ನಾವು ಹಲವು ವರ್ಷಗಳಿಂದ ಉತ್ತಮ ಅಭಿರುಚಿಯ, ಜನಪರ-ಪ್ರಗತಿಪರ ಆಶಯ ಮತ್ತು ಮೌಲ್ಯಗಳನ್ನು ಬಿಂಬಿಸುವ ಪುಸ್ತಕಗಳ ಪ್ರಕಾಶನದಲ್ಲಿ ತೊಡಗಿದ್ದೇವೆ. ಇದಕ್ಕಾಗಿ ‘ಚಿಂತನ‘ ಎಂಬ ಸಂಸ್ಥೆ ಸ್ಥಾಪಿಸಿ ಕೆಲಸ ಮಾಡುತ್ತಿದ್ದೇವೆ. ಅದನ್ನು ದೊಡ್ಡ ಪ್ರಮಾಣದಲ್ಲಿ ಪ್ರಬಲವಾದ ಸಂಸ್ಥೆಯಾಗಿ ಬೆಳೆಸಿ ಜನಪರ-ಪ್ರಗತಿಪರ ಕೃತಿಗಳ ರಚನೆ-ಪ್ರಕಾಶನ, ಮತ್ತು ಕನರ್ಾಟಕದ ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಾ ಬಂದಿದ್ದೇವೆ. ಆ ಹಾದಿಯಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿ, ಕನಸನ್ನು ನನಸು ಮಾಡಲು ಭರದ ಸಿಧ್ಧತೆ ನಡೆಸುತ್ತಿದ್ಧೇವೆ. ಈ ನಡುವೆ ಕರ್ನಾಟಕದ ಸಾಂಸ್ಕೃತಿಕ ಲೋಕದ ಹರವು ಮತ್ತು ಸವಾಲುಗಳು ಇನ್ನಷ್ಟು ಹೆಚ್ಚಿವೆ.
1. ಕನರ್ಾಟಕದ ಬದುಕಿನಲ್ಲಿ ಜನ-ಪರ, ಪ್ರಗತಿಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉತ್ತಮ ಅಭಿರುಚಿಯ ಕೃತಿಗಳ ರಚನೆ, ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.
2. ಕನ್ನಡ ಪುಸ್ತಕ ಪ್ರಕಾಶನ ಲೋಕವನ್ನು ಪುಸ್ತಕಗಳ ವಿಷಯ, ಶೈಲಿ, ಮುದ್ರಣ, ವಿನ್ಯಾಸಗಳಲ್ಲಿ ಇನ್ನಷ್ಟು ಹೊಸ, ಸಾಮಯಿಕ ಮತ್ತು ಸೃಜನಶೀಲ ಬಳವಣಿಗೆಗಳಿಂದ ಶ್ರೀಮಂತಗೊಳಿಸುವುದು
3. ಕನ್ನಡದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳ ರಚನೆಯಲ್ಲಿ ತೊಡಗಿರುವ ಉದಯಮಾನ ಮತ್ತು ಪ್ರಭುದ್ದ ಲೇಖಕರನ್ನು ಪ್ರೋತ್ಸಾಹಿಸಿ ಅವರ ಕೃತಿಗಳು ಜನತೆಯನ್ನು ತಲುಪುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುವುದು
4. ಕನರ್ಾಟಕದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸುವ ಕೃತಿಗಳ ರಚನೆ, ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.
ಇವೇ ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊರಟ ನಮ್ಮ ಹಾದಿ ಹೆಜ್ಜೆಗಳನ್ನು ದಾಖಲಿಸಲು ಈ ಬ್ಲಾಗ್ ಪ್ರಯತ್ನಿಸುತ್ತದೆ.

