ಕೋಮುವಾದೀ ನಿರೂಪಣೆಗಳನ್ನು ಅಲ್ಲಗಳೆಯುವ ವೈಜ್ಞಾನಿಕ ಇತಿಹಾಸವನ್ನು ಸಂಕ್ಷಿಪ್ತವಾಗಿ ಸಾಮಾನ್ಯ ಜನತೆಗೆ ಪರಿಚಯಿಸುವ ದೃಷ್ಟಿಯಿಂದ ಅಲಿಘಡ ಇತಿಹಾಸಕಾರರ ಸಮಾಜವು ಂ ಕಜಠಠಿಟಜಊಣಠಡಿಥಿ ಠಜಿ ಟಿಜಚಿ ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಯೋಜನೆಯಲ್ಲಿ ಪ್ರಸ್ತುತ ಅನುವಾದಿತ ಕೃತಿ, ಇಫರ್ಾನ್ ಹಬೀಬರಿಂದ ಮೂಲತಃ ಇಂಗ್ಲೀಷಿನಲ್ಲಿ ಪ್ರಕಟವಾಗಿದೆ. ಈ ಗ್ರಂಥದಲ್ಲಿ ಮೂರು ಅಧ್ಯಾಯಗಳಿದ್ದು ಭಾರತದಲ್ಲಿ ಪ್ರಾಗೈತಿಹಾಸಿಕ ಕಾಲದ ಮನುಷ್ಯ ಸಂಸ್ಕೃತಿಗಳ ಇತಿಹಾಸವನ್ನು ನಿರೂಪಿಸಲಾಗಿದೆ. ಮೊದಲನೆಯ ಅಧ್ಯಾಯವು ಭಾರತೀಯ ಭೂಸ್ವರೂಪ ಹಾಗೂ ನೈಸಗರ್ಿಕ ವಾತಾವರಣ, ಸಸ್ಯ ಮತ್ತು ಪ್ರಾಣಿಸಂತತಿಗಳ ನಿಮರ್ಾಣದ ಕುರಿತು ಚಚರ್ಿಸುತ್ತದೆ. ಎರಡನೆಯ ಅಧ್ಯಾಯದಲ್ಲಿ ಮಾನವ ಸಂತತಿಯ ಉಗಮ, ಭಾರತದಲ್ಲಿ ಆದಿ ಮಾನವ ಹಾಗೂ ಆಧುನಿಕ ಮಾನವ (ಹೋಮೋ ಸೇಪಿಯನ್ಸ್ ಸೇಪಿಯನ್ಸ್) ಸಂತತಿಗಳ ಕುರಿತ ಆಧಾರಗಳನ್ನು ಅವಲೋಕಿಸಲಾಗಿದೆ. ಈ ಸಂಬಂಧಿಸಿ ಹಳೆಯ ಶಿಲಾಯುಗ ಹಾಗೂ ಮಧ್ಯಶಿಲಾಯುಗಗಳ ಪ್ರಾಕ್ತನ ಆಧಾರಗಳು, ಅಂದಿನ ಜೀವನಕ್ರಮಗಳನ್ನು ಕುರಿತೂ ಚಚರ್ಿಸಲಾಗಿದೆ. ಮೂರನೆಯ ಅಧ್ಯಾಯದಲ್ಲಿ ನವಶಿಲಾಯುಗದ ಆದಿ ಕೃಷಿ ಸಂಸ್ಕೃತಿಗಳ ಅವಶೇಷಗಳು ಹಾಗೂ ಅಂದಿನ ಜನಜೀವನದ ಕುರಿತು ಮಾಹಿತಿ ನೀಡಲಾಗಿದೆ. ಇದರ ಜೊತೆಗೇ ಕಂಚಿನ ಯುಗದ ಪ್ರಾರಂಭಿಕ ಲಕ್ಷಣಗಳು, ಭಾರತದಲ್ಲಿ ಭತ್ತ, ಗೋಧಿ ಮುಂತಾದ ಕೃಷಿ ಧಾನ್ಯಗಳ ಸಾಕಾಣಿಕೆಯ ಇತಿಹಾಸದ ಕುರಿತೂ ಪರಿಚಯಿಸಲಾಗಿದೆ. ಈ ವಿಷಯಗಳ ಜೊತೆಗೇ ಆಯಾಯ ಅಧ್ಯಾಯಗಳಿಗೆ ಪೂರಕವಾದ ಟಿಪ್ಪಣಿಗಳನ್ನೂ ನೀಡಲಾಗಿದೆ. ಅವುಗಳಲ್ಲಿ ಭೂಗರ್ಭಶಾಸ್ತ್ರೀಯ ಯುಗಗಳು, ಪ್ರಾಗೈತಿಹಾಸದಲ್ಲಿ ಕಾಲಗಣನಾ ಕ್ರಮಗಳು ಹಾಗೂ ಕಳೆದುಹೋದ ನದಿ ಋಗ್ವೇದದ ಸರಸ್ವತಿಯ ಕುರಿತು ಟಿಪ್ಪಣಿಗಳಿವೆ.

