ನಿಮ್ಮ ಕೈಯಲ್ಲಿರುವ ಈ ಪ್ರಬಂಧವು ಭಾರತದ ಪ್ರಾರಂಭಿಕ ಮಾನವನ ಜೀವನವನ್ನು ವಿವರಿಸುತ್ತದೆ. ಇಲ್ಲಿ ವಿವರಿಸುವ ಕಾಲವು ನೇರ ಅಥವಾ ಪರೋಕ್ಷವಾಗಿ ಲಿಖಿತ ದಾಖಲೆಗಳು ಬೆಳಕು ಚೆಲ್ಲದ ಕಾಲಕ್ಕಿಂತ ಬಹಳ ಹಿಂದಿನದು. ಇದು `ಭಾರತದ ಒಂದು ಜನ ಚರಿತ್ರೆಎನ್ನುವ ವಿಶಾಲ ಯೋಜನೆಯ ಭಾಗವಾದರೂ, ಇದು ಸ್ವತಂತ್ರವಾಗಿಯೂ ಪ್ರಸ್ತುತವಾಗಬೇಕೆನ್ನುವ ಕೃತಿ. ಇಲ್ಲಿನ ಅಧ್ಯಾಯ 1 ಭಾರತದ ಭೌಗೋಳಿಕ ರೂಪಗೊಳ್ಳುವಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಭಾರತೀಯ ಉಪಖಂಡದ ವಾತಾವರಣ ಹಾಗೂ ನೈಸಗರ್ಿಕ ಪರಿಸರ (ಸಸ್ಯವರ್ಗ ಮತ್ತು ಪ್ರಾಣಿವರ್ಗ) ಗಳಲ್ಲಿ ಹಲವು ಬದಲಾವಣೆಗಳಾದವು. ಪೂವರ್ೆತಿಹಾಸ ಹಾಗೂ ಇತಿಹಾಸವನ್ನು ಅಥರ್ೆಸಲು ಸಂಬಂಧ ಪಟ್ಟ ಇಂತಹ ಬದಲಾವಣೆಗಳನ್ನು ಈ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಅಧ್ಯಾಯ 2 ಜಾಗತಿಕ ಸಂದರ್ಭದಲ್ಲಿ ಮಾನವ ವಿಕಾಸ ಹಾಗೂ ಭಾರತದಲ್ಲಿನ ಮಾನವನ ಕಥೆಯನ್ನು ವಿವರಿಸುತ್ತದೆ. ಅವನ ಉಪಕರಣಗಳ ಸಮೂಹಗಳನ್ನು, ಅವನ್ನು ತಯಾರಿಸುವವರ ಬಗೆಗೆ ಸಂಬಂಧಿಸಿ ವಿವರಿಸುತ್ತದೆ. ಅಧ್ಯಾಯ 3 ಮುಖ್ಯವಾಗಿ ವ್ಯವಸಾಯದ ಉಗಮ ಹಾಗೂ ಶೋಷಣಾತ್ಮಕ ಸಂಬಂಧಗಳ ಪ್ರಾರಂಭವನ್ನು ವಿವರಿಸುತ್ತದೆ.

ಈ ಮೂರೂ ಅಧ್ಯಾಯಗಳಲ್ಲಿನ ಮಾಹಿತಿಯನ್ನು ಇತ್ತೀಚಿನ ಹಾಗೂ ನಂಬಲರ್ಹ ಕೃತಿಗಳನ್ನು, ನಿಯತಕಾಲಿಕಗಳನ್ನು ಆಧರಿಸಿ ಸಂಗ್ರಹಿಸಲಾಗಿದೆ.

