ಪ್ರೊ.ಇರ್ಫಾನ್ ಹಬೀಬ್

ಭಾರತದ ಜನ ಇತಿಹಾಸ ಮಾಲೆಯ ಪುಸ್ತಕಗಳು ಕರ್ನಾಟಕದ ಇತಿಹಾಸ ವಿದ್ಯಾರ್ಥಿಗಳಿಂದ ಬಹಳ ಬೇಡಿಕೆಯಲ್ಲಿರುವ ಪುಸ್ತಕಗಳು. ಮೂಲ ಇಂಗ್ಲೀಷ್ ನಲ್ಲಿ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ ಪುಸ್ತಕ ಮಾಲೆಯನ್ನು ಅಲಿಗರ್ ಹಿಸ್ಟೋರಿಯನ್ ಸೊಸೈಟಿ ಪ್ರಕಟಿಸುತ್ತಿದೆ. ಈ ಸರಣಿಯಲ್ಲಿ ಇದುವರೆಗೆ 15 ಪುಸ್ತಕ ಪ್ರಕಟವಾಗಿದೆ. ಇನ್ನು 21 ಪುಸ್ತಕ ಪ್ರಕಟವಾಗಲಿದೆ. ಈಗಾಗಲೇ ಪ್ರಕಟವಾಗಿರುವ 15 ಪುಸ್ತಕಗಳಲ್ಲಿ ನಾವು ಈಗಾಗಲೇ 6 ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದು ಈಗ ಬಿಡುಗಡೆಯಾಗುತ್ತಿರುವ 3 ಪುಸ್ತಕಗಳನ್ನು ಸೇರಿಸಿದರೆ 9 ಪುಸ್ತಕ ಕನ್ನಡಕ್ಕೆ ಅನುವಾದವಾಗಿವೆ. ಇಂಗ್ಲೀಷ್ ನಲ್ಲಿ ಪ್ರಕಟವಾಗಿರುವ 15 ಪುಸ್ತಕಗಳಲ್ಲಿ ಉಳಿದ 6 ಪುಸ್ತಕ ಅನುವಾದದ ಹಂತದಲ್ಲಿದೆ.

ಈಗ ಬಿಡುಗಡೆಯಾಗುತ್ತಿರುವ ಪುಸ್ತಕಗಳು ಹೀಗಿವೆ,

ಪುಸ್ತಕ ಮಾಲಿಕೆ : ಭಾರತದ ಜನ ಇತಿಹಾಸ –  06; ಶೀರ್ಷಿಕೆ : ಮೌರ್ಯರ ನಂತರದ ಭಾರತ -ರಾಜಕೀಯ ಮತ್ತು ಆರ್ಥಿಕ ಇತಿಹಾಸ – ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಎಸ್.ಎನ್.ಸ್ವಾಮಿ

ಪುಸ್ತಕ ಮಾಲಿಕೆ : ಭಾರತದ ಜನ ಇತಿಹಾಸ –  07; ಶೀರ್ಷಿಕೆ : ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಭೈರಬಿ ಪ್ರಸಾದ್ ಸಾಹು ಕೇಶವನ್ ವೇಲುತಾಟ್; ಅನುವಾದಕರು : ಟಿ ವೆಂಕಟೇಶ ಮೂರ್ತಿ

ಶೀರ್ಷಿಕೆ : ಭಾರತದ ಆರ್ಥಿಕತೆ ಬ್ರಿಟಿಷ್ ಆಳ್ವಿಕೆಯ  ಪ್ರಾರಂಭಿಕ ಹಂತದಲ್ಲಿ 1757-1857; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಕೆ.ಎಮ್.ಲೋಕೇಶ್

ಈ ಮೂರೂ ಪುಸ್ತಕಗಳು ಮಾರ್ಚ್ 13, 2021 ಶನಿವಾರ ಸಂಜೆ 5:00 ರಿಂದ ZOOM ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಇತಿಹಾಸ ಆಸಕ್ತರು

ಈ ಪುಸ್ತಕಗಳನ್ನು ಬಿಡುಗಡೆಯನ್ನು ಸ್ವತಃ ಇಂಗ್ಲೀಷ್ ಪುಸ್ತಕ ಸರಣಿ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ ದ ಜನರಲ್ ಎಡಿಟರ್ ಹಾಗೂ ಸರಣಿಯ ಕೆಲವು ಪುಸ್ತಕಗಳ ಲೇಖಕರೂ ಆಗಿರುವ ಹೆಸರಾಂತ ಇತಿಹಾಸಜ್ಞ ಪ್ರೊ.ಇರ್ಫಾನ್ ಹಬೀಬ್ ನಡೆಸಿಕೊಟ್ಟು ಈ ಪುಸ್ತಕ ಸರಣಿಯ ಮಹತ್ವದ ಬಗ್ಗೆ ತಿಳಿಸಿಕೊಡಲಿದ್ದಾರೆ.

