ಪ್ರದೀಪ ಬೆಳಗಲ್ ಎಂದೇ ಗುರುತಿಸಿಕೊಂಡಿರುವ ಬಿ.ಎಮ್.ಪ್ರದೀಪಕುಮಾರ್ ಇವರ ಜನನ 1957 ಆಗಸ್ಟ್ 19 ಬಳ್ಳಾರಿಯಲ್ಲಿ. ಇವರ ತಂದೆಯವರಾದ ಬಿ.ಎಂ. ಮರುಳಸಿದ್ದಯ್ಯ ಸ್ವಾತಂತ್ರ್ಯ ಹೋರಾಟ ಮತ್ತು ಕನರ್ಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರದೀಪ್ ಓದಿದ್ದು ಬಿ.ಎಸ್ಸಿ.(ಕೃಷಿ). ಕಳೆದ 26 ವರ್ಷಗಳಿಂದ ಆಂಧ್ರ ಬ್ಯಾಂಕ್ನಲ್ಲಿ ಕೃಷಿ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಆಸಕ್ತಿ ಇತಿಹಾಸ ಹಾಗೂ ವಿಜ್ಞಾನ. `ಹೊಸತುಮಾಸಿಕದಲ್ಲಿ ಇವರ ಕೆಲವು ಲೇಖನಗಳು ಪ್ರಕಟವಾಗಿವೆ.

ಕನ್ನಡ ಪುಸ್ತಕಗಳೂ ಅಂತಜರ್ಾಲದಲ್ಲ್ಲಿ ಲಭ್ಯವಾಗಬೇಕೆಂಬ ಹಂಬಲದಿಂದ ಪ್ರಾರಂಭವಾದ “ಅರಿವು ಆನ್ ಲೈನ್” ಎಂಬ ಕನ್ನಡದ ಪ್ರಥಮ ಆನ್ಲೈನ್ ಪುಸ್ತಕ ಮಳಿಗೆಗೆ ಪ್ರೇರಕರು. ಹಲವಾರು ವರ್ಷಗಳಿಂದ ಸಮುದಾಯ ನಾಟಕ ರಂಗದಲ್ಲಿ ಬಳ್ಳಾರಿ, ರಾಯಚೂರುಗಳಲ್ಲಿ ಸಕ್ರಿಯ ಭಾಗೀದಾರರೂ ಕೂಡಾ.

Advertisements