ಲೇಖಕರು ಮುನ್ನುಡಿಯಲ್ಲಿ ತಿಳಿಸಿರುವಂತೇ ಈ ವಿಷಯವನ್ನು ಸರಳವಾಗಿ ಜನರಿಗೆ ತಿಳಿಸುವ ಉದ್ದೇಶವಿದೆ ಆದರೆ ಜನರಂಜನೆ ಉದ್ದೇಶವಲ್ಲ. ಸಾಧಾರಣವಾಗಿ ಪ್ರಾಗೈತಿಹಾಸವು ಪ್ರಾಕ್ತನಶಾಸ್ತ್ರಜ್ಞರ ವಿಷಯವಾಗಿದೆ. ಪ್ರಾಕ್ತನಶಾಸ್ತ್ರವು ಪ್ರತ್ಯಕ್ಷಾಧಾರಗಳ ವಿಶ್ಲೇಷಣೆಯ ತಾಂತ್ರಿಕತೆಯಿಂದ ಕ್ಲಿಷ್ಟವಾದುದರಿಂದ ಅದನ್ನು ಇತಿಹಾಸವನ್ನಾಗಿ ಪರಿವತರ್ಿಸಿ ಒಂದು ಕಥನವನ್ನಾಗಿ ಮಾರ್ಪಡಿಸಿದಾಗ ಮಾತ್ರವೇ ಅದು ಸಾಮಾನ್ಯ ವಿದ್ಯಾವಂತರ ಕುತೂಹಲವನ್ನು ಕೆರಳಿಸಬಲ್ಲದು. ನಮ್ಮ ಭಾರತೀಯ ಪ್ರಾಗೈತಿಹಾಸದ ಅಂಥದೊಂದು ಸರಳ, ಸಂಕ್ಷಿಪ್ತ ಇತಿಹಾಸದ ಕೊರತೆಯನ್ನು ನಾವು ಗುರುತಿಸುವ ಹಂತದಲ್ಲೇ ಈ ಪುಸ್ತಕವು ಪ್ರಕಟವಾದುದು ಸ್ವಾಗತಾರ್ಹವಾದುದಾಗಿದೆ ಹಾಗೂ ಇದು ಕನ್ನಡ ಭಾಷಾಂತರವಾಗಿ ಕೂಡ ಬರುತ್ತಿರುವುದು ಸ್ವಾಗತಾರ್ಹ. ಈ ಪುಸ್ತಕವನ್ನು ರಚಿಸುವಲ್ಲಿ ಲೇಖಕರು ಹೆಚ್ಚಿನದಾಗಿ ಅಲ್ಚಿನ್ ಮತ್ತು ಡಿ. ಕೆ.ಚಕ್ರವತರ್ಿಯವರ ಬರವಣಿಗೆಗಳನ್ನು ಹಾಗೂ ಇತರ ಪ್ರಮುಖ ಪ್ರಾಕ್ತನಶಾಸ್ತ್ರಜ್ಞರ ಕೃತಿಗಳನ್ನು ಬಳಸಿಕೊಂಡಿದ್ದಾರೆ. ಜೊತೆಗೇ ಅಂತರ್ರಾಷ್ಟ್ರೀಯ ಖ್ಯಾತಿಯ ಗೊಡರ್ೊನ್ ಚೈಲ್ಡ ಅವರ ನವಶಿಲಾಯುಗ ಕ್ರಾಂತಿಯ ಸಿದ್ಧಾಂತವೂ ಇಲ್ಲಿ ಪ್ರಮುಖವಾಗಿ ಬಂದಿದೆ. ಪ್ರಾಕ್ತನಶಾಸ್ತ್ರಜ್ಞರ ನಿಟ್ಟಿನಿಂದ ನೋಡಿದಾಗ ಈ ಪುಸ್ತಕದಲ್ಲಿ ಕೆಲವೊಂದು