ಆಸಕ್ತರು ಈ ಕೆಳಗಿನ ಕೊಂಡಿಯ ಮೇಲೆ ಚಿಟಿಕೆ ಹೊಡೆದು ನಡೆಯಲಿರುವ ವೆಬಿನಾರ್ ಗೆ ಹೆಸರು ನೊಂದಾಯಿಸಬಹುದು

https://us02web.zoom.us/meeting/register/tZ0pcuuvpjMrHNZS91gr6zEpE29Wk4v1ZJsq

ಪುಸ್ತಕ ಮಾಲಿಕೆ : ಭಾರತದ ಜನ ಇತಿಹಾಸ –  06; ಶೀರ್ಷಿಕೆ : ಮೌರ್ಯರ ನಂತರದ ಭಾರತ -ರಾಜಕೀಯ ಮತ್ತು ಆರ್ಥಿಕ ಇತಿಹಾಸ – ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಎಸ್.ಎನ್.ಸ್ವಾಮಿ; ಬೆಲೆ :ರೂ.140; ಪ್ರಕಟಣಾ ವರ್ಷ:2020;

ಪುಸ್ತಕ ಮಾಲಿಕೆ : ಭಾರತದ ಜನ ಇತಿಹಾಸ –  07; ಶೀರ್ಷಿಕೆ : ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಭೈರಬಿ ಪ್ರಸಾದ್ ಸಾಹು ಕೇಶವನ್ ವೇಲುತಾಟ್; ಅನುವಾದಕರು : ಟಿ ವೆಂಕಟೇಶ ಮೂರ್ತಿ; ಬೆಲೆ :ರೂ.90; ಪ್ರಕಟಣಾ ವರ್ಷ:2020

ಪುಸ್ತಕ ಮಾಲಿಕೆ : ಭಾರತದ ಜನ ಇತಿಹಾಸ –  25; ಶೀರ್ಷಿಕೆ : ಭಾರತದ ಆರ್ಥಿಕತೆ ಬ್ರಿಟಿಷ್ ಆಳ್ವಿಕೆಯ  ಪ್ರಾರಂಭಿಕ ಹಂತದಲ್ಲಿ 1757-1857; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಕೆ.ಎಮ್.ಲೋಕೇಶ್; ಬೆಲೆ :ರೂ.140; ಪ್ರಕಟಣಾ ವರ್ಷ:2020

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೊಡಲ್ಪಡುವ ಪಿ ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ* 2016 ನೇ ಸಾಲಿನಲ್ಲಿ ಚಿಂತನ ಪುಸ್ತಕ ಪ್ರಕಟಿಸಿರುವ ಎಸ್. ಶಿವಾನಂದ ಅವರು ಬರೆದಿರುವ `ಸಾಹಿತ್ಯ ಮತ್ತು ಸಾಹಿತ್ಯೇತರ’ ಪುಸ್ತಕಕ್ಕೆ ದೊರಕಿದೆ.

*       ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀಮತಿ ಮಾಲತಿ ನಾಡಿಗ ಅವರು ದಿ. ಪಿ. ಶ್ರೀನಿವಾಸರಾವ್ ಅವರ ಹೆಸರಿನಲ್ಲಿ ಅಕಾಡೆಮಿಗೆ ರೂ 50,000 (ಐವತ್ತು ಸಾವಿರಗಳು ಮಾತ್ರ) ಮೊಬಲಗನ್ನು ದತ್ತಿನಿಧಿಯಾಗಿ ನೀಡಿದ್ದಾರೆ. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ರೂ 5,000 ಮೊಬಲಗನ್ನು `ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ `ಸಾಹಿತ್ಯ ವಿಮರ್ಶೆ’ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ `ಪುಸ್ತಕ ಬಹುಮಾನ ಯೋಜನೆ’ ಯಲ್ಲಿಯ 8ನೇ ಸಾಹಿತ್ಯ ಪ್ರಕಾರವಾದ `ಸಾಹಿತ್ಯ ವಿಮರ್ಶೆ’ಯೇ ಆಗಿರುತ್ತದೆ. ಈ ಬಹುಮಾನವನ್ನು `ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ’ ಎಂದು ಕರೆಯಲಾಗುವುದು.