ಈ ಕೃತಿಯಲ್ಲಿ ಹಾಗೂ ಭಾರತದ ಜನ ಚರಿತ್ರೆಯ ಮುಂದೆ ಬರುವ ಭಾಗಗಳಲ್ಲಿ, ಶೈಲಿಯನ್ನು ಸರಳವಾಗಿಡುವತ್ತ ಗಮನ ಹರಿಸಲಾಗಿದೆ. ಆದರೆ ಅದನ್ನು ಜನಪ್ರಿಯ, ವಾಗಾಡಂಬರ ಅಥವಾ ನಿಖರತೆ ಕೊರತೆಯ ಮಟ್ಟಕ್ಕೆ ಇಳಿಸಿಲ್ಲ. ಇಲ್ಲಿ ತಾಂತ್ರಿಕ ಪದಗಳನ್ನು ಬಳಕೆಯನ್ನು ಕನಿಷ್ಟವಾಗಿಸಲಾಗಿದೆ ಹಾಗೂ ಅಂತಹ ಪದಗಳ ಮೊದಲ ಬಳಕೆಯಲ್ಲಿ ವಿವರಣೆಯನ್ನೂ ಸೇರಿಸಲಾಗಿದೆ. ಹ್ರಸ್ವ ರೂಪಗಳನ್ನೂ ಕಡಿಮೆ ಮಾಡಲಾಗಿದೆ. ಆಯಾ ಅಧ್ಯಾಯದ ಕೊನೆಯಲ್ಲಿ ಗ್ರಂಥಸೂಚಿ ಟಿಪ್ಪಣಿಯನ್ನು ಕೊಡಲಾಗಿದೆ. ಪರಾಮಶರ್ಿಸಿದ ಗ್ರಂಥಗಳನ್ನು ಹಾಗೂ ಲೇಖನಗಳನ್ನು ಹೆಸರಿಸಲಾಗಿದ್ದು ಅವುಗಳ ಬಗೆಗೆ ಸಂಕ್ಷಿಪ್ತ ಟಿಪ್ಪಣಿಯನ್ನೂ ಒದಗಿಸಲಾಗಿದೆ. ಉಲ್ಲೇಖಗಳಿದ್ದಲ್ಲಿ ಮೂಲ ಕೃತಿಗಳನ್ನೂ ಇಲ್ಲಿ ಕೊಡಲಾಗಿದೆ. ಆದಾಗ್ಯೂ ಎಲ್ಲಾ ಪರಾಮಶರ್ಿತ ಗ್ರಂಥಗಳನ್ನೂ ಹೆಸರಿಸಲಾಗಿಲ್ಲವೇಕೆಂದರೆ ಅಲ್ಲಿಯೂ ಆಯ್ಕೆಯ ಅನಿವಾರ್ಯತೆ ಉಂಟಾಗುತ್ತದೆ.

ಕಾಲಗಣನೆಯ ಕ್ರಮ ಅಥವಾ ನಿದರ್ಿಷ್ಟ ಸಿದ್ಧಾಂತದಂತಹ ಕೆಲವು ಗಮನ ಹರಿಸಲೇಬೇಕಾದ ತಾಂತ್ರಿಕ ಅಥವ ವಿವಾದಾತ್ಮಕ ವಿಷಯಗಳ ಬಗೆಗೆ ಅಧ್ಯಾಯದ ಕೊನೆಯಲ್ಲಿ ವಿಶೇಷ ಟಿಪ್ಪಣಿಯನ್ನು ಅನುಬಂಧವಾಗಿ ಸೇರಿಸಲಾಗಿದೆ. ಅಧ್ಯಾಯ 1ರಲ್ಲಿ ಭೌಗೋಳಿಕ ಕಾಲಮಾನದ ಬಗೆಗೆ, ಅಧ್ಯಾಯ 2ರಲ್ಲಿ ಪೂವರ್ೆತಿಹಾಸದಲ್ಲಿನ ಕಾಲಮಾನಗಣನೆ ಪದ್ಧತಿಗಳ ಬಗೆಗೆ ಮತ್ತು ಅಧ್ಯಾಯ 3ರಲ್ಲಿ ಮರುಭೂಮಿ ನದಿ (ಸರಸ್ವತಿ) ವಿವಾದಗಳ ಬಗೆಗೆ ಟಿಪ್ಪಣಿಗಳನ್ನು ಕೊಡಲಾಗಿದೆ.

ಕಾಲಗಣನೆಯ ಹಾಗೂ ಇತರ ಕೋಷ್ಟಕಗಳು, ನಕ್ಷೆಗಳು ಮತ್ತು ಸಂಖ್ಯೆಗಳು ಉಪಯುಕ್ತವಾಗುತ್ತವೆ ಎಂದು ಭಾವಿಸಲಾಗಿದೆ. ಅವುಗಳು ತಮ್ಮದೇ ಆಸಕ್ತಿಯನ್ನು ಕೆರಳಿಸಲು ಸಹ ಸಾಧ್ಯ. ಎಲ್ಲೆಲ್ಲಿ ಅಂತರರಾಷ್ಟ್ರೀಯ ಗಡಿಗಳನ್ನು ತೋರಿಸಲಾಗಿದೆಯೋ ಅಲ್ಲೆಲ್ಲಾ ಅದು ಸವರ್ೆ ಆಫ್ ಇಂಡಿಯಾ ನಕಾಶೆಗೆ ಅನುಗುಣವಾಗಿದೆ.

ಇಲ್ಲಿ ಬಳಸುವ ಮಾನವ ಪದವಾಗಲಿ, ಸರ್ವನಾಮ ಅವನು ಆಗಲಿ ವಿಶೇಷವಾಗಿ ಗಂಡೆಂದೇನೂ ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸ ಬಯಸುತ್ತೇನೆ. ಇಲ್ಲಿ ಅದು, ಹೆಣ್ಣು ಗಂಡುಗಳೆರಡನ್ನೂ ಒಳಗೊಂಡು, ದ್ವಿಪಾದಿ (ಹೋಮಿನಿಡ್) ಜೀವಸಂಕುಲವನ್ನು ಸೂಚಿಸುತ್ತದೆ . ಇದು ಭಾಷೆಯ ಬಳಕೆಯ ಸ್ವರೂಪ ಅಷ್ಟೆ. ಈ ಬಳಕೆಯಿಂದ ಯಾವುದೇ ಪುರುಷ ಲಕ್ಷಣದ ಅಂಶಗಳಿಗೆ ಕೊಡುವ ಒತ್ತೆಂದು ಭಾವಿಸಬಾರದು.

ಇಲ್ಲಿ ಭಾರತ ಎಂದರೆ ಅರ್ಥ, ಆ ಸಂದರ್ಭ ಭಿನ್ನವಾಗಿ ಸೂಚಿಸದಿದ್ದಲ್ಲಿ, 1947ರ ಪೂರ್ವದ ಭಾರತ. ಅಂದರೆ ಅದು ಇಂದಿನ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಒಳಗೊಂಡಿರುತ್ತದೆ. ಹಾಗೆಯೇ ದಕ್ಷಿಣ ಏಷಿಯಾಎಂದರೆ ಮೇಲಿನ ಮೂರಲ್ಲದೆ ಶ್ರೀಲಂಕಾ, ನೇಪಾಳ ಹಾಗೂ ಭೂತಾನ್ಗಳನ್ನೂ ಒಳಗೊಳುತ್ತದೆ. ಭಾರತ ಒಕ್ಕೂಟ ಬಳಕೆ 1947ರ ನಂತರದ ಭಾರತದ ಗಡಿಗಳನ್ನು ಸೂಚಿಸುತ್ತದೆ. ಅಫಘಾನಿಸ್ತಾನ ವಿವರಣೆಯಲ್ಲಿ ಆಗಾಗ ಬರುತ್ತದೆ ಹಾಗೂ ಮುಂದಿನ ಭಾಗಗಳಲ್ಲಿ ನೇಪಾಳ ಸಹ.

ಅಲಿಗರ್ ಹಿಸ್ಟೋರಿಯನ್ಸ್ ಸೋಸಾಯಿಟಿಯ ಪರವಾಗಿ, ಈ ಪ್ರಯತ್ನವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಧ್ಯ ಪ್ರದೇಶ ಟೆಕ್ಸ್ಟ್ಬುಕ್ ಕಾಪರ್ೊರೇಷನ್, ಭೂಪಾಲ್ ಮಾಡಿದ ಉದಾರ ಅನುದಾನದ ಬಗೆಗೆ ನೆನೆಯಲು ನನಗೆ ಸಂತೋಷವಾಗುತ್ತದೆ.