ಕೊರತೆಗಳು ಕಾಣಿಸುವುದಂತೂ ನಿಜ. ಉದಾಹರಣೆಗೆ ಈಗ ನಮಗೆ ಉಪಲಬ್ಧವಿರುವ ಮಾಹಿತಿಗೆ ಹೋಲಿಸಿದರೆ ಈ ಪುಸ್ತಕದಲ್ಲಿ ಹಳೆಯ ಶಿಲಾಯುಗದ ವ್ಯಾಪಕತೆ ಹಾಗೂ ಅವಶೇಷಗಳ ಕುರಿತು ತೀರಾ ಅತ್ಯಲ್ಪ ಮಾಹಿತಿಯನ್ನು ನೀಡಲಾಗಿದೆ. ನವಶಿಲಾಯುಗವು ಕ್ರಾಂತಿಸದೃಶವಾದುದೆಂಬ ವಿಚಾರವನ್ನು ಲೇಖಕರು ಎತ್ತಿಹಿಡಿಯುತ್ತಾರೆ. ಅನೇಕ ಪ್ರಾಕ್ತನಶಾಸ್ತ್ರಜ್ಞರಿಗೆ ಇದು ಒಪ್ಪಿಕೊಳ್ಳಲು ಕಷ್ಟವಾಗುವ ವಿಚಾರವಾಗಿದೆ. ನವಶಿಲಾಯುಗದ ಪ್ರಾಣಿಸಾಕಣೆಯಾಗಲೀ, ಸಸ್ಯ ಸಾಕಣೆಯಾಗಲೀ ಒಂದು ಸಿದ್ಧ ಜೀವನ ಕ್ರಮವಾದ ನಂತರವೇ ನವಶಿಲಾಯುಗದ ಜೀವನಶೈಲಿ ರೂಪಿತವಾಯಿತು. ಅಂದರೆ, ನಮಗೆ ಸಿಗುವ ನವಶಿಲಾಯುಗ ವಸತಿಗಳು ಈ ವಿಕಾಸದ ಸಂಪೂಣರ್ಾವಸ್ಥೆಯನ್ನು ತೋರಿಸುತ್ತವೆ. ಹಾಗಾಗಿ ಅವು ಹಿಂದಿನ ಸಂಸ್ಕೃತಿಗಳಿಗಿಂತ ಆಮೂಲಾಗ್ರವಾಗಿ ಬೇರೆಯಾಗಿ ಕಾಣಿಸುತ್ತವೆ. ಭಾರತೀಯ ಅವಶೇಷಗಳು ತೋರಿಸುವಂತೇ ಈ ಜೀವನ ಕ್ರಮಗಳು ಸಾವಿರಾರು ವರ್ಷಗಳಿಂದ ಕ್ರಮವಾಗಿ ಒಂದೊಂದಾಗಿ ಕಾಣಿಸಿಕೊಂಡಿವೆ. ಗೊಡರ್ೊನ್ ಚೈಲ್ಡ ಅವರು ಮಧ್ಯಪ್ರಾಚ್ಯದಲ್ಲಿ ಈ ಕ್ರಾಂತಿಯಾಗಿ ನಂತರ ಉಳಿದೆಡೆಗೆ ಅದು ಪ್ರಸಾರವಾಯಿತು ಎಂಬುದಾಗಿ ಭಾವಿಸಿದ್ದರು. ಆದರೆ ಈಗ ಈ ಪ್ರಸಾರ ಸಿದ್ಧಾಂತವು ವಿಮಶರ್ೆಗೊಳಗಾಗಿದೆ. ಹಾಗಾಗಿ ಚೈಲ್ಡರ ಸಿದ್ಧಾಂತವು ನಮಗೆ ಯಾವ ರೀತಿಯಲ್ಲೇ ನೋಡಿದರೂ ಪ್ರಸ್ತುತವಲ್ಲ.