ಈ ಪುಸ್ತಕದ ಕುರಿತು :

ಶೀರ್ಷಿಕೆ : ಸಾಹಿತ್ಯ ಮತ್ತು ಸಾಹಿತ್ಯೇತರ ಲೇಖಕರು : ಎಸ್.ಶಿವಾನಂದ ಪ್ರಕಾಶಕರು: ಚಿಂತನ ಪುಸ್ತಕ ಪ್ರಕಟಣಾ ವರ್ಷ: 2016 ಪುಟಗಳು:300 ಬೆಲೆ:ರೂ.230/-

ದಲಿತ-ಬಂಡಾಯ ಸಾಹಿತ್ಯ ವಿಮರ್ಶೆಗೆ ಬೇಕಾದ ಹಾದಿಯನ್ನು ರೂಪಿಸಿದ ಪ್ರಮುಖರಲ್ಲಿ ಎಸ್.ಶಿವಾನಂದ ಒಬ್ಬರು. ೧೯೯೧ ರಲ್ಲಿ ಪ್ರಕಟವಾದಾಗ ಸಂಚಲನ ಮೂಡಿಸಿದ ಶಿವಾನಂದ ಅವರ ‘ವಿಮರ್ಶೆಯ ಸವಾಲು’ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ಚಿಂತನ ಪುಸ್ತಕ ಪ್ರಕಟಿಸಿತ್ತು.  ವಿಮರ್ಶೆಯ ಪ್ರಾಕಾರದಲ್ಲಿ ಇದು ಅವರ ಎರಡನೇ ಕೃತಿ. ಇದು ಅವರು ಕಳೆದ ಕಾಲು ಶತಮಾನದಲ್ಲಿ ಆಗಾಗ ಬರೆದ ಹಲವು ಲೇಖನಗಳ ಸಂಗ್ರಹ.

ಶಿವಾನಂದ್ ಅವರ ವಿಮರ್ಶಾತ್ಮಕ ಲೇಖನಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾದದ್ದಲ್ಲ. ಕಳೆದ ಕೆಲವು ದಶಕಗಳಿಂದ ಬಹುಚರ್ಚಿತ ವಿಷಯವಾದ ‘ಸೆಕ್ಯುಲರ್ ವಾದ’, ‘ಆಧುನಿಕೋತ್ತರ ವಾದ’, ‘ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ರಾಜಕೀಯ ಮೌಲ್ಯಗಳು’ ಇವೇ ಮುಂತಾದವುಗಳ ಕುರಿತಾದ ವಿಮರ್ಶಾ ಲೇಖನಗಳನ್ನು ಇವರು ಬರೆದಿದ್ದಾರೆ. ಆದ್ದರಿಂದಲೇ ಈ ಪುಸ್ತಕ ಬರಿಯ ಕನ್ನಡ ಸಾಹಿತ್ಯ ವಿಮರ್ಶಾ ಕೃತಿಯಲ್ಲ. ಶೀರ್ಷಿಕೆ ಹೇಳುವಂತೆ ಇದು ‘ಸಾಹಿತ್ಯ ಮತ್ತು ಸಾಹಿತ್ಯೇತರ’ ವಿಮರ್ಶೆಗಳ ಸಂಗ್ರಹ.

ಈ ಪುಸ್ತಕಕ್ಕೆ ಮುನ್ನುಡಿಯನ್ನು ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರು, ವಿಮರ್ಶಕರು, ಲೇಖಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಲೇಖಕರು ಆದ ರಹಮತ್ ತರೀಕೆರೆಯವರು ಬರೆದಿದ್ದಾರೆ.

 

 

 

 

ಕೃಪೆ : ವಿಶ್ವ ವಾಣಿ

ಕೃಪೆ : ಕನ್ನಡಪ್ರಭಾ ವಾರ್ತೆ : ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ: ವಿಶೇಷ ಅವಶ್ಯಕತೆ ಇರುವ ಮಕ್ಕಳು ಸಹ ಉನ್ನತ ಸಾಧನೆ ಮಾಡಬಲ್ಲವರಾಗಿದ್ದಾರೆ. ಆದರೆ, ಇವರಿಗೆ ಇತರೆ ಮಕ್ಕಳಿಗಿಂತಲೂ ಹೆಚ್ಚಿನ ಸಹಕಾರ ಹಾಗೂ ಸೌಲಭ್ಯಗಳನ್ನು ಪೋಷಕರು ಹಾಗೂ ಸಮುದಾಯದಿಂದ ದೊರೆಯಬೇಕಾಗಿದೆ ಎಂದು ಮಹಿಳಾ ತಜ್ಞ ವೈದ್ಯೆ ಡಾ.ಆರ್‌.ಇಂದಿರಾ ಹೇಳಿದರು.

ನಗರದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ವತಿಯಿಂದ 2016ನೇ ಸಾಲಿನ ರಾಜ್ಯ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪಡೆದಿರುವ “21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು’ ಕೃತಿಯ ಲೇಖಕಿ ಚಂಪ ಜೈಪ್ರಕಾಶ್‌ ಅವರ ಅಭಿನಂದನಾ ಸಮರಂಭ ಹಾಗೂ ಪುಸ್ತಕ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.

ಗರ್ಭಿಣಿಯರು ಶಾಂತಿಯಿಂದ ಇರಲು ಹಾಗೂ ಪೌಷ್ಟಿಕ ಆಹಾರ ಸೇವೆನೆ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಇವತ್ತಿನ ಒತ್ತಡದ ಆಧುನಿಕ ಬದುಕಿನಲ್ಲಿ ಯಾವ ವಯಸ್ಸಿನಲ್ಲಿ ವಿವಾಹ ಆಗುವ ಮಹಿಳೆಗೆ ಹುಟ್ಟುವ ಮಕ್ಕಳಿಗೂ 21ನೇ ಕ್ರೋಮೋಜೋಮ್‌ ಸಮಸ್ಯೆ ಎದುರಾಗಿ ಮಕ್ಕಳು ಬುದ್ಧಿಮಾಂಧ್ಯ ಅಥವಾ ಇತರೆ ನ್ಯೂನತೆಗೆ ಒಳಗಾಗಬಹುದು. ಇಂತಹ ಮಕ್ಕಳನ್ನು ಪೋಷಣೆ ಮಾಡಲು ತಂದೆ, ತಾಯಿಗೆ ಮಾನಸಿಕವಾಗಿ ಇತರರು ಬೆಂಬಲ ನೀಡಬೇಕು ಎಂದು ಹೇಳಿದರು.

ವಿಶೇಷ ಅವಶ್ಯಕತೆ ಇರುವ ಮಕ್ಕಳನ್ನು ಸಾಕುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಇದನ್ನು ಹೊರೆಯೆಂದು ಭಾವಿಸಿ ಮನೆಯಲ್ಲಿಯೇ ಕೂಡಿಹಾಕಿಕೊಂಡು ಸಾಕಲು ಮುಂದಾದರೆ ಅಂತಹ ಮಗು ಮತ್ತಷ್ಟು ಮಾನಸಿಕವಾಗಿ ಕುಂಠಿತವಾಗುತ್ತದೆ. ವಿಶೇಷ ಅವಶ್ಯಕತೆ ಇರುವ ಮಕ್ಕಳ ಪೋಷಕರು ನೆರೆಹೊರೆಯವರ ಮುಂದೆ ಇಂತಹ ಮಗುವನ್ನು ಕರೆದುಕೊಂಡು ಹೋಗುವುದು ಹೇಗೆ ಎನ್ನುವ ಹಿಂಜರಿಕೆಯಿಂದ ಪೋಷಕರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟರೆ ಅಂತಹ ಮಗುವಿನ ಮಾನಸಿಕ ಬೆಳವಣಿಗೆ ಮತ್ತಷ್ಟು ಹಾಳಾಗುತ್ತದೆ ಎಂದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಕನ್ನಡ ಉಪನ್ಯಾಸಕ ಪಿ.ಗೋವಿಂದರಾಜು, ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷ ಅವಶ್ಯಕತೆ ಇರುವ ಮಕ್ಕಳ  ತೊಂದರೆ, ಅವರನ್ನು ಸಾಕಿ ಸಲಹುವ ವಿವರಗಳನ್ನು ಒಳಗೊಂಡಿರುವ ಕೃತಿಗಳಲ್ಲಿ ಇದು ಪ್ರಥಮವಾಗಿದೆ.