ಹಲವು ರೀತಿಯ ತಪ್ಪುಗಳನ್ನು ನುಸುಳದಂತೆ ಮಾಡಲು ಈ ಕೃತಿಯ ಪಠ್ಯವನ್ನು ಮೊದಲೇ ಮೂರು ಹಂತಗಳಲ್ಲಿ ಪ್ರಚುರ ಪಡಿಸಲಾಯಿತು. ನನ್ನ ಸ್ನೇಹಿತರು ಮಾಡಿದ ಹಲವು ಟಿಪ್ಪಣಿಗಳ ಪರಿಣಾಮವಾಗಿ ಪಠ್ಯ ಹಾಗೂ ಶೈಲಿಗಳೆರಡರಲ್ಲಿಯೂ ಬದಲಾವಣೆ ತರಲಾಗಿದೆ, ಅವರಿಗೆ ನನ್ನ ಕೃತಜ್ಞತೆಗಳು. ಪೂರ್ಣ ಪಠ್ಯವನ್ನು ಪರಿಶೀಲಿಸುವ ಶ್ರಮ ತೋರಿದ ಪ್ರೊ. ಸೂರಜ್ಭಾನ್ ಅವರಿಗೂ ನನ್ನ ವಿಶೇಷ ಧನ್ಯವಾದಗಳು.

ಸುದೀಪ್ ಬ್ಯಾನಜರ್ಿ ಅವರು ಈ ಯೋಜನೆ ಆಸ್ತಿತ್ವಕ್ಕೆ ಬರಲು ತಮ್ಮ ಕಾಣಿಕೆ ನೀಡಿದ್ದಾರೆ. ನಮ್ಮ ಸೊಸಾಯಿಟಿಯ ಸೆಕ್ರೆಟರಿ ಆದ ಪ್ರೊ. ಶಿರೀನ್ ಮೂಸ್ವಿ ಅವರು ಸಂಘಟನಾತ್ಮಕ ಜವಾಬ್ದಾಯನ್ನು ವಹಿಸಿದರೆ ಮುನುರುದ್ಧೀನ್ ಖಾನ್ರು ಪಠ್ಯದಲ್ಲಿ ತರುತ್ತಿದ್ದ ಸತತ ಬದಲಾವಣೆಗಳನ್ನು ಸಹಿಸಿ ಅದಕ್ಕೊಂದು ರೂಪ ನೀಡಿದ್ದಾರೆ.

ಫೈಜ್ ಹಬೀಬ್ ಮತ್ತು ಅವರ ಹಿರಿಯ ಸಹೋದ್ಯೋಗಿ ಜಹೂರ್ ಅಲಿ ಖಾನ್ ಅವರು ಈ ಕೃತಿಯಲ್ಲಿ ಬಳಸಿದ ಎಲ್ಲಾ ಎಂಟು ನಕ್ಷೆಗಳನ್ನೂ ರಚಿಸಿದ್ದಾರೆ. ಅವುಗಳನ್ನು ನಿಖರವಾಗಿಸಲು ಸಾಕಷ್ಟ ಶ್ರಮ ವಹಿಸಲಾಗಿದೆ ನಕ್ಷೆ 1.4, 2.1, 2.2, ಮತ್ತು 3.1ರ ರಚನೆ ಸಾಕಷ್ಟು ಸಂಶೋಧನೆಯನ್ನೂ ಒಳಗೊಂಡಿದೆ ಎಂಬುದನ್ನು ಗಮನಿಸಬೇಕು.

ನಾನು ತೂಲಿಕಾದ ರಾಜೇಂದ್ರ ಪ್ರಸಾದ್ ಮತ್ತು ಇಂದಿರಾ ಚಂದ್ರಶೇಖರ್ ಅವರ ಸಹಕಾರಕ್ಕೆ ವಿಶೇಷವಾದ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ರಾಜೇಂದ್ರ ಪ್ರಸಾದ್ ಅವರ ಎಲ್ಲ ರೀತಿಯ ವಿಶೇಷ ಸಹಾಯವನ್ನು ಇಲ್ಲಿ ನೆನೆಯ ಬೇಕಿದೆ.

ಇಫರ್ಾನ್ ಹಬೀಬ್

ಪ್ರಸ್ತುತ ಆವೃತ್ತಿಗೆ ಟಿಪ್ಪಣಿ

ಈ ಆವೃತ್ತಿಯ ಅವಕಾಶವನ್ನು ಬಳಸಿ ಕೆಲವು ಸರಿಪಡಿಕೆಗಳನ್ನು ಮಾಡಲಾಗಿದೆ ಮತ್ತು ಕೆಲವು ಹೊಸ ಮಾಹಿತಿಗಳನ್ನು ಸೇರಿಸಲಾಗಿದೆ.

ಮಾಚರ್್ 2005 ಇಫರ್ಾನ್ ಹಬೀಬ್

Advertisements