ಸರಸ್ವತಿ ನದಿಯ ಕುರಿತು ಟಿಪ್ಪಣಿಯು ಈ ಪುಸ್ತಕಕ್ಕೆ ಅಪ್ರಸ್ತುತವಾದುದು ಎಂದೆನಿಸುತ್ತದೆ. ಏಕೆಂದರೆ ಭಾರತೀಯ ಪ್ರಾಗೈತಿಹಾಸದ ಒಂದು ಸಂಕ್ಷಿಪ್ತ ನಿರೂಪಣೆಯಲ್ಲಿ ಸರಸ್ವತಿಗೆ ಅನಗತ್ಯವಾದ ಮಹತ್ವವನ್ನು ದಯಪಾಲಿಸಲಾಗಿದೆ. ಹಾಗೂ ಪ್ರಾಕ್ತನಶಾಸ್ತ್ರದಲ್ಲಿ ತೀಮರ್ಾನವಾಗದೇ ಇರುವ ಅನೇಕ ವಿಷಯಗಳಿವೆ, ಅವುಗಳನ್ನು ಯಾವುದೇ ಕಡೆಗೆ ವಾಲಿಸಿ ತೀಮರ್ಾನಿಸುವುದೂ ತಪ್ಪು.

ಈ ಗ್ರಂಥಮಾಲಿಕೆಯ ಉದ್ದೇಶ ಕೇವಲ ಇತಿಹಾಸವನ್ನು ಪರಿಚಯಿಸುವುದು ಮಾತ್ರವಲ್ಲ, ಕೋಮುವಾದಿ ನಿರೂಪಣೆಗಳಿಗೆ ಪ್ರತಿಯಾಗಿ ಒಂದು ಸೆಕ್ಯುಲರ್ ಇತಿಹಾಸವನ್ನು ರಚಿಸುವುದಾಗಿದೆ. ಇತ್ತೀಚೆಗೆ ಇತಿಹಾಸ ಶಿಕ್ಷಣ ಪಠ್ಯಗಳ ಕುರಿತು ವಿವಾದವು ಎಲ್ಲರಿಗೂ ತಿಳಿದೇ ಇದೆ. ಅವುಗಳ ಸಂಬಂಧಿಸಿ ಎರಡು ಬಣಗಳಾದವು: ಸೆಕ್ಯುಲರ ವಾದೀ ಹಾಗೂ ಹಿಂದುತ್ವವಾದೀ ಬಣಗಳು. ವಸಾಹತು ಶಾಹಿ ಯುಗದಲ್ಲಿ ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರೆಂಬ ನಿರೂಪಣೆಗಳೂ, ಆರ್ಯ ದ್ರಾವಿಡ ಜನಾಂಗಗಳ ಕಲ್ಪನೆಗಳೂ ಬೆಳೆದವು,

ಆರ್ಯರು ಭಾರತೀಯ ಮೂಲದವರು, ಸಿಂಧೂ ಸಂಸ್ಕೃತಿ ಆರ್ಯರದು ಎಂಬುದಾಗಿ ಹಿಂದುತ್ವವಾದೀ ಬಣವು ನಿರೂಪಿಸುತ್ತಿದೆ. ಈ ಎರಡೂ ವಾದಗಳೂ ನಮ್ಮ ಪ್ರಾಗೈತಿಹಾಸದ ಬೆಳಕಿನಲ್ಲಿ ಹಾಸ್ಯಾಸ್ಪದವಾಗಿ ತೋರುತ್ತವೆ. ಒಂದು ಭೂಪ್ರದೇಶದಲ್ಲಿ ಯಾವ ಹೆಸರುಳ್ಳ ಸಮುದಾಯಗಳು ಯಾವಾಗ ಬಂದವು ಎಂಬುದನ್ನು ಕೇವಲ ಪ್ರಾಕ್ತನಶಾಸ್ತ್ರೀಯ ಆಧಾರಗಳಿಂದ ಸಾಧಿಸುವುದು ಚಚರ್ಾಸ್ಪದ ವಿಷಯವಾಗಿ ಮಾತ್ರವೇ ಉಳಿದುಕೊಳ್ಳಬಲ್ಲದು. ಆದರೆ ಅವಶೇಷಗಳ ಹಂಚಿಕೆ ಹಾಗೂ ಕಾಲಾಂತರದಲ್ಲಿ ಅವುಗಳ ಚಲನೆಗಳನ್ನಾಧರಿಸಿದ ಪ್ರಾಕ್ತನಶಾಸ್ತ್ರವು ನಮಗೆ ತಿಳಿಸುವಂತೆ ಭಾರತವು ಶಿಲಾಯುಗ ಕಾಲದಿಂದಲೂ ಅನಾಮಧೇಯ ಸಮುದಾಯಗಳ ಖಂಡಾಂತರ ವಲಸೆ ಹಾಗೂ ಪ್ರಭಾವಕ್ಕೆ ಒಳಗಾಗಿ ರೂಪುಗೊಂಡಿದೆ. ಜನ್ಮಭೂಮಿಯಂಥ ವಿಷಯಗಳು ನಮ್ಮ ರಾಷ್ಟ್ರೀಯತೆಯ ಕಲ್ಪಿತ ಸಮುದಾಯಗಳ ಸಂದರ್ಭದಲ್ಲಿ ಅರ್ಥಹೊರಡಿಸಬಹುದೇ ವಿನಃ ಪ್ರಾಕ್ತನಾಧಾರಗಳಲ್ಲಲ್ಲ. ಹಾಗಾಗಿ ಪ್ರಾಕ್ತನಾಧಾರಗಳ ಮೇಲೆ ಆಣೆ ಮಾಡಿ ಇಂಥ ವಾದಗಳನ್ನು ಇಡುವುದು ಮೂರ್ಖತನವಾಗುತ್ತದೆ. ಬದಲಾಗಿ ಪ್ರಾಕ್ತನಾಧಾರವು ಏನನ್ನು ಖಚಿತವಾಗಿ ತಿಳಿಸುತ್ತದೆ ಎಂಬದನ್ನು ಗಮನಿಸುವುದು ಹೆಚ್ಚು ಫಲಪ್ರದವಾಗಬಹುದು. ಅದು ತಿಳಿಸುವ ಪ್ರಕಾರ ಭಾರತದಲ್ಲಿ ಸಪ್ತಸಿಂಧೂ ಪ್ರದೇಶದಲ್ಲಿ ವೈದಿಕ ಸಂಸ್ಕೃತಿಯ ಜನರು ವಾಸವಾಗಿದ್ದ ಕಾಲದಲ್ಲಿಯೇ ಭಾರತದ ತುಂಬೆಲ್ಲ ನವಶಿಲಾಯುಗ ಹಾಗೂ ತಾಮ್ರಶಿಲಾಯುಗ ಸಂಸ್ಕೃತಿಗಳ ಗ್ರಾಮಗಳು ಇದ್ದವು. ಈ ಯಾವ ಸಂಸ್ಕೃತಿಗಳ ಇತಿಹಾಸವೂ ನಮಗೆ ಲಿಖಿತ ಆಧಾರಗಳಿಂದ ಲಭ್ಯವಾಗುವುದಿಲ್ಲ. ಅರ್ಧ ಶತಕದಿಂದೀಚೆಗಷ್ಟೇ ಪ್ರಾಕ್ತನ ಆಧಾರಗಳು ಸಿಗತೊಡಗಿವೆ ಹಾಗೂ ಇಂದೂ ಕೂಡಾ ಈ ಹೊಸ ಆಧಾರಗಳ ಮಹತ್ವವನ್ನು ನಾವು ಅರಿತಿಲ್ಲ. ಹಾಗಾಗಿ ನಮ್ಮ ಇತಿಹಾಸದ ಪ್ರಾರಂಭವು ಸಿಂಧೂ ಸಂಸ್ಕೃತಿ-ವೈದಿಕ ಕೇಂದ್ರಿತವಾಗಿಯೇ ಬೆಳೆಯಿತು. ಹಾಗಾಗೇ ಸಿಂಧು ಸಂಸ್ಕೃತಿ ವೈದಿಕರದೆ, ವೈದಿಕರು ಹೊರಗಿನಿಂದ ಬಂದವರೆ? ಮುಂತಾದ ಆರ್ಯ-ಅನಾರ್ಯ ಕೇಂದ್ರಿತ ಚಚರ್ೆಗಳು