ವಿಶೇಷ ಅವಶ್ಯಕ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸದೆ ಮೂಢನಂಬಿಕೆಯಲ್ಲಿಯೇ ಕಾಲಹರಣ ಮಾಡುತ್ತಾರೆ. ಇದರಿಂದಾಗಿ ಗುಣಮುಖ ಆಗುವಂತಹ ಸಾಧ್ಯತೆ ಇರುವ ಮಕ್ಕಳು ಸಹ ಸೂಕ್ತ ಚಿಕಿತ್ಸೆ ದೊರೆಯದೆ ಬುದ್ಧಿಮಾಂದ್ಯ ಮಕ್ಕಳಾಗಿಯೇ ಉಳಿಯುವಂತಾಗುತ್ತಿದೆ. ಥಾಮಸ್‌ಅಲ್ವಾಎಡಿಸನ್‌ ಅವರ ತಾಯಿಯಂತೆ ಮಕ್ಕಳನ್ನು ಸಾಕಾಣಿಕೆ ಮಾಡುವ ಪೋಷಕರ ಅವಶ್ಯಕತೆ ಇದೆ ಎಂದರು.

21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು ಕೃತಿಯ ಲೇಖಕಿ ಚಂಪ ಜೈಪ್ರಕಾಶ್‌ ಮಾತನಾಡಿ, ಮಹಾರಾಷ್ಟ್ರ, ತಮಿಳುನಾಡು ಮತ್ತಿತರೆ ಕಡೆಗಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ವೃತ್ತಿ ಬದುಕಿನಲ್ಲಿ ಕಂಡುಕೊಂಡ ಸತ್ಯಗಳನ್ನು ಬರಹದ ಮೂಲಕ ಪೋಷಕರಿಗೆ ಅನುಕೂಲವಾಗುವ ರೀತಿಯಲ್ಲಿ ತಿಳಿಸಿದ್ದೇನೆ. ವಿಶೇಷ ಅವಶ್ಯಕತೆ ಇರುವ ತಮ್ಮ ಮಕ್ಕಳು ಯಶಸ್ವಿಯಾಗುವತ್ತ ಮುನ್ನಡೆಯುವಂತೆ ಮಾಡಲು ಈ ಪುಸ್ತಕ ಸಹಕಾರಿಗಲಿದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಜಾnನ ಪರಿಷತ್‌ ರಾಜ್ಯ ಉಪಾಧ್ಯಕ್ಷ ಡಾ.ಹುಲಿಕಲ್‌ ನಟರಾಜ್‌ ವಹಿಸಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ಸಂಚಾಲ ಕೆ.ಎಸ್‌.ಪ್ರಭಾ ಹಾಜರಿದ್ದರು.

ಕೃಪೆ : ಉದಯವಾಣಿ

ತಮಗೆ ತಿಳಿದಿರುವಂತೆ ‘ಚಿಂತನ ಪುಸ್ತಕ’ ಕನ್ನಡದಲ್ಲಿ ಪ್ರಗತಿಪರ ಆಶಯದ ಪುಸ್ತಕಗಳ ಪ್ರಕಾಶನದಲ್ಲಿ ಹಲವು ವರ್ಷಗಳಿಂದ ತೊಡಗಿದ್ದು, ಈವರೆಗೆ ಸುಮಾರು 72 ಪುಸ್ತಕಗಳನ್ನು ಪ್ರಕಟಿಸಿದೆ.

ಈ ನಿಟ್ಟಿನಲ್ಲಿ ಚಂಪಾ ಜೈಪ್ರಾಕಾಶ್ ಅವರು ಬರೆದ `21st Chromosome and other narratives’ ಒಂದು ವಿಶಿಷ್ಟ ಕಥನ ಸಂಕಲನ. ಈ ಹಿಂದೆ ನಾವು ಪ್ರಕಟಿಸಿದ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಮಧುರಚೆನ್ನ ದತ್ತಿನಿಧಿ ಪ್ರಶಸ್ತಿ’ ಪಡೆದ  ಕನ್ನಡದಲ್ಲಿ ಪ್ರಕಟವಾದ ‘೨೧ನೇ ಕ್ರೋಮೋಜೋಮ್ ಮತ್ತು ಇತರೆ ಕಥನಗಳು’ ಪುಸ್ತಕದ ಇಂಗ್ಲೀಷ್ ಅನುವಾದ ಇದು.

