಳನ್ನು ಬೆಳಕಿಗೆ ತಂದು ಭಾರತೀಯ ಬಹು ಸಂಸ್ಕೃತಿಗಳ ಇತಿಹಾಸಕ್ಕೆ ನಿಜವಾದ ತಳಪಾಯವನ್ನು ಹಾಕಿದವರೇ ಪ್ರಾಕ್ತನ ಶಾಸ್ತ್ರಜ್ಞರು ಎಂಬ ಸತ್ಯವನ್ನು ಈ ಕೃತಿ ಹೊರಸೂಸುತ್ತದೆ.

ಇತಿಹಾಸದ ಬಗ್ಗೆ ವೈಜ್ಞಾನಿಕ ಮತ್ತು ಜಾತ್ಯತೀತ ಅಂಶಗಳನ್ನು ಪ್ರೋತ್ಸಾಹಿಸುತ್ತಿರುವ ಮಧ್ಯಪ್ರದೇಶದ `ಅಲೀಗರ್ ಹಿಸ್ಟೋರಿಯನ್ ಸೊಸೈಟಿಯು `ಭಾರತದ ಜನ ಇತಿಹಾಸಎಂಬ ಯೋಜನೆಯಡಿಯಲ್ಲಿ ಇರ್ಫಾನ್ ಹಬೀಬ್ರವರ Prehistory ಎಂಬ ಆಂಗ್ಲ ಭಾಷೆಯ ಈ ಕೃತಿಯನ್ನು ಬಳ್ಳಾರಿಯ ಪ್ರದೀಪ್ ಬೆಳಗಲ್ ರವರು ` ಪೂರ್ವೇತಿಹಾಸ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಲು ಅನುಮತಿಸಿದೆ. ಈ ಪುಸ್ತಕವು ಮೂರು ಅಧ್ಯಾಯಗಳಿಂದ ಕೂಡಿದ್ದು ಮೊದಲನೆಯದು ಭೂ ಸ್ವರೂಪ ಮತ್ತು ನೈಸರ್ಗಿಕ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂತತಿಗಳ ನಿಮರ್ಾಣದ ಕುರಿತು ಚರ್ಚಿಸುತ್ತದೆ. ಎರಡನೆಯದು ಮಾನವ ಸಂತತಿಯ ಉಗಮ, ಭಾರತದಲ್ಲಿ ಆದಿ ಮಾನವ ಹಾಗೂ ಆಧುನಿಕ ಮಾನವ ಸಂತತಿಗಳ ಕುರಿತ ಆಧಾರಗಳನ್ನು ಅವಲೋಕಿಸುತ್ತದೆ. ಮೂರನೆಯದು ನವ ಶಿಲಾಯುಗದ ಆದಿ ಕೃಷಿ ಸಂಸ್ಕೃತಿಗಳು, ಅವಶೇಷಗಳು ಮತ್ತು ಅಂದಿನ ಜನಜೀವನ ಕುರಿತು ಮಾಹಿತಿ ನೀಡುತ್ತದೆ. ಜೊತೆಗೆ ಕಂಚಿನ ಯುಗದ ಪ್ರಾರಂಭಿಕ ಲಕ್ಷಣಗಳು, ಭಾರತದಲ್ಲಿ ಭತ್ತ, ಗೋಧಿ ಮುಂತಾದ ಕೃಷಿ ಧಾನ್ಯಗಳ ಸಾಕಾಣಿಕೆಯ ಇತಿಹಾಸ ಪರಿಚಯಿಸುವ ಕೃತಿಯಾಗಿದ್ದು ಚಿಂತಕರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಯನಾಸಕ್ತರಿಗೆ ಉಪಯುಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ `ಚಿಂತನ-ಪುಸ್ತಕಮಳಿಗೆಇದನ್ನು ಪ್ರಕಟಿಸಿದೆ.

Advertisements