ಬೆಳೆದುಕೊಂಡವು. ಪ್ರಾಕ್ತನಾಧಾರಗಳು ತೋರಿಸುವಂತೆ ಭಾರತೀಯ ಇತಿಹಾಸದ ಪ್ರಾರಂಭದ ಕಾಲದ ಕುರಿತು ಇಂಥ ಜನಾಂಗೀಯ ಚಚರ್ೆಗಳನ್ನು ನಡೆಸುವುದು ತೀರಾ ಕ್ಷುದ್ರವಾದ ವಿಚಾರವಾಗಿದೆ. ಪ್ರಾರಂಭಿಕ ಭಾರತೀಯ ಸಂಸ್ಕೃತಿಗಳಲ್ಲಿ ಸಿಂಧು ಸಂಸ್ಕೃತಿ ಹಾಗೂ ವೈದಿಕ ಸಂಸ್ಕೃತಿಗಳು ಕೇವಲ ಎರಡು ಉದಾಹರಣೆಗಳು ಅಷ್ಟೇ. ಇಂಥ ಹಲವಾರು ಸಂಸ್ಕೃತಿಗಳು ಭಾರತದಲ್ಲಿದ್ದವು. ಈ ಎರಡರ ಕುರಿತ ಚಚರ್ೆಯು ನಮ್ಮ ರಾಜಕೀಯಕ್ಕೆ ನಿಣರ್ಾಯಕವಾಗಿರಬಹುದು. ಆದರೆ ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಅವೇ ನಿಣರ್ಾಯಕವಾಗಿವೆ ಎಂದು ವಾದಿಸುವುದು ಉಚಿತವಲ್ಲ. ಹಾಗೂ ಭಾರತೀಯ ಇತಿಹಾಸಕಾರರು ಒಂದಿಲ್ಲೊಂದು ಸಿದ್ಧಾಂತಗಳ ಪರವಾಗಿ ಇತಿಹಾಸಗಳನ್ನು ಕಟ್ಟಿಕೊಳ್ಳುತ್ತ ಹೋರಾಡುತ್ತಿದ್ದಾಗ ಈ ಯಾವುದರ ಕುರಿತೂ ತಲೆಯನ್ನೇ ಕೆಡಿಸಿಕೊಳ್ಳದೇ ಇಂಥ ಮಹತ್ವದ ಆಧಾರಗಳನ್ನು ಬೆಳಕಿಗೆ ತಂದು ಭಾರತೀಯ ಬಹುಸಂಸ್ಕೃತಿಗಳ ಇತಿಹಾಸಕ್ಕೆ ನಿಜವಾದ ತಳಪಾಯವನ್ನು ಕಟ್ಟಿದವರೇ ನಮ್ಮ ಪ್ರಾಕ್ತನಶಾಸ್ತ್ರಜ್ಞರು ಎಂಬುದನ್ನೂ ಮರೆಯುವಂತಿಲ್ಲ. ನಮ್ಮ ಭಾರತೀಯ ಇತಿಹಾಸಕ್ಕೆ ಪ್ರಾಗೈತಿಹಾಸಿಕ ಬುನಾದಿಯು ಗಟ್ಟಿಯಾದಷ್ಟೂ ಇಂಥ ಐತಿಹಾಸಿಕ ಜಗಳಗಳು ಅರ್ಥಹೀನವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಗ್ರಂಥದ ಮಹತ್ವವನ್ನು ಓದುಗರು ಅರಿಯಬೇಕು.

ರಾಜಾರಾಮ ಹೆಗಡೆ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ

ಕುವೆಂಪು ವಿಶ್ವವಿದ್ಯಾನಿಲಯ

Advertisements