ಇದು ಮೂರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಮಾನಸಿಕ ಬೆಳವಣಿಗೆಯ ಸಮಸ್ಯೆ ಇರುವ ಮಕ್ಕಳ ಮತ್ತು ಅವರ ಪೋಷಕರ ನಡುವೆ ಕೆಲಸ ಮಾಡಿದ ಮನೋಶಾಸ್ತ್ರಜ್ಞೆಯ ಐದು ಅನುಭವ ಕಥನಗಳ ಸಂಕಲನ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು 08.07.2017 ರಂದು ಮಧ್ಯಾಹ್ನ 4:00  ಗಂಟೆಗೆ ಎಸ್.ಸಿ.ಎಂ. ಹೌಸ್, ಬೆಂಗಳೂರು ಇಲ್ಲಿ ನಡೆಸುವುದೆಂದು ನಿರ್ಧರಿಸಿದ್ದೇವೆ.

ತಮಗೆಲ್ಲರಿಗೂ ಆದರದ ಆಹ್ವಾನ.

ತಮಗೆಲ್ಲರಿಗೂ ಆದರದ ಆಹ್ವಾನ.

ಸಿನಿಮಾ ಬರಹಗಾರ ವಿ.ಎನ್‌. ಲಕ್ಷ್ಮೀನಾರಾಯಣ ಇಲ್ಲಿ ತಮ್ಮ ಸಿನಿಮಾ ರಸಗ್ರಹಣ ಬರಹಗಳ ಜೊತೆಗೆ ಸಿನಿಮಾ ವಿಶ್ಲೇಷಣೆ – ವಿಮರ್ಶೆಯ ಲೇಖನಗಳನ್ನು ‘ಎರಡು ಕಣ್ಣು ಸಾಲದು’ ಪುಸ್ತಕದಲ್ಲಿ ಸಂಕಲಿಸಿದ್ದಾರೆ.

ಈ ಪುಸ್ತಕದ ಮೊದಲ ಭಾಗದಲ್ಲಿ ಸಿನಿಮಾಗಳನ್ನು ಆಸ್ವಾದಿಸುವ ಹಾಗೂ ಅದರ ವ್ಯಾಕರಣವನ್ನು ವಿಶ್ಲೇಷಣೆ ಮಾಡುವ ಬರಹಗಳಿವೆ. ಸಿನಿಮಾದ ಶಕ್ತಿಯನ್ನು, ಅದನ್ನು ಓದುವ, ಕೇಳುವ, ನೋಡುವ ಬಗೆಯನ್ನು ಅವರ ಬರಹಗಳು ಓದುಗರಿಗೆ ಮನಗಾಣಿಸುತ್ತವೆ. ಸಿನಿಮಾದ ಗಂಭೀರ ವಿದ್ಯಾರ್ಥಿಯೊಬ್ಬನ ನುಡಿನೋಟಗಳು ಇಲ್ಲಿನ ಬರಹಗಳಲ್ಲಿ ಅಡಕವಾಗಿವೆ.

ಪುಸ್ತಕದ ಎರಡನೇ ಭಾಗವು ಮಹತ್ವದ ಸಿನಿಮಾಗಳ ವಿಮರ್ಶಾತ್ಮಕ ಬರಹಗಳಾಗಿವೆ. ಭಾರತೀಯ ಹಾಗೂ ಕನ್ನಡ ಸಿನಿಮಾಗಳ ಕುರಿತ ಬರಹಗಳೂ ಇದರಲ್ಲಿ ಸೇರಿವೆ.

ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನೇರಿ’, ಅಲ್ಬರ್ಟ್ಲಿ ಮೋರಿಸ್‌ನ ‘ದ ರೆಡ್‌ ಬಲೂನ್‌’, ಕೃಪಾಕರ–ಸೇನಾನಿ ನಿರ್ದೇಶನದ ಸಾಕ್ಷ್ಯಚಿತ್ರ ‘ವೈಲ್ಡ್‌ ಡಾಗ್‌ ಡೈರೀಸ್‌’, ಆನಂದ್‌ ಪಟವರ್ಧನ್‌ ಅವರ ‘ಜೈ ಭೀಮ್ ಕಾಮ್ರೇಡ್‌’ – ಇವು ಲೇಖಕರು ವಿಶ್ಲೇಷಣೆ ಮಾಡಿರುವ ಕೆಲವು ಸಿನಿಮಾಗಳು. ಸಿನಿಮಾ ಕಲೆಯ ಮಾಂತ್ರಿಕ ಗುಣಗಳ ಹುಡುಕಾಟ ಇಲ್ಲಿನ ಬರಹಗಳ ಸ್ವರೂಪವನ್ನು ನಿರ್ಧರಿಸಿದೆ.

ಕೃಪೆ : ಪ್ರಜಾವಾಣಿ